ಬೆಂಗಳೂರು: ದೇಶಾದ್ಯಂತ ಶನಿವಾರ ʻಹರ್ ಘರ್ ತಿರಂಗಾʼ ಸಂಭ್ರಮ ʻಮನೆʼ ಮಾಡಿತ್ತು. ಜನರು ಜಾತಿ, ಧರ್ಮ, ಮತಗಳನ್ನು ಮೀರಿ ಭಾರತೀಯರೆಂಬ ಭಕ್ತಿಯಿಂದ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಏರಿಸಿ ಸಂಭ್ರಮಿಸಿದರು. ವಿಧಾನಸೌಧದಿಂದ ಹಿಡಿದು ಪಂಚಾಯಿತಿ ಕಚೇರಿವರೆಗೆ ಎಲ್ಲ ಸರಕಾರಿ ಕಟ್ಟಡಗಳಲ್ಲಿ ತ್ರಿವರ್ಣ ಸಂಭ್ರಮವಿತ್ತು. ಮನೆ ಮನೆಗಳಲ್ಲಿ ತಿರಂಗಾ ಅಲಂಕಾರವಿತ್ತು. ರಾಜಕಾರಣಿಗಳಿಂದ ಶುರುವಾಗಿ ಜನಸಾಮಾನ್ಯರೆಲ್ಲ ಉತ್ಸವದಲ್ಲಿ ಪಾಲ್ಗೊಂಡರು. ಧಾರ್ಮಿಕ ಕೇಂದ್ರಗಳೂ ತ್ರಿವರ್ಣ ಸಂಭ್ರಮದಲ್ಲಿ ಪಾಲ್ಗೊಂಡವು. ಇಲ್ಲಿ ಅಂತ ಸಂಭ್ರಮದ ಕೆಲವು ಚಿತ್ರಗಳಿವೆ.
ಹರ ಧ್ಯಾನ ಮಂದಿರದ ಶಿಖರದಲ್ಲಿ ತಿರಂಗಾ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರಿಹರ ಹರಕ್ಷೇತ್ರ ಪಂಚಮಸಾಲಿ ಜಗದ್ಗುರು ಪೀಠದ ಹರ ಧ್ಯಾನ ಮಂದಿರದ ಶಿಖರದಲ್ಲಿ ರಾಷ್ಟ್ರದ್ವಜವು ಹಾರುತಿರುವ ದೃಶ್ಯ.
ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಪವಿತ್ರ ಧ್ವಜಾರೋಹಣ
ಉ.ಕ ಜಿಲ್ಲೆಯ ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಪವಿತ್ರ ಧ್ವಜಾರೋಹಣ ನಡೆಸಿ ಧ್ವಜ ವಂದನೆ ಸಲ್ಲಿಸಲಾಯಿತು. ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವಕರ್, ಗ್ರಾ.ಪಂ.ಸದಸ್ಯೆ ಕುಮದ್ವತಿ ಗುಡಿಗಾರ, ಲಕ್ಷ್ಮೀನಾರಾಯಣ ಭಟ್ಟ ಕಳಚೆ ಮತ್ತಿತರರು ಭಾಗವಹಿಸಿದ್ದರು.
ಗೋಕಾಕದ ಮಸೀದಿಯ ಮೇಲೆ ಹಾರಿತು ಗೌರವದ ಬಾವುಟ
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಅಂಬೇಡ್ಕರ್ ಗಲ್ಲಿಯಲ್ಲಿರುವ ಈದ್ಗಾ ಮಸೀದಿಯ ಮೇಲೆ ಮುಸ್ಲಿಂ ಬಾಂಧವರು ಧ್ವಜ ಹಾರಿಸಿ ಗೌರವ ಸಲ್ಲಿಸಿದರು.
ಜಾತ್ರೆಯ ಸಂಭ್ರಮಕ್ಕೆ ಜತೆಯಾಯಿತು ತ್ರಿವರ್ಣ ಧ್ವಜ
ಬಸವಣ್ಣನವರ ಜನ್ಮ ಸ್ಥಳವಾದ ಬಸವನಬಾಗೇವಾಡಿ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರ ಜಾತ್ರೆಯ ನಡುವೆಯೇ ನೂರಾರು ಮಂದಿ ದೇಶದ ಧ್ವಜವನ್ನು ಎತ್ತಿ ಹಿಡಿದು ಗೌರವ ಸಲ್ಲಿಸಿದರು.
ಇದನ್ನೂ ಓದಿ| Har Ghar tiranga Shimogga| ತಿರಂಗಾ ಮೆರವಣಿಗೆಯಲ್ಲಿ ಮನೆ ಮನೆಗೂ ತೆರಳಿ ಗಮನ ಸೆಳೆದ ದನದ ಕರು!