Site icon Vistara News

Har Ghar Tiranga | ಕುರಿಗಾಹಿಯ ಟೆಂಟ್‌ನಲ್ಲಿ ಹಾರಾಡಿತು ರಾಷ್ಟ್ರಧ್ವಜ

har gar tiranga

ಚಿಕ್ಕಮಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಡೆ ಪಸರಿಸಿದೆ. ಕೇಂದ್ರ ಸರ್ಕಾರ “ಹರ್‌ ಘರ್‌ ತಿರಂಗಾʼʼ(Har Ghar Tiranga) ಅಭಿಯಾನ ಆರಂಭಿಸಿರುವುದರಿಂದ ಮನೆ ಮನೆಯ ಮೇಲೂ ರಾಷ್ಟ್ರಧ್ವಜ ಹಾರಾಡುತ್ತಿದೆ.

ಇಲ್ಲಿನ ಕಡೂರು ತಾಲೂಕಿನ ಪಂಚನಹಳ್ಳಿಯ ತೋಟವೊಂದರಲ್ಲಿ ಕುರಿಗಾಹಿಯೊಬ್ಬರು ತಮ್ಮ ಪುಟ್ಟ ಟೆಂಟ್‌ನಲ್ಲಿಯೇ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಚಿತ್ರದುರ್ಗ ಮೂಲದ ಕುರಿಗಾಹಿಯ ದೇಶಪ್ರೇಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೋಟದ ಟೆಂಟ್‌ನಲ್ಲೇ ಬಾವುಟ ಹಾರಿಸಿ ʼʼಹರ್ ಘರ್ ತಿರಂಗಾʼʼ ಅಭಿಯಾನದಲ್ಲಿ ಭಾಗಿಯಾಗಿರುವ ಫೋಟೋ ಈಗ ವೈರಲ್‌ ಆಗಿದೆ. ಊರೂರು ಅಲೆಯುತ್ತಾ ಕುರಿಕಾಯುವ ಇವರ ದೇಶ ಪ್ರೇಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇಳಿವಯಸ್ಸಿನಲ್ಲಿಯೂ ಧ್ವಜಾರೋಹಣ

ನಿಲ್ಲಲಾಗದ ಸ್ಥಿತಿಯಲ್ಲೂ ಹಿರಿಯ ನಾಗರಿಕರಿಂದ ಧ್ವಜಾರೋಹಣ

ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಯಲುಗಾರ್‌ನ ಭವಾನಿ ಎಂಬುವರುತಮ್ಮ ೮೫ರ ಇಳಿವಯಸ್ಸಿನಲ್ಲಿಯೂ ಧ್ವಜಾರೋಹಣ ನೆರವೇರಿಸಿದ್ದಾರೆ. ನಿಲ್ಲಲಾಗದ ಸ್ಥಿತಿಯಲ್ಲೂ ಎದ್ದು ನಿಂತು ರಾಷ್ಟ್ರ ಧ್ವಜಕ್ಕೆ, ರಾಷ್ಟ್ರ ಗೀತೆಗೆ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ | Har Ghar Tiranga Haveri | ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಮೋದಿಗೆ ಪತ್ರ ಬರೆದ 4 ವರ್ಷದ ಪೋರಿ

Exit mobile version