ಹಾವೇರಿ/ ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯಂತೆ ದೇಶಾದ್ಯಂತ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅರಳಿದೆ. ಹಾಗಿದ್ದರೆ ಮನೆಯೇ ಇಲ್ಲದವರು ಏನು ಮಾಡಬೇಕು? ಈ ಬಾರಿ ಬಿದ್ದ ಭಾರಿ ಮಳೆ, ಪ್ರವಾಹ, ಗುಡ್ಡೆ ಕುಸಿತಗಳಿಂದ ತೊಂದರೆಗೆ ಒಳಗಾಗಿ ಮನೆ ಮಠ ಕಳೆದುಕೊಂಡವರು ಏನು ಮಾಡಬೇಕು? ಹೀಗಂತ ಎಲ್ಲರೂ ಯೋಚಿಸುತ್ತಿರುವಾಗಲೇ ಕೆಲವು ಕಡೆ ಜನರು ಕುಸಿದ ಮನೆಯ ಅವಶೇಷಗಳ ಮೇಲೆಯೇ ತ್ರಿವರ್ಣ ಧ್ವಜ ಹಾರಿಸಿ ದೇಶ ಮೊದಲು ಎನ್ನುವುದನ್ನು ಸಾರಿದ್ದಾರೆ. ಹಾವೇರಿಯ ರಟ್ಟಿಹಳ್ಳಿಯ ರವೀಂದ್ರ ಮಡಿವಾಳ ಮತ್ತು ಆನಂದಪುರದ ಫಾತಿಮಾ ಅವರ ಈ ದೇಶ ಭಕ್ತಿಗೆ ಏನು ಹೇಳೋದು?
ಘಟನೆ ೧: ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕ್ಯಾತನಕೇರಿ ಗ್ರಾಮದ ರವಿಚಂದ್ರ ಮಡಿವಾಳರ ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಳೆಗೆ ಕುಸಿದು ಬಿದ್ದ ತಮ್ಮ ಮನೆಯ ಅವಶೇಷಗಳ ಮೇಲೆಯೇ ತ್ರಿವರ್ಣ ಧ್ವಜ ಹಾರಿಸಿ ದೇಶ ಪ್ರೇಮ ಮೆರೆದಿದ್ದಾರೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಇವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಇದೆ ಮನೆಯ ಮೇಲೆ ದ್ವಜ ಹಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಘಟನೆ ೨: ಶಿವಮೊಗ್ಗದ ಆನಂದಪುರ ಸಮೀಪದ ಅಚಾಪುರದ ಫಾತಿಮಾ ಬಿ ಎಂಬವರ ಮನೆ ಇತ್ತೀಚೆಗೆ ಸುರಿದ ಮಳೆಗೆ ಮುರಿದುಬಿದ್ದಿತ್ತು. ಒಂದು ಭಾಗವೇ ಕುಸಿದು ಒಳಗಿರಲೂ ಭಯವಾಗುವ ಪರಿಸ್ಥಿತಿ ಇದೆ. ಆದರೆ, ಫಾತಿಮಾಬಿ ಅವರು ಮಾತ್ರ ಉಳಿದ ಭಾಗದಲ್ಲೊಂದು ಧ್ವಜ ಸಿಕ್ಕಿಸಿದ್ದಾರೆ. ಇವರಿಗೆ ದೇಶಪ್ರೇಮದ ಕಥೆಗಳು ಗೊತ್ತಿಲ್ಲದೆ ಇರಬಹುದು. ಆದರೆ, ಮೂರು ಬಣ್ಣಗಳ ಈ ಧ್ವಜ ಅವರ ಹೃದಯದಲ್ಲಂತೂ ಇದೆ.
ಇದನ್ನೂ ಓದಿ| Har Ghar Tiranga | ಹೆತ್ತವರ ಸಾವಿನ ಶೋಕವಿದ್ದರೂ ತಿರಂಗಾ ಹಾರಿಸಿ ದೇಶ ಪ್ರೇಮ ಮೆರೆದ ಸೈನಿಕ, ಸಾಮಾಜಿಕ ಕಾರ್ಯಕರ್ತ