Site icon Vistara News

Har Ghar Tiranga | ಮನೆ ಮನೆಯಲ್ಲೂ ರಾಷ್ಟ್ರ ಧ್ವಜದ ರಂಗು; ಜೋಶಿ, ಈಶ್ವರಪ್ಪ, ಬಿವೈಆರ್‌ ಧ್ವಜಾರೋಹಣ

har gar tiranga

ಹುಬ್ಬಳ್ಳಿ/ ಶಿವಮೊಗ್ಗ/ದಾವಣಗೆರೆ: ಪ್ರತಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ರಂಗೇರಿದೆ. 75ರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ (Har Ghar Tiranga) ಅಭಿಯಾನ ಶನಿವಾರದಿಂದ ಶುರುವಾಗಿದೆ. ಇದರ ಪ್ರಯುಕ್ತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿಯ ಮಯೂರಿ ಎಸ್ಟೇಟ್‌ನಲ್ಲಿರುವ ಮನೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಕುಟುಂಬದವರೊಂದಿಗೆ ಈಶರಪ್ಪ ಹರ್‌ ಘರ್‌ ತಿರಂಗಾ

ಶಿವಮೊಗ್ಗದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಜಿಲ್ಲಾ ಬಿಜೆಪಿ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದರು. ಜತೆಗೆ ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ನಿವಾಸದಲ್ಲೂ ಧ್ವಜಾರೋಹಣ ನೆರವೇರಿಸಿದರು. ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್, ಪತ್ನಿ ಜಯಲಕ್ಷ್ಮಿ ಸೇರಿದಂತೆ ಕುಟುಂಬ ಸದಸ್ಯರು ಸಾಥ್ ನೀಡಿದರು.

ಕುಟುಂಬದೊಂದಿಗೆ ಈಶ್ವರಪ್ಪ

ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗದ ವಿನೋಬ ನಗರದಲ್ಲಿ ಇರುವ ಮನೆ ಮೇಲೆ ಸಂಸದ ಬಿ.ವೈ. ರಾಘವೇಂದ್ರ ತ್ರಿವರ್ಣ ಧ್ವಜ ಹಾರಿಸಿದರು. ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಅವರ ಮನೆಯಲ್ಲೂ ಧ್ವಜ ಏರಿಸಲಾಯಿತು.

ಸಾಗರದಲ್ಲಿ ಶಾಸಕ ಎಚ್.ಹಾಲಪ್ಪ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದರು. ಪತ್ನಿ ಯಶೋಧ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಮೈತ್ರಿ ವೀರೇಂದ್ರ ಪಾಟೀಲ್, ವಿನಾಯಕ ರಾವ್ ಉಪಸ್ಥಿತರಿದ್ದರು.

ಅವಳಿ ತಾಲೂಕಿನಲ್ಲಿ ತ್ರಿವರ್ಣ ಹಾರಾಟ

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ದಾವಣಗೆರೆಯ ತಮ್ಮ ನಿವಾಸ ಹಾಗೂ ತುಂಗಭದ್ರಾ ಬಡಾವಣೆಯಲ್ಲಿ ಹರ್‌ಘರ್‌ ಅಭಿಯಾನಕ್ಕೆ ಚಾಲನೆ ನೀಡಿದರು. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 28,000 ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲಾಯಿತು.

ಇದನ್ನೂ ಓದಿ | Har Ghar Tiranga | ಆರ್‌ಎಸ್‌ಎಸ್ ಕಚೇರಿ ಕೇಶವಕೃಪಾ ಮೇಲೆ ತ್ರಿವರ್ಣ ಧ್ವಜಾರೋಹಣ

Exit mobile version