Site icon Vistara News

Harihara News: ಪಾನಿಪೂರಿ ಸೇವಿಸಿ ಅಸ್ವಸ್ಥಗೊಂಡಿದ್ದ 6 ವರ್ಷದ ಬಾಲಕ ಸಾವು

Boy dies

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ (Harihara News) ಮಲೆಬೆನ್ನೂರಿನಲ್ಲಿ ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ 6 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ರಂಜಾನ್ ಹಬ್ಬದ ಹಿನ್ನೆಲೆ ಉಪವಾಸವಿದ್ದ ಮಕ್ಕಳು ಮಾರ್ಚ್‌ 15ರಂದು ಸಂಜೆ ಜಾಮಿಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದರು. ಬಳಿಕ 19 ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಜರತ್ ಬಿಲಾಲ್ ಬಿನ್ ಇರ್ಫಾನ್ (6) ಮೃತ ಬಾಲಕ. ಮಲೆಬೆನ್ನೂರಿನಲ್ಲಿ ಪಾನಿಪೂರಿ ಸೇವಿಸಿದ ಬಳಿಕ ವಾಂತಿ ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ 19 ಮಕ್ಕಳನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಒಬ್ಬ ಬಾಲಕ ಕೊನೆಯುಸಿರೆಳೆದಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಮೂವರು ಮಕ್ಕಳು ಚೇತರಿಸಿಕೊಂಡಿದ್ದಾರೆ.

ಮರದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಚಿಕ್ಕಬಳ್ಳಾಪುರ: ಮರದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 12 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದಲ್ಲಿ ನಡೆದಿದೆ. ದಿಬ್ಬೂರುಹಳ್ಳಿ ಮೂಲದ ದೇವಪ್ಪ (12) ಮೃತ ಬಾಲಕ. ಮರವೇರಿ ಮೇಕೆಗಳಿಗೆ ಸೊಪ್ಪು ಕಡಿಯುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿದೆ.

ಇದನ್ನೂ ಓದಿ | Cow Smugglers: ಗೋವುಗಳ ರಕ್ಷಣೆಗೆ ಚೇಸಿಂಗ್‌ ಮಾಡಿದ ಹಿಂದು ಕಾರ್ಯಕರ್ತರು

ಹಣ ಕದ್ದಳೆಂದು ಬಟ್ಟೆ ಬಿಚ್ಚಿಸಿ ಪರಿಶೀಲಿಸಿದ ಶಿಕ್ಷಕಿಯರು; ಮನನೊಂದ ವಿದ್ಯಾರ್ಥಿನಿ ನೇಣಿಗೆ ಶರಣು

ಬಾಗಲಕೋಟೆ: ಶಾಲೆಯಲ್ಲಿ 2 ಸಾವಿರ ರೂಪಾಯಿ ಕಳ್ಳತನವಾಗಿದೆ ಎಂದು ಶಿಕ್ಷಕಿಯರು ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದರಿಂದ ಮನನೊಂದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತಾಲೂಕಿನ ಕದಂಪುರ ಗ್ರಾಮದಲ್ಲಿ ನಡೆದಿದೆ.

ಕದಂಪುರ ಪ್ರೌಢಶಾಲೆ 8ನೇ ತರಗತಿಯ ದಿವ್ಯಾ ಬಾರಕೇರ(14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಶಾಲೆಯಲ್ಲಿ ಶಿಕ್ಷಕಿಯೊಬ್ಬರ 2 ಸಾವಿರ ರೂಪಾಯಿ ಕಳೆದುಹೋಗಿತ್ತು. ಹೀಗಾಗಿ ಸಂಶಯ ಬಂದ ಐವರು ವಿದ್ಯಾರ್ಥಿನಿಯರ ಸಮವಸ್ತ್ರ ಬಿಚ್ಚಿಸಿ ಶಿಕ್ಷಕಿಯರು ಪರಿಶೀಲಿಸಿದ್ದಾರೆ. ನಂತರ ಮನೆಗೆ ಹೋಗಿದ್ದ ವಿದ್ಯಾರ್ಥಿನಿ, ಘಟನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಕದಂಪುರ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಎಂಬುವವರ 2 ಸಾವಿರ ಹಣ ಮಾರ್ಚ್ 14 ರಂದು ಕಳೆದಿತ್ತು. ಆಗ ಕನ್ನಡ ಶಿಕ್ಷಕಿ ಜಯಶ್ರೀ ಹಾಗೂ ಮುಖ್ಯಶಿಕ್ಷಕ, ಇತರ ಶಿಕ್ಷಕರು ವಿದ್ಯಾರ್ಥಿನಿಯರ ಮೇಲೆ ಸಂಶಯ ಪಟ್ಟಿದ್ದರು. 10ನೇ ತರಗತಿಯ ನಾಲ್ವರು ಹಾಗೂ ಎಂಟನೇ ತರಗತಿಯ ದಿವ್ಯಾ ಮೇಲೆ ಸಂಶಯ ಪಟ್ಟಿದ್ದರು. ಹಣ ಯಾರು ಕಳ್ಳತನ ಮಾಡಿದ್ದೀರಿ ಕೊಡಿ ಎಂದು ಗದರಿಸಿದ್ದರು. ಸಾಲದೆಂಬಂತೆ ಸಮವಸ್ತ್ರ, ಬಿಚ್ಚಿಸಿ ಪರಿಶೀಲಿಸಿದ್ದಾರೆ. ಹಣ ಕೊಡದಿದ್ದರೆ ಟಿ.ಸಿ. ಕೊಟ್ಟು ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಅವಮಾನ ತಾಳದೆ ಎಂಟನೇ ತರಗತಿ ವಿದ್ಯಾರ್ಥಿನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ | Self Harming : ರಸ್ತೆ ಬದಿ ಲಾರಿ ನಿಲ್ಲಿಸಿ, ನೇಣಿಗೆ ಶರಣಾದ ಚಾಲಕ; ಆತ್ಮಹತ್ಯೆಗೆ ಯತ್ನಿಸಿದ ಅರ್ಚಕ

ಶಿಕ್ಷಕಿಯರು ಮಾಡಿದ ಅವಮಾನದಿಂದಲೇ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪಾಲಕರು ಆರೋಪಿಸಿದ್ದಾರೆ. ಸುಳ್ಳು ಆರೋಪಕ್ಕೆ ಬಾಲಕಿಯ ಜೀವ ಬಲಿಯಾಗಿದ್ದರಿಂದ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ದಿವ್ಯಾ ಸಾವಿಗೆ ಶಿಕ್ಷಕಿ ಜಯಶ್ರೀ ಅವರೇ ಕಾರಣ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬಾಲಕಿ ಚಿಕ್ಕಪ್ಪ ಪ್ರಕಾಶ್ ಆಗ್ರಹಿಸಿದ್ದಾರೆ. ಶಿಕ್ಷಕಿ ಜಯಶ್ರೀ ಆರೋಪ ಕೇಳಿ ಮುಖ್ಯ ಶಿಕ್ಷಕ ಕೆ.ಎಚ್. ಮುಜಾವರ, ವಿಜ್ಞಾನ ಶಿಕ್ಷಕಿ ರಾಜೇಶ್ವರಿ, ಶಿಕ್ಷಕಿ ಅಕ್ಕ ನಾಗಮ್ಮ, ಅಂಜಲಿ ಗೌಡರ ಸೇರಿ ಸಮವಸ್ತ್ರ ಬಿಚ್ಚಿಸಿ ಚೆಕ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಷ್ಟೇ ಅಲ್ಲದೆ ಹಣ ಕದ್ದಿಲ್ಲ ಎಂದು ವಿದ್ಯಾರ್ಥಿನಿಯರಿಂದ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ಹಾಗೂ ಮುಖ್ಯಶಿಕ್ಷಕ ಕೆ.ಎಚ್. ಮುಜಾವರ ಅವರು ದುರ್ಗಾದೇವಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿಸಿದ್ದಾರೆ. ಇದನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡ ದಿವ್ಯಾ ಬಾರಕೇರ ಶನಿವಾರ ಮಧ್ಯಾಹ್ನ 1.30ಕ್ಕೆ ಮನೆಯಲ್ಲಿ ಯಾರು ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ, ಶಿಕ್ಷಕಿ ಜಯಶ್ರೀ ಹಾಗೂ ಮುಖ್ಯ ಶಿಕ್ಷಕ ಕೆ ಹೆಚ್ ಮುಜಾವರ ವಿರುದ್ಧ ಬಾಗಲಕೋಟಿ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ | Murder Case : ತಾಯಿಯನ್ನು ಚುಡಾಯಿಸಿದವನ ಮನೆಗೆ ನುಗ್ಗಿ ಹೊಡೆದು ಕೊಂದ ಮಗ

ವಿದ್ಯಾರ್ಥಿನಿಯರನ್ನು ಅವಮಾನಿಸಿದ್ದರೆ ಕಠಿಣ ಕ್ರಮ

ಕಳವಾಗಿದೆ ಎಂದುಕೊಂಡಿದ್ದ ಹಣ ಮಾರನೇ ದಿನ ಶಾಲೆಯ ಲ್ಯಾಬ್‌ನಲ್ಲಿತ್ತು ಎನ್ನಲಾಗಿದೆ. ಆದರೆ, ವಿನಾಕಾರಣ ಸಂಶಯಪಟ್ಟು ಒಂದು ಜೀವ ಹೋಗಲು ಶಿಕ್ಷಕಿ ಕಾರಣರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಡಿಪಿಐ ಬಿ.ಕೆ. ನಂದನೂರು ಅವರು, ನನಗೆ ನೆನ್ನೆ ಸಂಜೆ ಈ ಬಗ್ಗೆ ಮಾಹಿತಿ ಬಂದಿದೆ. ಶಿಕ್ಷಕಿಯರು ವಿದ್ಯಾರ್ಥಿನಿಯರನ್ನು ಈ ರೀತಿ ಅವಮಾನ ಮಾಡಿದ್ದೇ ಆದರೆ ಖಂಡಿತ ಸಹಿಸೋದಕ್ಕೆ ಸಾಧ್ಯವಿಲ್ಲ. ನಾಳೆ ಅಧಿಕಾರಿಗಳನ್ನು ಶಾಲೆಗೆ ಕಳುಹಿಸಿ ಪರಿಶೀಲನೆ ನಡೆಸಿ ಕಠಿಣ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

Exit mobile version