Site icon Vistara News

JD(S) ticket | ಹಾಸನದಲ್ಲಿ ಪ್ರೀತಂ ಗೌಡ ಎದುರು ಭವಾನಿ ರೇವಣ್ಣ ಸ್ಪರ್ಧೆ ಸಾಧ್ಯತೆ

Prajwal Revanna Case

ಭವಾನಿ ರೇವಣ್ಣ

ಹಾಸನ: ದೊಡ್ಡಗೌಡ್ರು ಕುಟುಂಬದಿಂದ ಮತ್ತೊಬ್ಬರು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಎದುರು ಭವಾನಿ ರೇವಣ್ಣ ಸ್ಪರ್ಧಿಸುವ (JD(S) ticket) ನಿರೀಕ್ಷೆ ಇದೆ.

ಹಾಸನದಲ್ಲಿ ಪಕ್ಷದ ಬಲವರ್ಧನೆಗೆ ಜೆಡಿಎಸ್ ಯತ್ನಿಸಲಿದೆ. ಬಿಜೆಪಿ‌ ಶಾಸಕ ಪ್ರೀತಮ್ ಗೌಡರ ಗೆಲುವಿಗೆ ಬ್ರೇಕ್ ಹಾಕಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.

ಜೆಡಿಎಸ್ ವಿರುದ್ದ ಪ್ರೀತಂ ಗೌಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಪ್ರೀತಂಗೌಡ ಅವರನ್ನು ಸೋಲಿಸಲು ಭವಾನಿ ರೇವಣ್ಣ ಕಣಕ್ಕಿಳಿಸುವಂತೆ ಸ್ಥಳೀಯ ಜೆಡಿಎಸ್ ನಾಯಕರ ಒತ್ತಾಯಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಭವಾನಿ ರೇವಣ್ಣ ಕಾರ್ಯನಿರ್ವಹಿಸಿದ್ದಾರೆ.

ಜನವರಿ ಮೊದಲ ವಾರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಮೊದಲ ಪಟ್ಟಿಯ ಬದಲಿಗೆ, ಕೊನೆ ಕ್ಷಣದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಘೋಷಣೆ ನಿರೀಕ್ಷಿಸಲಾಗಿದೆ.

Exit mobile version