ಹಾಸನ: ಹಾಸನದಲ್ಲಿ ಕೊರಿಯರ್ ಅಂಗಡಿಯಲ್ಲಿ ನಡೆದ ಮಿಕ್ಸಿ ಸ್ಫೋಟ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ತಡರಾತ್ರಿ ಮೈಸೂರಿನಿಂದ ಆಗಮಿಸಿದ ಎಫ್.ಎಸ್.ಎಲ್. ತಂಡ ಪರಿಶೀಲನೆ ನಡೆಸಿದೆ.
ಡಿಟಿಡಿಸಿ ಕೊರಿಯರ್ ಅಂಗಡಿಯಲ್ಲಿ ಪರಿಶೀಲನೆ ನಡೆಸಿದ ಎಫ್.ಎಸ್.ಎಲ್. ತಂಡ ಅಗತ್ಯ ಮಾಹಿತಿಗಳನ್ನು ಕಲೆಹಾಕಿದೆ. ಇಂದು ಐಎಸ್‌ಡಿ ಐಜಿಪಿ ವಿಪುಲ್ ಕುಮಾರ್ ಹಾಗೂ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಪ್ರಕಾಶ್‌ಗೌಡ ಭೇಟಿ ನೀಡುವ ಸಾಧ್ಯತೆಯಿದೆ.
ಮಿಕ್ಸಿ ಸ್ಫೋಟದಿಂದ ಗಾಯಗೊಂಡಿರುವ ಶಶಿಗೆ ನಿನ್ನೆ ರಾತ್ರಿ ಸರ್ಜರಿ ನಡೆಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊರಿಯರ್ ಅಂಗಡಿಯಲ್ಲಿ ನಿನ್ನೆ ಸಂಜೆ ಮಿಕ್ಸಿ ಸ್ಫೋಗೊಂಡಿತ್ತು. ಬ್ಲಾಸ್ಟ್‌ನಿಂದ ಕೊರಿಯರ್ ಶಾಪ್ ಮಾಲೀಕನ ಬಲಗೈ ಸಂಪೂರ್ಣವಾಗಿ ಛಿದ್ರವಾಗಿದೆ. ಹೊಟ್ಟೆ ಹಾಗೂ ತಲೆಯ ಭಾಗಕ್ಕೂ ಪೆಟ್ಟು ಬಿದ್ದಿದೆ. ಗಾಯಾಳು ಶಶಿಗೆ ಹಾಸನ ನಗರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ | Hassan Blast | ಹಾಸನದ ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಮಿಕ್ಸಿ ಸ್ಫೋಟ; ಮಾಲೀಕನಿಗೆ ಗಂಭೀರ ಗಾಯ, ಹಲವು ಶಂಕೆ
ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ, ಕೊರಿಯರ್ ಎಲ್ಲಿಂದ ಬಂತು, ಉದ್ದೇಶ ಪೂರ್ವಕವಾಗಿ ಸ್ಫೋಟಕ್ಕೆ ಯೋಜಿಸಲಾಗಿದೆಯಾ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಆಗಿದೆಯಾ ಇತ್ಯಾದಿ ಕೋನಗಳಲ್ಲಿ ಪೊಲೀಸರ ತನಿಖೆ ನಡೆಯುತ್ತಿದೆ.