Site icon Vistara News

Harrassment charge : ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ KSRTC ಚಾಲಕ ಕಂ ನಿರ್ವಾಹಕ

Bus conductor suicide attempt in Kalburgi

ಕಲಬುರಗಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ಕಲಬುರಗಿ ಡಿಪೋ 2ರಡಿ ಬರುವ ಡ್ರೈವರ್‌ ಕಂ ಕಂಡಕ್ಟರ್‌ (Driver cum Conductor) ಒಬ್ಬರು ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ (Suicide attempt) ಯತ್ನಿಸಿದ್ದಾರೆ. ಚಾಲಕ ಕಂ ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಬೀರಣ್ಣ ಎಂಬವರು ಡಿಪೋದ ಡೀಸೆಲ್‌ ಪಂಪ್‌ನಲ್ಲೇ ಪ್ರಾಣ ಕಳೆದುಕೊಳ್ಳಲು ಮುಂದಾದವರು. ಅವರ ಈ ಅತಿರೇಕದ ನಿರ್ಧಾರಕ್ಕೆ ಡಿಪೋ ಮ್ಯಾನೇಜರ್ ಮಂಜುನಾಥ್‌ ಅವರು ಕಿರುಕುಳ ನೀಡುತ್ತಿರುವುದೇ ಕಾರಣ ಎಂದು ಹೇಳಲಾಗಿದೆ. ಡಿಪೋ ಮ್ಯಾನೇಜರ್ ನನಗೆ ಯಾವುದೇ ಕಾರಣವಿಲ್ಲದೆ ಕಿರುಕುಳ (Harrassment charge) ನೀಡುತ್ತಿದ್ದಾರೆ, ನನಗೆ ಇದು ಸಾಕಾಗಿ ಎಂದು ಹೇಳಿದ್ದಾರೆ.

ಬೀರಣ್ಣ ಅವರು ಶುಕ್ರವಾರ ಡೀಸೆಲ್‌ ಪಂಪ್‌ನಲ್ಲಿ ಬಸ್ಸು ನಿಲ್ಲಿಸಿ ಡೀಸೆಲ್‌ ತುಂಬಿಕೊಳ್ಳುತ್ತಿದ್ದಾಗ ತಮ್ಮ ಓರಗೆಯ ಚಾಲಕರು ಮತ್ತು ನಿರ್ವಾಹಕರ ಜತೆ ತಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಿದ್ದರು. ಡಿಪೋ ಮ್ಯಾನೇಜರ್ ನನಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಸರಿಯಾಗಿ ಡ್ಯೂಟಿ ನೀಡುತ್ತಿಲ್ಲ. ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು. ಈ ಪರಿಸ್ಥಿತಿಯಿಂದ ಹೇಗೆ ಬಚಾವಾಗುವುದು ಅಂತಲೇ ಗೊತ್ತಾಗುತ್ತಿಲ್ಲ ಎಂದು ಬೇಸರಿಸಿಕೊಂಡ ಅವರು ಒಮ್ಮಿಂದೊಮ್ಮೆಗೇ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಬಸ್ಸಿಗೆ ಡೀಸೆಲ್‌ ತುಂಬಿಸುತ್ತಿದ್ದಾಗ, ಡೀಸೆಲ್‌ ಗನ್‌ನ್ನು ಕಿತ್ತುಕೊಂಡು ಮೈಮೇಲೆ ಡೀಸೆಲ್‌ ಸುರಿದುಕೊಂಡರು. ಕೂಡಲೇ ಪಕ್ಕದಲ್ಲಿದ್ದ ಓರಗೆಯ ಸಿಬ್ಬಂದಿ ಎಚ್ಚೆತ್ತು ಅವರನ್ನು ಹಿಡಿದುಕೊಂಡರು. ಇಲ್ಲದೆ ಹೋಗಿದ್ದರೆ ಅವರು ಬೆಂಕಿ ಹಚ್ಚಿಕೊಳ್ಳುವ ಅಪಾಯವೂ ಇತ್ತು.

ಬೀರಣ್ಣ ಅವರು ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸಿನ ಚಾಲಕರಾಗಿದ್ದು, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಇಂಗಳಗಿ ಗ್ರಾಮದ ನಿವಾಸಿಯಾಗಿದ್ದಾರೆ.

ಕಲಬುರಗಿಯಿಂದ ಅಫಜಲಪುರಕ್ಕೆ ಪ್ರತಿನಿತ್ಯ 8 ಸಿಂಗಲ್ ಟ್ರಿಪ್‌ ಹೋಗಿ ಬರಲು ಡಿಪೋ ಮ್ಯಾನೇಜರ್‌ ಸೂಚನೆ ನೀಡಿದ್ದರು ಎನ್ನಲಾಗಿದೆ. 8 ಸಿಂಗಲ್ ಟ್ರಿಪ್‌ ಆದರೆ ಮರುದಿನ ಡಿಪೋ ಮ್ಯಾನೇಜರ್ ಡ್ಯೂಟಿ ಕೊಡುತ್ತಿರಲಿಲ್ಲ ಎಂಬ ಆರೋಪವಿದೆ.

ಬೀರಣ್ಣ ಅವರು ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಡಿಸಿ ಸಿದ್ದಪ್ಪಾ ಗಂಗಾಧರ್ ಅವರು ಭೇಟಿ ನೀಡಿ ಮಾಹಿತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ : Transfer controversy ; ಜೆಡಿಎಸ್‌ ಪರ ಲೈನ್‌ಮ್ಯಾನ್‌ ವರ್ಗ; ಚಲುವರಾಯಸ್ವಾಮಿ ವಿರುದ್ಧ ಮತ್ತೊಂದು ಆರೋಪ

ರಾಜ್ಯದಲ್ಲಿ ಇದು ಮೂರನೇ ಘಟನೆ

Exit mobile version