Site icon Vistara News

Hassan Pen Drive Case: ಪ್ರಜ್ವಲ್ ರೇವಣ್ಣ ಉಚ್ಚಾಟನೆ ನಿರ್ಧಾರ ಆಗಿದೆ ಎಂದ ಎಚ್‌ಡಿಕೆ

Hassan Pen Drive Case

ಶಿವಮೊಗ್ಗ: ಹಾಸನ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ (Hassan Pen Drive Case) ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಿದ್ದರಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು, ಪ್ರಜ್ವಲ್‌ ಉಚ್ಚಾಟನೆ ಬಗ್ಗೆ ದೇವೇಗೌಡರ ಬಳಿ ಚರ್ಚೆ ಮಾಡಿದ್ದೆ. ನೆನ್ನೆ ರಾತ್ರಿಯೇ ಈ ಬಗ್ಗೆ ತೀರ್ಮಾನ ಆಗಿತ್ತು. ನಾಳೆ ಕೋರ್ ಕಮಿಟಿ ಸಭೆಯಲ್ಲಿ ಉಚ್ಚಾಟನೆ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ. ಈ ನೆಲದ ಕಾನೂನಿನಲ್ಲಿ ತಪ್ಪು ಆಗಿದ್ರೆ ಶಿಕ್ಷೆ ಆಗಬೇಕು ಎಂದು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಈ ಪ್ರಕರಣದಲ್ಲಿ ದೇವೇಗೌಡರು, ನನ್ನನ್ನು ಯಾಕೆ ತರುತ್ತೀರಿ? ಬಿಜೆಪಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಈಗಾಗಲೇ ನಾವು ಬೇರೆ ಆಗಿದ್ದೇವೆ. ನಮ್ಮ ವ್ಯವಹಾರ, ಅವರ ವ್ಯವಹಾರ ಬೇರೆ ಬೇರೆ ನಡೆಯುತ್ತದೆ. ರಾಜ್ಯದ ಹೆಣ್ಣು ಮಕ್ಕಳ ಧ್ವನಿಯಾಗಿ ನಾನು ಧ್ವನಿ ಎತ್ತುತ್ತೇನೆ. ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತಪ್ಪು ನಡೆದಿದ್ದರೆ ಈ ನೆಲ್ಲದಲ್ಲಿ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ನನ್ನ ನಿಲುವು ಮುಂದುವರಿದಿದೆ ಎಂದು ಹೇಳಿದರು.

ಇದನ್ನೂ ಓದಿ | Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

ಕಾನೂನು ಉಲ್ಲಂಘನೆ ಆಗಿದ್ದರೆ ಕ್ರಮ ಆಗಲಿ, ಚುನಾವಣೆ ಸಮಯದಲ್ಲಿ ಪೆನ್ ಡ್ರೈ ಹಂಚಿರುವುದು ಕೂಡ ತನಿಖೆ ಯಾಗಬೇಕು. ಯಾರಿಂದ ಹೊರಬಂದಿದೆ, ಯಾರು ಲಕ್ಷಾಂತರ ಪೆನ್ ಡ್ರೈ ಹಂಚಿದವರು ಯಾರು ಅಂತ ತಿಳಿಯಬೇಕು. ಪೆನ್ ಡ್ರೈ ಹಂಚಿದ್ದು ದೊಡ್ಡ ಅಪರಾಧ ಎಂದು ಕಿಡಿಕಾರಿದ್ದಾರೆ.

ಪ್ರಜ್ವಲ್‌, ರೇವಣ್ಣ ಹಾಗೆ ಮಾಡಿಯೇ ಇಲ್ಲ ಎಂದ ದೂರುದಾರೆಯ ಅತ್ತೆ!

Hassan Pen drive case

ಬೆಂಗಳೂರು: ಲೈಂಗಿಕ ದೌರ್ಜನ್ಯ ಎಸಗಿದ್ದಾರೆ (Hassan Pen Drive Case) ಎಂದು ಆರೋಪಿಸಿ ಸಂಸದ ಪ್ರಜ್ವಲ್‌ ರೇವಣ್ಣ ಮತ್ತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಅವರ ಮನೆ ಕೆಲಸದಾಕೆಯೇ ದೂರು ನೀಡಿದ್ದಾಳೆ. ಇದರಿಂದ ತಂದೆ-ಮಗನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ರೇವಣ್ಣ ಕುಟುಂಬ ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯ ಮಾಡಿಲ್ಲ ಎಂದು ದೂರುದಾರೆಯ ಸಂಬಂಧಿಕರು ಹೇಳಿರುವುದು ಕಂಡುಬಂದಿದೆ.

ಹಾಸನ ಅಶ್ಲೀಲ ವಿಡಿಯೊ ಪ್ರಕರಣದ ಬಗ್ಗೆ ದೂರುದಾರೆಯ ಅತ್ತೆ ಗೌರಮ್ಮ ಸುದ್ದಿಗೋಷ್ಠಿ ನಡೆಸಿದ್ದು, ದೂರುದಾರೆಗೆ ಭವಾನಿ ರೇವಣ್ಣನವರೇ ಸಹಾಯ ಮಾಡಿ ಕೆಲಸ ಕೊಡಿಸಿದ್ದರು. ರೇವಣ್ಣನವರ ಕುಟುಂಬ ನಮ್ಮ ಮೇಲೆ ಯಾವುದೇ ದೌರ್ಜನ್ಯ ಮಾಡಿಲ್ಲ. ದೂರುದಾರೆಯನ್ನು ಕರೆದುಕೊಂಡು ಹೋಗಿ ಇರಿಸಿಕೊಳ್ಳಿ ಎಂದು ನಾವೇ ಭವಾನಿ ಅಮ್ಮನವರಿಗೆ ಹೇಳಿದ್ದೆವು. ಅವರು ಯಾವ ದೌರ್ಜನ್ಯವೂ ಮಾಡಿಲ್ಲ ಎಂದು ತಿಳಿಸಿದ್ದಾರೆ.

ರೇವಣ್ಣ ಅವರ ಮನೆಯಲ್ಲಿ ಮಹಿಳೆಯನ್ನು ನಾಲ್ಕು ವರ್ಷ ಕೆಲಸಕ್ಕೆ ಇರಿಸಿಕೊಂಡಿದ್ದರು ಮತ್ತೆ ನಾನು ಅಲ್ಲಿ ಇರೋದಿಲ್ಲ ಅಂತ ಆಕೆ ಹೇಳಿದ್ದಳು. ಐದು ವರ್ಷದಿಂದ ಸಮಸ್ಯೆ ಇಲ್ಲದೇ, ಈಗ ಯಾಕೆ ದೂರು ಕೊಟ್ಟಳು. ಅವರು ಯಾವುದೇ ದೌರ್ಜನ್ಯವೂ ಮಾಡಿಲ್ಲ. ಯಾರದೋ ಒತ್ತಡದಿಂದ ಮಹಿಳೆ ದೂರು ಕೊಟ್ಟಿದ್ದಾಳೆ. ಭವಾನಿ ರೇವಣ್ಣ ನಮಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ದೂರುದಾರೆ ಸಾಲ ಮಾಡಿಕೊಂಡಿದ್ದಾಗ, ಭವಾನಿ ರೇವಣ್ಣನವರೇ ಅವರಿಗೆ ಸಹಾಯ ಮಾಡಿ ಕೆಲಸ ಕೊಡಿಸಿದ್ದರು. ಚುನಾವಣೆ ಸಂದರ್ಭದಲ್ಲಿ ರೇವಣ್ಣನವರ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಈ‌ ರೀತಿ ಮಾಡಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿರುವುದರಲ್ಲಿ ಸತ್ಯವಿಲ್ಲ. ರೇವಣ್ಣನವರ ಮನೆಯಲ್ಲಿ ಯಾರೂ ಕೂಡ ಹಿಂಸೆ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

ಯಾವುದೋ ಒತ್ತಡಕ್ಕೆ ಸಿಲುಕಿ ದೂರುದಾರೆ ಈ ರೀತಿ ಮಾತನಾಡುತ್ತಿದ್ದಾಳೆ. ಸರಿಯಾದ ಹೆಂಗಸಾಗಿದ್ದರೆ ಐದು ವರ್ಷದ ಹಿಂದೆಯೇ ಪ್ರಶ್ನೆ ಮಾಡಬೇಕಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ವಿಚಾರ ಪ್ರಸ್ತಾಪ ಮಾಡಿಲ್ಲ. ಈಗ ಯಾವುದೋ ದುರುದ್ದೇಶ ಮತ್ತು ಒತ್ತಡದಿಂದ ಈ ರೀತಿ‌ ಮಾಡಿದ್ದಾರೆ. ಅವರ ದೂರಿನಲ್ಲಿ ಯಾವುದೇ ಸತ್ಯವಿಲ್ಲ, ಸರಿಯಾದ ರೀತಿ ತನಿಖೆ ಆಗಬೇಕು. ಪ್ರಕರಣದಿಂದ ನಮ್ಮ ಹಾಗೂ ರೇವಣ್ಣನವರ ಸಂಬಂಧ ಹಾಳಾಗುವ ಹಾಗೆ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Exit mobile version