ದಾವಣಗೆರೆ: ಇಲ್ಲಿನ ಚನ್ನಗಿರಿ ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕನ ಮೇಲೆ ಲೈಂಗಿಕ ಕಿರುಕುಳ (Harassment) ಆರೋಪ ಕೇಳಿ ಬಂದಿದ್ದು, ಬಾಲಕಿಯ ಪೋಷಕರು ಮತ್ತು ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿದ್ದಾರೆ.
ಸರ್ಕಾರಿ ಶಾಲೆಯ ಶಿಕ್ಷಕ ಲೋಕೇಶ್ ಹೊದಿಗೆರೆ ಎಂಬಾತ ತರಗತಿ ಮುಗಿದ ಬಳಿಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಹಲವು ದಿನಗಳಿಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಶಾಲೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಶಾಲೆಗೆ ಬಂದ ಪೋಷಕರು ಹಾಗೂ ಗ್ರಾಮಸ್ಥರು ಶಿಕ್ಷಕನ ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚನ್ನಗಿರಿ ಬಿಇಒ ಮಂಜುನಾಥ್ ಭೇಟಿ ನೀಡಿ, ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಲೋಕೇಶ್ನನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲೈಂಗಿಕ ಕಿರುಕುಳ ಆರೋಪದಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | ಅಂಗಡಿಗೆ ತೆರಳಿದ್ದ ಮಹಿಳೆಗೆ ಯುವಕನಿಂದ ಲೈಂಗಿಕ ಕಿರುಕುಳ: ಹಿಂದೂ ಮುಖಂಡರಿಂದ ರಕ್ತಪಾತದ ಎಚ್ಚರಿಕೆ