ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ (physical abuse) ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna case) ಮೂರನೇ ದಿನದ ಕಸ್ಟಡಿ ಮುಂದುವರೆದಿದ್ದು, ಇಂದೇ ಸ್ಥಳ ಮಹಜರಿಗೆ ಎಸ್ಐಟಿ ಪ್ಲಾನ್ ಮಾಡಿದೆ. ಕಳೆದ ಎರಡು ದಿನಗಳಿಂದ ವಿಚಾರಣೆ ವೇಳೆ ಪ್ರಜ್ವಲ್ ಏನನ್ನೂ ಬಾಯ್ಬಿಡದಿರುವುದ ಎಸ್‌ಐಟಿಗೆ ಭಾರೀ ತಲೆನೋವಾಗಿದೆ. ಎಸ್‌ಐಟಿ (SIT) ಹಲವಾರು ಪ್ರಶ್ನೆಗಳ ಮೂಲಕ ಗ್ರಿಲ್ ಮಾಡಿದ್ದರೂ ಎಲ್ಲವೂ ಷಡ್ಯಂತರ.. ನಾನೇನು ಮಾಡಿಲ್ಲ ಅಂತಲೇ ಪ್ರಜ್ವಲ್ ಉತ್ತರ ನೀಡಿದ್ದಾರೆ.
ಇಂದು ಎಸ್‌ಐಟಿ ಪ್ರಜ್ವಲ್ ರೇವಣ್ಣ ಅವರನ್ನು ಹೊಳೆನರಸೀಪುರಕ್ಕೆ ಕರೆದೊಯ್ದು ಅಲ್ಲಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸದ್ಯ ಎಮ್ ಪಿ ಚುನಾವಣಾ ಎಕ್ಸಿಟ್ ಪೋಲ್ ನಡೀತಿದ್ದು, ಪ್ರಜ್ವಲ್ ರೇವಣ್ಣ ಗೆಲ್ಲುವ ಸಾಧ್ಯತೆ ಎಂಬ ಮಾತಿರುವ ಹಿನ್ನೆಲೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬೆಂಬಲಿಗರು, ಅಭಿಮಾನಿಗಳು ಸೇರಬಹುದಾದ ಸಂಭವವಿದೆ. ಹೀಗಾಗಿ ಹೀಗಾಗಿ ಇವತ್ತು ಅಥವಾ ನಾಳೆ ಸ್ಥಳ ಮಹಜರು ಮಾಡಿದ್ರೆ ಮುಂದಿನ ಹಂತದ ಪ್ರಕ್ರಿಯೆ ಸುಲಭವಾಗುತ್ತದೆ ಎಂದು ಪ್ಲ್ಯಾನ್ ಮಾಡಿರೋ ಎಸ್‌ಐಟಿ, ಸ್ಥಳ ಮಹಜರು ನಂತರ ಮತ್ತೆ ಪ್ರಜ್ವಲ್ ರೇವಣ್ಣ ವಿಚಾರಣೆ ಮುಂದುವರೆಸಲಿದೆ.
ವಿಚಾರಣೆ ವೇಳೆ ಮೊಂಡಾಟ
ಪ್ರಜ್ವಲ್ ರೇವಣ್ಣ ಎಸ್‌ಐಟಿ ವಿಚಾರಣೆ ವೇಳೆ ಭಾರೀ ಮೊಂಡಾಟ ತೋರಿದ್ದಾರೆ ಎನ್ನಲಾಗಿದೆ. ಎಷ್ಟು ವಿಚಾರಣೆ ಮಾಡಿದ್ರೂ ಪ್ರಜ್ವಲ್ ಸರಿಯಾಗಿ ಬಾಯಿ ಬಿಡ್ತಿಲ್ಲ. ವಿಚಾರಣೆ ವೇಳೆ ಎದ್ದೇಳೋದು.. ಆಕಡೆ ಈಕಡೆ ಓಡಾಡೋದು.. ಏನೂ ಗೊತ್ತಿಲ್ಲ ಅಂತಾನೆ ಉತ್ತರ ನೀಡುತ್ತಾ ಎಸ್ಐಟಿ ಅಧಿಕಾರಿಗಳಿಗೆ ತಲೆ ಕೆಡಿಸಿದ್ದಾರೆ. ಏನು ಕೇಳಿದ್ರೂ ನಂಗೆ ಗೊತ್ತಿಲ್ಲ.. ನಾನೇನು ಮಾಡಿಲ್ಲ ಅಂತಿರುವ ಪ್ರಜ್ವಲ್‌ರನ್ನು ಮೊಬೈಲ್ ಬಗ್ಗೆ ಮತ್ತೆ ಬಾಯಿ ಬಿಡಿಸಲು ಎಸ್ಐಟಿ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಯಾವ ಮೊಬೈಲ್..? ಇರುವ ಮೊಬೈಲ್ ಏರ್ಪೋರ್ಟ್ ನಲ್ಲೇ ಕೊಟ್ಟೆ.. ಯಾವ ಮೊಬೈಲ್ ಬಗ್ಗೆ ಮಾತನಾಡ್ತಿದೀರಾ..? ಹಳೆ ಮೊಬೈಲ್ ಕಳೆದೋಗಿದೆ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ರ ಈಗಿನ ಮೊಬೈಲ್‌ನಲ್ಲಿ ಯಾವುದೇ ರೀತಿ ವಿಡಿಯೋಗಳು, ಮೆಸೇಜ್ ಗಳು ಪತ್ತೆಯಾಗಿಲ್ಲ. ಸದ್ಯ ಡಿಜಿಟಲ್ ಎವಿಡೆನ್ಸ್ ಕಲೆ ಹಾಕಲು ಎಸ್ಐಟಿ, ಎಲ್ಲಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ.
ಈಗಾಗಲೇ ಪ್ರಜ್ವಲ್ ಅವರ ವಿಚಾರಣೆ ಮಾಡಿ 161 ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. ಅದರಲ್ಲಿ ಮೊಬೈಲ್ ಕುರಿತು ದಾಖಲಿಸಿದೆ. ನೀವು ಹೇಳುತ್ತಿರುವ ಮೊಬೈಲ್ ನನ್ನ ಬಳಿ ಇಲ್ಲ. ಕಳೆದ ವರ್ಷವೇ ಫೋನ್ ಕಳೆದು ಹೋಗಿದ್ದು, ಆ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ಕೂಡ ನೀಡಿದ್ದೇನೆ ಎಂದು ಪ್ರಜ್ವಲ್ ಹೇಳಿದ್ದಾರೆ. ಈ ಹೇಳಿಕೆ ಸತ್ಯಾಸತ್ಯತೆಯನ್ನು ಎಸ್‌ಐಟಿ ಪರಿಶೀಲಿಸಲಿದೆ.
ನೀವು ತೋರಿಸಿರುವ ವಿಡಿಯೋಗಳಲ್ಲಿ ಇರುವುದು ನಾನಲ್ಲ. ಅವರೆಲ್ಲ ನನಗೆ ಪರಿಚಯ ಅಷ್ಟೇ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ. ಅತ್ಯಾಚಾರ ಆರೋಪಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ. ವಿಡಿಯೋಗಳ ಬಗ್ಗೆ ನಂಗಷ್ಟು ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗಳನ್ನು ತೋರಿಸಿ ಪ್ರಶ್ನಿಸಿದಾಗ ಈ ಉತ್ತರ ದೊರೆತಿದೆ. ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಪ್ರಜ್ವಲ್ ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ:Exit Poll 2024 : ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್ಗೆ ಲಾಭ ; ಜೆಡಿಎಸ್ಗೆ +1