Site icon Vistara News

ಹರ್ಷ ಕೊಲೆ | ಆರೋಪಿಗಳಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ, ಸಹೋದರಿ ಹೇಳಿದ್ದೇನು?

ಶಿವಮೊಗ್ಗ: ಹರ್ಷ ಕೊಲೆ ಆರೋಪಿಗಳಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡುತ್ತಿರುವುದಕ್ಕೆ ಹರ್ಷ ಸಹೋದರಿ ಅಶ್ವಿನಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನಿ, ಹರ್ಷ ಕೊಲೆ ಆರೋಪಿಗಳಿಗೆ ಜೈಲಲ್ಲಿ ಇರುವ ವ್ಯವಸ್ಥೆಯನ್ನು ಗಮನಿಸಿದರೆ ತನಿಖೆ ಎತ್ತ ಸಾಗಿದೆ ಎಂಬ ಸಂಶಯ ಮೂಡಿದೆ. ಈ ಬಗ್ಗೆ ಗೃಹ ಸಚಿವರನ್ನು ಸಹ ಭೇಟಿಯಾಗಿದ್ದೆ. ತನಿಖೆ ಬಗ್ಗೆ ಗೃಹ ಸಚಿವರು ಭರವಸೆ ಕೊಟ್ಟರೆ ಸಾಕು. ನನಗೆ ಎನ್​ಐಎ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ. ಆದರೆ, ಪರಪ್ಪನ ಅಗ್ರಹಾರದಲ್ಲಿ ನಡೆದ ಘಟನೆ ಬಗ್ಗೆ ಬೇಸರವಿದೆ. ಆರೋಪಿಗಳಿಗೆ ಈ ರೀತಿ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ| ಹರ್ಷ ಹತ್ಯೆ ಪ್ರಕರಣ | ಹಿಂದು ಯುವಕರಿಗೆ ಬೆಲೆಯೇ ಇಲ್ಲವೆ?: ಸಾಹಿತಿಗಳಿಂದ ಸರ್ಕಾರಕ್ಕೆ ಪತ್ರ

ಬಳಿಕ ಮಾತನಾಡಿದ ಹಿಂಜಾವೇ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್, ಹರ್ಷ ಕೊಲೆ ಆರೋಪಿಗಳಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿರುವುದು ನಿಜಕ್ಕೂ ಖಂಡನೀಯ. ಇದರಿಂದ ಹರ್ಷ ಕುಟುಂಬಕ್ಕೆ ನೋವಾಗಿದೆ. ಈ ಬಗ್ಗೆ ಗೃಹ ಸಚಿವರ ಬಳಿ ಕೇಳಿದರೆ ಅವರು ನಡೆದುಕೊಂಡ ರೀತಿ ಬೇಸರ ಹುಟ್ಟಿಸುತ್ತದೆ. ಗೃಹ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು. ರಾಜಾತಿಥ್ಯದ ಬಗ್ಗೆ ಸಚಿವರಿಗೆ ಗೊತ್ತಾದ ಮೇಲೂ ಆ ಅಧಿಕಾರಿಗಳ ವಿರುದ್ಧ ಯಾವ ಕ್ರಮವಾಗಿದೆ? ಹರ್ಷ ಕೊಲೆ ಆರೋಪಿಗಳಿಗೆ ಅಷ್ಟರ ಮಟ್ಟಿಗೆ ಅನುಕೂಲ ಮಾಡಿಕೊಟ್ಟ ವ್ಯಕ್ತಿಗಳಿಗೆ ಏನು ಶಿಕ್ಷೆ ಕೊಟ್ಟಿದ್ದಾರೆ? ಮುಸ್ಲಿಂ ಗೂಂಡಾಗಳು ಕೇವಲ ಹರ್ಷನನ್ನು ಗುರಿ ಮಾಡಿಲ್ಲ ಎಂದು ಕಿಡಿಕಾರಿದರು.

ಈ ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದುಗಳಿಗೆ ರಕ್ಷಣೆ ಕೊಡಬೇಕು. ಇಲ್ಲವಾದಲ್ಲಿ ನಿಮಗೆ ಗೃಹ ಇಲಾಖೆಯನ್ನು ನಿಭಾಯಿಸುವ ನೈತಿಕತೆ ಇರುವುದಿಲ್ಲ. ಹಾಗಾಗಿ ಜವಾಬ್ದಾರಿಯಿಂದ ಹೊರಬರುವುದು ಸೂಕ್ತ ಎಂದು ಹಿಂಜಾವೇ ಮುಖಂಡ ಸತೀಶ್ ಆಗ್ರಹಿಸಿದ್ದಾರೆ.

ಇದನ್ನು ಓದಿ| ನೀನು ಎಷ್ಟು ಮಾತನಾಡ್ತಿಯಾ? ಮೃತ ಹರ್ಷನ ಸಹೋದರಿಯನ್ನು ಗದರಿಸಿದ ಆರಗ ಜ್ಞಾನೇಂದ್ರ?

Exit mobile version