Site icon Vistara News

Hasirumakki launch : ಹಸಿರುಮಕ್ಕಿ ಲಾಂಚ್‌ ಪುನಾರಂಭ; ಬಸ್‌ಗಿಲ್ಲ ಅವಕಾಶ!

Hasirumakki launch resumes

ಶಿವಮೊಗ್ಗ: ಶರಾವತಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದಿದ್ದ ಕಾರಣ ಕಳೆದೊಂದು ತಿಂಗಳಿಂದ ಸ್ಥಗಿತಗೊಂಡಿದ್ದ ಹಸಿರುಮಕ್ಕಿ ಲಾಂಚ್ (Hasirumakki launch) ಸೋಮವಾರ (ಜುಲೈ 10) ಪುನರಾರಂಭಗೊಂಡಿದೆ. ಸದ್ಯ ಬೈಕ್, ಲಘು ವಾಹನಗಳಿಗೆ ಮಾತ್ರ ಲಾಂಚ್‌ನಲ್ಲಿ ಅವಕಾಶ ನೀಡಲಾಗಿದೆ.

ಕಳೆದೊಂದು ವಾರದಿಂದ ಶರಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಹಿನ್ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಸದ್ಯ ಬೈಕ್, ಲಘು ವಾಹನಗಳಿಗೆ ಮಾತ್ರ ಲಾಂಚ್‌ನಲ್ಲಿ ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ನೀರಿನ ಮಟ್ಟದಲ್ಲಿ ಇನ್ನೂ ಸ್ವಲ್ಪ ಹೆಚ್ಚಳ ವಾದ ಬಳಿಕ ಬಸ್‌ ಸಹಿತ ದೊಡ್ಡ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ.

ಹೀಗಾಗಿ ಈ ಭಾಗದಲ್ಲಿ ಸ್ಥಳೀಯರು, ಪ್ರವಾಸಿಗರ ಸಂಚಾರವೂ ಆರಂಭಗೊಂಡಿದ್ದು, ಎಲ್ಲರಿಗೂ ಅನುಕೂಲವಾಗಿದೆ. ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾದ ಮೇಲೆ ಬಸ್‌ಗಳನ್ನು ದಾಟಿಸಲಾಗುವುದು ಎಂದು ಕಡವು ನಿರೀಕ್ಷಕ ಧನೇಂದ್ರಕುಮಾರ್ ತಿಳಿಸಿದ್ದಾರೆ.

ಹಸಿರುಮಕ್ಕಿ ಲಾಂಚ್‌ ಪುನಾರಂಭವಾಗಿದೆ. ಪ್ರಯಾಣಿಕರು, ವಾಹನ ಸವಾರರು ಲಾಂಚ್‌ ಪ್ರವೇಶಿಸಿರುವುದು.

ಇದನ್ನೂ ಓದಿ: Health Tips For Rainy Season: ಮಳೆಗಾಲದಲ್ಲಿ ಹೆಚ್ಚುವ ನೋವುಗಳನ್ನು ಕಡಿಮೆ ಮಾಡುವುದು ಹೇಗೆ?

ಸಿಗಂದೂರು ಲಾಂಚ್‌ನಲ್ಲಿ ಮೊನ್ನೆಯಷ್ಟೇ ‌ಆರಂಭವಾಗಿದ್ದ ವಾಹನ ಸಾಗಾಟ

ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದರಿಂದ ಶುಕ್ರವಾರ (ಜುಲೈ 7) ಸಿಗಂದೂರು (Sigandur) ಲಾಂಚ್‌ನಲ್ಲಿ ವಾಹನ ಸಾಗಾಟಕ್ಕೆ ಅನುಮತಿ ನೀಡಲಾಗಿತ್ತು. ಕಳೆದ 20 ದಿನಗಳಿಂದ ವಾಹನ ಸಾಗಾಟಕ್ಕೆ (Vehicle Transportation) ನಿಷೇಧವನ್ನು ಹೇರಲಾಗಿತ್ತು. ಶುಕ್ರವಾರದಿಂದ ಈ ವಾಪಸ್ ಆದೇಶವನ್ನು ಹಿಂಪಡೆಯಲಾಗಿತ್ತು. ಇದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ನಿರಾಳವಾಗುವಂತೆ ಆಗಿತ್ತು. ಎಂದಿನಂತೆ ಪ್ರವಾಸಿಗರು ಈ ಮಾರ್ಗದ ಮೂಲಕ ‌ಸಂಚರಿಸುತ್ತಿದ್ದಾರೆ.

ಮಳೆಯಿಲ್ಲದ ಕಾರಣ ಲಾಂಚ್‌ನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಕಲೆಕ್ಷನ್‌ ಮಾದರಿಯನ್ನು ಅನುಸರಿಸಲಾಗಿತ್ತು. ಕಲೆಕ್ಷನ್‌ ಮಾದರಿ ಎಂದರೆ ಕೇವಲ ಪ್ರಯಾಣಿಕರನ್ನು ಮಾತ್ರ ಹೊತ್ತೊಯ್ಯಲಾಗುತ್ತಿತ್ತು. ಬಳಿಕ ಪ್ರಯಾಣಿಕರಿಗೆ ಇನ್ನೊಂದು ಬದಿಯಲ್ಲಿ ಬಸ್‌ ವ್ಯವಸ್ಥೆ ಮಾಡಲಾಗುತ್ತಿತ್ತು.

ಒಂದು ವೇಳೆ ಈ ಭಾಗದಿಂದ ಇನ್ನೊಂದು ಕಡೆಗೆ ಸಂಚರಿಸಬೇಕಾದರೆ ಸುತ್ತಿಬಳಸಿ ಹೋಗಬೇಕಾಗಿತ್ತು. ಈಗ ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಇದರಿಂದ ಲಾಂಚ್‌ನ ಪ್ಲಾಟ್‌ಫಾರಂವರೆಗೆ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾಂಚ್‌ನಲ್ಲಿ ವಾಹನಗಳ ಸಾಗಾಟಕ್ಕೆ ಪುನಃ ಅನುಮತಿ ನೀಡಲಾಗಿದೆ.

ಇದನ್ನೂ ಓದಿ: Weather Report : ರಾಜ್ಯದ ಈ 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಸ್ಥಳೀಯರು, ಪ್ರವಾಸಿಗರಿಗೆ ತೊಂದರೆಯಾಗುತ್ತಿತ್ತು

ಈ ರೀತಿಯಾಗಿ ವಾಹನ ಸಂಚಾರಕ್ಕೆ ನಿಷೇಧ ಹೇರುವುದರಿಂದ ಸ್ಥಳೀಯರಿಗೆ ತೀವ್ರ ತೊಡಕಾಗಿತ್ತು. ಅನಾರೋಗ್ಯದ ಸಂದರ್ಭದಲ್ಲಿ ತೊಂದರೆಯನ್ನು ಅನುಭವಿಸಬೇಕಿತ್ತು. ಅಲ್ಲದೆ, ಪ್ರವಾಸಿಗರು ಸಹ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಆಗುತ್ತಿರಲಿಲ್ಲ. ಈಗ ಪ್ರವಾಸಿಗರು ಸಹ ಸಿಂಗದೂರು ಕ್ಷೇತ್ರದ ದರ್ಶನ ಪಡೆದು ಮುಂದೆ ಕೊಲ್ಲೂರು ಸೇರಿದಂತೆ ಇನ್ನಿತರ ಕಡೆಗಳಿಗೆ ಭೇಟಿ ನೀಡಬಹುದಾಗಿದೆ.

Exit mobile version