ಬೆಂಗಳೂರು : ದೇಶಾದ್ಯಂತ ‘ಹರ್ ಘರ್ ತಿರಂಗಾ ಅಭಿಯಾನ’ (Har Ghar Tiranga) ಆರಂಭವಾಗಿದೆ. ಸ್ವಾತಂತ್ರ್ಯ ಪಡೆದು 75ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದ ಅಂಗವಾಗಿ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ರಾಜ್ಯ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಗಿದೆ.
ಪ್ರಸ್ತುತ ದೇಶಾದ್ಯ೦ತ ಭಾರತ ಸ್ವಾತಂತ್ರ್ಯದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಭಾಗವಾಗಿ ಕೇಂದ್ರ ಸರ್ಕಾರವು “ಹರ್ ಫರ್ ತಿರಂಗಾ” ಎಂಬ ಘೋಷವಾಕ್ಯದೊಂದಿಗೆ 2022ರ ಆಗಸ್ಟ್ 13ರಿಂದ 15ರವರೆಗೆ ದೇಶದ ಪ್ರತಿಮನೆ-ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ನಮ್ಮ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸುವಂತೆ ಕರೆ ನೀಡಿದೆ. ಈ ಅಭಿಯಾನಕ್ಕೆ ಆರೆಸ್ಸೆಸ್ ನಾಯಕರು ಸಹ ಧ್ವಜಾರೋಹಣ ಮೂಲಕ ಸಾಥ್ ನೀಡಿದ್ದಾರೆ.
ಇದಕ್ಕೂ ಒಂದು ದಿನ ಮುಂಚಿತವಾಗಿ ಆರ್‌ಎಸ್‌ಎಸ್‌ನ ಅಧಿಕೃತ ಹಾಗೂ ಆರೆಸ್ಸೆಸ್‌ನ ಎಲ್ಲ ನಾಯಕರ ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಫೋಟೋಗಳಲ್ಲಿ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ, ಈ ಖಾತೆಗಳ ಡಿಪಿಗಳಲ್ಲಿ ಕೇಸರಿ ಧ್ವಜವಿತ್ತು. ಇದನ್ನು ಪ್ರತಿಪಕ್ಷಗಳ ಹಲವು ನಾಯಕರು ಟೀಕಿಸಿದ್ದರು. ನಾಗಪುರದ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಯಾಕೆ ಇದುವರೆಗೂ ತ್ರಿವರ್ಣ ಧ್ವಜಾರೋಹಣ ಮಾಡಿಲ್ಲ ಎಂದು ಕೆಲವು ಪ್ರತಿಪಕ್ಷ ನಾಯಕರು ಕೇಳಿದ್ದರು.
ಇದನ್ನೂ ಓದಿ | Amrit Mahotsav | ಹರ್ ಘರ್ ತಿರಂಗಾ ಅಭಿಯಾನ; ನಟ ಕಿಚ್ಚ ಸುದೀಪ್‌ಗೆ ತ್ರಿವರ್ಣ ಧ್ವಜ ನೀಡಿದ ಕಟೀಲ್