Site icon Vistara News

Harrassment case : ಕಾಲೇಜಿನ ಲೇಡಿಸ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರು!

Sexual harrassement

ಉಡುಪಿ: ಕೆಲವು ತಿಂಗಳ ಹಿಂದೆ ದಿಲ್ಲಿಯ ಹಾಸ್ಟೆಲ್‌ ಒಂದರಲ್ಲಿ ಅಲ್ಲಿನ ವಿದ್ಯಾರ್ಥಿನಿಯೊಬ್ಬಳು ಸ್ನಾನದ ಮನೆಯಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಿಸಿ ಅದನ್ನು ತನ್ನ ಗೆಳೆಯನಿಗೆ ಕಳುಹಿಸುತ್ತಿದ್ದ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂತಹುದೇ ಒಂದು ಘಟನೆ ಉಡುಪಿಯ ಕಾಲೇಜೊಂದರಲ್ಲಿ (Harrassment in Udupi college) ಕೂಡಾ ನಡೆದಿದೆ. ಆದರೆ, ಇಲ್ಲಿ ವಿದ್ಯಾರ್ಥಿನಿಯರು (Girl students videographed in ladies toilet) ಕಳುಹಿಸಿದ ವಿಡಿಯೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಮಾಡಿದ (videos viral in social Media) ಭಯಾನಕ ವಿದ್ಯಮಾನವೂ ನಡೆದಿದೆ.

ಏನಿದು ದುಷ್ಟ ಜಾಲ?

ಉಡುಪಿಯಲ್ಲಿ ನೇತ್ರ ಜ್ಯೋತಿ ಎಂಬ ಕಾಲೇಜಿದೆ. ಈ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ ಮಾಡುವ ದಂಧೆಯೊಂದು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.

ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ಶೂಟ್ ಮಾಡುತ್ತಿದ್ದ ಈ ವಿದ್ಯಾರ್ಥಿನಿಯರು ಶೂಟ್ ಮಾಡಿದ್ದ ವಿಡಿಯೊವನ್ನು ತಮ್ಮ ಕೋಮಿನ ಯುವಕನಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ. ಆ ಯುವಕ ವಿದ್ಯಾರ್ಥಿನಿಯರ ವಿಡಿಯೊವನ್ನು ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದ ಎನ್ನಲಾಗಿದೆ.

ಒಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವುದನ್ನು ಗಮನಿಸಿದ ಕೆಲವು ವಿದ್ಯಾರ್ಥಿನಿಯರು ಜತೆಗೂಡಿ ಸಂಶಯದಿಂದ ಕೆಲವರನ್ನು ವಾಚ್‌ ಮಾಡಲು ಆರಂಭಿಸಿದರು. ಆಗ ಮೂವರು ವಿದ್ಯಾರ್ಥಿನಿಯರು ಸಂಶಯಾಸ್ಪದವಾಗಿ ವರ್ತಿಸುತ್ತಿರುವುದು ಕಂಡಿತು. ಅವರು ಆಗಾಗ ಶೌಚಾಲಯಕ್ಕೆ ಹೋಗುತ್ತಿರುವುದು, ಯಾರಾದರೂ ಒಬ್ಬರು ಒಳಗೆ ಹೋಗಿ ಬಂದ ಕೂಡಲೇ ತಾವು ನುಗ್ಗುವುದನ್ನು ಗಮನಿಸಿ ಅವರನ್ನು ವಿಚಾರಿಸಲಾಗಿತ್ತು.

ಕೆಲವು ವಿದ್ಯಾರ್ಥಿನಿಯರು ಸೇರಿ ವಿಡಿಯೊ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರ ಜೊತೆ ಕಾಲೇಜಿನಲ್ಲಿ ವಾಗ್ವಾದ ಮಾಡಿದ್ದರು. ಈ ವಿಷಯ ಆಡಳಿತ ಮಂಡಳಿಯ ಗಮನಕ್ಕೆ ಬಂದ ಬಳಿಕ ವಿಚಾರಣೆ ನಡೆಸಲಾಯಿತು.

ವಿಡಿಯೊ ಶೂಟ್‌ ಮಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ಈಗ ಕಾಲೇಜಿನಿಂದ ಅಮಾನತು ಮಾಡಲಾಗಿದೆ.

ಹಿಂದೂ ಸಂಘಟನೆಗಳ ಪ್ರವೇಶ

ಹಿಂದು ಹೆಣ್ಣುಮಕ್ಕಳ ವಿಡಿಯೊವನ್ನು ಈ ರೀತಿ ಚಿತ್ರೀಕರಿಸಿ ವೈರಲ್‌ ಮಾಡಿದ್ದರ ವಿರುದ್ಧ ಈಗ ಹಿಂದು ಸಂಘಟನೆಗಳು ಸಿಡಿದೆದ್ದಿವೆ. ಈ ವಿಚಾರ ಬೆಳಕಿ ಬಂದ ತಕ್ಷಣ ಕಾಲೇಜಿಗೆ ತೆರಳಿದ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿವೆ.

ಇದುವರೆಗೆ ಮುಸ್ಲಿಂ ಯುವಕರು ಹಿಂದು ಹೆಣ್ಮಕ್ಕಳನ್ನು ಕಾಡುತ್ತಿದ್ದರೆ, ಈಗ ಮುಸ್ಲಿಂ ಹೆಣ್ಮಕ್ಕಳು ಕೂಡಾ ಅವರಿಗೆ ಸಹಕಾರ ನೀಡುತ್ತಿರುವುದು ಭಾರಿ ಆತಂಕಕಾರಿ. ಹೀಗಾಗಿ ಬುಡಮಟ್ಟದಿಂದಲೇ ಈ ಕೃತ್ಯಗಳನ್ನು ನಿಲ್ಲಿಸಬೇಕು. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಾಲೇಜು ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಿದ್ದಾರೆ. ಆದರೆ, ಕಾಲೇಜು ಆಡಳಿತ ಮಂಡಳಿ ಇದುವರೆಗೂ ಪೊಲೀಸರಿಗೆ ದೂರು ನೀಡಿಲ್ಲ.

ಆದರೆ, ಪೊಲೀಸರೇ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: Sexual Assault : 16ರ ಬಾಲಕಿಯನ್ನು ಮನೆಗೆ ಕರೆಸಿ ಅತ್ಯಾಚಾರ ಮಾಡಿದ ಮೂವರು ಬಾಲಕರು

ಉಡುಪಿ: ಕೆಲವು ತಿಂಗಳ ಹಿಂದೆ ದಿಲ್ಲಿಯ ಹಾಸ್ಟೆಲ್‌ ಒಂದರಲ್ಲಿ ಅಲ್ಲಿನ ವಿದ್ಯಾರ್ಥಿನಿಯೊಬ್ಬಳು ಸ್ನಾನದ ಮನೆಯಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಿಸಿ ಅದನ್ನು ತನ್ನ ಗೆಳೆಯನಿಗೆ ಕಳುಹಿಸುತ್ತಿದ್ದ ಘಟನೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂತಹುದೇ ಒಂದು ಘಟನೆ ಉಡುಪಿಯ ಕಾಲೇಜೊಂದರಲ್ಲಿ (Harrassment in Udupi college) ಕೂಡಾ ನಡೆದಿದೆ. ಆದರೆ, ಇಲ್ಲಿ ವಿದ್ಯಾರ್ಥಿನಿಯರು (Girl students videographed in ladies toilet) ಕಳುಹಿಸಿದ ವಿಡಿಯೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಮಾಡಿದ (videos viral) ಭಯಾನಕ ವಿದ್ಯಮಾನವೂ ನಡೆದಿದೆ.

Exit mobile version