Site icon Vistara News

Couple ends life : ಮಗನ ಸಾವಿನ ಕೊರಗು; ಕೃಷ್ಣರಾಜ ನಾಲೆಗೆ ಹಾರಿ ದಂಪತಿ ಆತ್ಮಹತ್ಯೆ

Couple death in Ramanathpuram

ಹಾಸನ: ಮಕ್ಕಳ ಸಾವಿನ ಕೊರಗು ಹೆತ್ತವರನ್ನು ಯಾವ ಮಟ್ಟಕ್ಕೆ ಕಾಡುತ್ತದೆ ಎನ್ನುವುದಕ್ಕೆ ಈ ಘಟನೆಯೂ ಒಂದು ಉದಾಹರಣೆ. ಮಗ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರೂ ಅದರ ಕೊರಗಿನಲ್ಲೇ ಜೀವನ ಕಳೆಯುತ್ತಿದ್ದ ದಂಪತಿ ಈಗ ನಾಲೆಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ (Couple ends life).

ಹಾಸನ ಜಿಲ್ಲೆಯ (Hassana News) ಅರಕಲಗೂಡು ತಾಲ್ಲೂಕಿನ, ರಾಮನಾಥಪುರ ಗ್ರಾಮದ ಬಳಿ ಕೃಷ್ಣರಾಜ ನಾಲೆಗೆ (Krishnaraja Channel) ಬಿದ್ದು ದಂಪತಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ಮೂಲದ ರಂಗಸ್ವಾಮಿ (49), ಕನಕ (45) ಮೃತ ದಂಪತಿ.

ಅವರ ಮಗ ಕೆಲವು ವರ್ಷದ ಹಿಂದೆ ಮೃತಪಟ್ಟಿದ್ದ. ಅದಾದ ಬಳಿಕ ಅವನ ನೆನಪಿನಲ್ಲಿಯೇ ದಂಪತಿ ಖಿನ್ನರಾಗಿದ್ದರು. ಇದೀಗ ಅವರಿಬ್ಬರು ಅದೇ ನೋವಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಇವರು ಬೈಕ್‌ನಲ್ಲಿ ಬಂದು ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಮೂರು ದಿನಗಳಿಂದ ಅವರು ನಾಪತ್ತೆಯಾಗಿದ್ದರು. ಜತೆಗೆ ಮೂರು ದಿನಗಳಿಂದ ಇವರ ಬೈಕ್‌ ನಾಲೆಯ ಬಳಿ ನಿಂತಿದ್ದನ್ನು ಯಾರೋ ಗಮನಿಸಿದ್ದರು. ಇದೀಗ ಅವರ ಶವ ಪತ್ತೆಯಾಗುವ ಮೂಲಕ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ.

ಮರಣೋತ್ತರ ಪರೀಕ್ಷೆ ಬಳಿಕ‌ ಮೃತದೇಹ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.‌

ಇದನ್ನೂ ಓದಿ: Pervert Husband: ಗೆಳೆಯರ ಜತೆಯೇ ಮಲಗಲು ಒತ್ತಾಯಿಸಿದ ವಿಕೃತ ಪತಿ! ಪತ್ನಿಯ ದೂರು

Self Harming : 5 ವರ್ಷದ ಮಗಳೊಂದಿಗೆ ಸೂಳೆಕೆರೆಗೆ ಹಾರಿ ತಾಯಿ ಆತ್ಮಹತ್ಯೆ

ದಾವಣಗೆರೆ: ತಾಯಿಯೊಬ್ಬಳು ಐದು ವರ್ಷದ ಪುಟ್ಟ ಮಗಳನ್ನು ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಾವಣಗೆರೆ ಜಿಲ್ಲೆಯ (Davanagere News) ಚನ್ನಗಿರಿ ತಾಲೂಕಿನ ‌ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ (Soolekere in Davanagere) ಘಟನೆ ನಡೆದಿದೆ. ಕವಿತಾ (27) ಎಂಬವರೇ ತಮ್ಮ ಮಗಳು ನಿಹಾರಿಕಾ (05) ಜತೆ ಆತ್ಮಹತ್ಯೆ (Self Harming) ಮಾಡಿಕೊಂಡವರು.

ಕವಿತಾ ಅವರು ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ ಎಂಬುವರ ಪತ್ನಿ. ಕವಿತಾ ಮತ್ತು ಮಗಳು ಕಳೆದ ಶುಕ್ರವಾರದಿಂದಲೇ ನಾಪತ್ತೆಯಾಗಿದ್ದರು. ಈ ಬಗ್ಗೆ ಪತಿ‌ ಮಂಜುನಾಥ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪೊಲೀಸರು ಮತ್ತು ಸಂಬಂಧಿಕರು, ಬಂಧುಗಳು ಸಾಕಷ್ಟು ಹುಡುಕಾಟ ನಡೆಸಿದರೂ ತಾಯಿ ಮಗಳು ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ತಾಯಿ ಮಗಳ ಶವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ‌ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ ಪತ್ತೆಯಾಗಿದೆ. ಆರ ವರ್ಷದ ಹಿಂದೆ ಮದುವೆಯಾದ ಕವಿತಾ ನಿತ್ಯ ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದರು ಎನ್ನಲಾಗಿದೆ.

Exit mobile version