ಹಾಸನ: ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ (Garments Workers) ದಂಪತಿಯ ಶವ ಮನೆಯೊಳಗೆ ಪತ್ತೆಯಾಗಿದೆ (Couple death). ಶವಗಳು ಇರುವ ಸ್ಥಿತಿ ನೋಡಿದರೆ ಗಂಡ ತನ್ನ ಹೆಂಡತಿಯನ್ನು ಕೊಂದು ತಾನು ಆತ್ಮಹತ್ಯೆ (Husband kills wife and ends life) ಮಾಡಿಕೊಂಡಿರುವಂತೆ ಕಂಡುಬರುತ್ತಿದೆ. ಹಾಸನ ನಗರದ (Hasana News) ಕೆ. ಹೊಸಕೊಪ್ಪಲಿನಲ್ಲಿ ಈ ಘಟನೆ ನಡೆದಿದೆ.
ಹಾಸನ ನಗರದ ಕೆ.ಹೊಸಕೊಪ್ಪಲಿನ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ದಂಪತಿಯನ್ನು ದೇವರಾಜು (43), ಮಂಜುಳಾ (35) ಎಂದು ಗುರುತಿಸಲಾಗಿದೆ. ಮೃತ ದಂಪತಿ ಹೊಳೆನರಸೀಪುರ ತಾಲ್ಲೂಕು ಮೂಲದವರು. ಕಳೆದ ಮೂರು ತಿಂಗಳಿನಿಂದ ಕೆ.ಹೊಸಕೊಪ್ಪಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಕೆ. ಹೊಸಕೊಪ್ಪಲಿಗೆ ಬರುವ ಮೊದಲು ಬೆಂಗಳೂರಿನಲ್ಲಿ ವಾಸವಿದ್ದ ದಂಪತಿ ಇಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು.
ದಿನವೂ ಕೆಲಸಕ್ಕೆ ಹೋಗುತ್ತಿದ್ದ ದಂಪತಿ ಕಳೆದ ಸೋಮವಾರದಿಂದ ಮನೆಯಿಂದ ಹೊರ ಬಂದಿರಲಿಲ್ಲ. ಆದರೆ, ಹೆಚ್ಚು ಮಂದಿ ಅದನ್ನು ಗಮನಿಸಿರಲಿಲ್ಲ. ಆದರೆ, ಗುರುವಾರ ಮನೆಯಿಂದ ದುರ್ವಾಸನೆ ಬಂದಾಗ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಶರು ಬೀಗ ಒಡೆದು ಮನೆಯ ಒಳಗೆ ಪ್ರವೇಶಿಸಿದರು. ಆಗ ಅವರಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿರುವ ದೇವರಾಜು ಶವ ಕಂಡಿತು. ಮಂಚದ ಮೇಲೆ ಇರುವ ಮಂಜುಳಾ ಮೃತದೇಹ ಕಂಡಿತು. ಇವರಿಬ್ಬರ ಶವಗಳೂ ಕೊಳೆತು ಹೋಗಿರುವ ಸ್ಥಿತಿ ನೋಡಿದರೆ ಸೋಮವಾರವೇ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅವರಿಬ್ಬರೂ ಜತೆಯಾಗಿ ನಿರ್ಧರಿಸಿ ಪ್ರಾಣ ಕಳೆದುಕೊಂಡರೇ ಗಂಡ ಹೆಂಡತಿಯನ್ನು ಕೊಂದು ಪ್ರಾಣ ಕಳೆದುಕೊಂಡನೇ ಎನ್ನುವುದು ಸ್ಪಷ್ಟವಿಲ್ಲ.
ದೇವರಾಜು, ಮಂಜುಳ ಹದಿನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ದೇವರಾಜು ಮೂಲತಃ ಹೊಳೆನರಸೀಪುರ ತಾಲ್ಲೂಕಿನ ಕೆರಗೋಡು ಗ್ರಾಮದವನು. ಮಂಜುಳಾ ಹೊಳೆನರಸೀಪುರ ತಾಲ್ಲೂಕಿನ, ಗೋಪನಹಳ್ಳಿ ಗ್ರಾಮದವರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : Murder Case : ಅಪರಿಚಿತ ಮಹಿಳೆಯ ಕಾಲುಗಳು ಪತ್ತೆ! ತುಂಡು ತುಂಡಾಗಿ ಕತ್ತರಿಸಿ ಎಸೆದರೆ ಹಂತಕರು
ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ಹರಿದ ಟಿಪ್ಪರ್: ಏಳು ಕುರಿಗಳ ಸಾವು
ಹಾವೇರಿ: ರಸ್ತೆ ದಾಟುತ್ತಿದ್ದ ಕುರಿಗಳ ಮೇಲೆ ಟಿಪ್ಪರ್ ಹರಿದು7 ಕುರಿಗಳ ಸಾವು 13 ಕುರಿಗಳಿಗೆ ಗಾಯವಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಕುಪ್ಪೆಲೂರು ಬಳಿ ನಡೆದಿದೆ.
ಷಣ್ಮುಖಪ್ಪ ಮಾಳಗಿ,ಶಾತಪ್ಪ ಮಾಳಗಿ ಎಂಬುವವರಿಗೆ ಸೇರಿದ ಕುರಿಗಳು ಇವಾಗಿವೆ. ಸ್ಥಳಕ್ಕೆ ಹಲಗೇರಿ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳದಲ್ಲಿನ ಚಿತ್ರಣ ಭಯಾನಕವಾಗಿದೆ.