Site icon Vistara News

ಗ್ರಾಮದ ಬೀದಿಗಳಲ್ಲಿ ಕಾಡಾನೆ ಗಸ್ತು, ಜನ ಮನೆಯೊಳಗೇ ಸುಸ್ತು!

elephant

ಹಾಸನ: ಹಾಸನದ ಮಲೆನಾಡಿನ ಗ್ರಾಮಗಳ ಬೀದಿಗಳಲ್ಲಿ ಕಾಡಾನೆಗಳು ರಾಜಾರೋಷವಾಗಿ ತಿರುಗಾಡುತ್ತಿವೆ. ಹಾಡಹಗಲೇ ಊರಿನ ಬೀದಿಗಳಲ್ಲಿ ಇವು ಬಂದರೆ ಜನ ಬೆದರಿ ಗಪ್‌ಚುಪ್‌ ಎಂದು ಮನೆ ಸೇರಿಕೊಂಡುಬಿಡುತ್ತಾರೆ.

ಆಹಾರ ಅರಸಿ ಕಾಡಿನಿಂದ ನಾಡಿಗೆ ಮುಖ ಮಾಡುತ್ತಿರುವ ಒಂಟಿ ಸಲಗಗಳನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮಗಳಲ್ಲಿ ನಿತ್ಯವೂ ಕಾಣಬಹುದಾಗಿದೆ. ಗ್ರಾಮದೊಳಗೆ ಗಂಭೀರ ಹೆಜ್ಜೆ ಹಾಕುತ್ತ ಮನೆ ಮುಂದೆ ಬರುವ ಗಜರಾಜನನ್ನು ತಡೆಯುವ ಯಾವ ಉಪಾಯವೂ ಫಲಿಸುತ್ತಿಲ್ಲ. ಇಲ್ಲಿನ ಹಲಸುಲಿಗೆ, ಮಠಸಾಗರ, ಉದೇವಾರ, ಜಾನೇಕೆರೆ, ಸತ್ತಿಗಾಲ್, ಹಾಲೇಬೇಲೂರು, ಸುಂಡೇಕೆರೆ ಮುಂತಾದ ಅನೇಕ ಗ್ರಾಮಗಳಲ್ಲಿ ಕಾಡಾನೆ ಓಡಾಡುತ್ತಿದ್ದು, ತಾಲೂಕಿನ ಹೊಂಕರವಳ್ಳಿ, ಬಾಳ್ಳುಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಕೂಡ ಕಂಡುಬರುತ್ತಿವೆ.

ಕಳೆದ ಎರಡು ದಿನಗಳಿಂದ ಇವು ಗ್ರಾಮಗಳ ಸುತ್ತಮುತ್ತವೇ ಬೀಡು ಬಿಟ್ಟಿವೆ. ಬೆಳ್ಳಂಬೆಳಿಗ್ಗೆ ಎದ್ದ ತಕ್ಷಣ ಮನೆ ಬಾಗಿಲು ತೆಗೆದರೆ ಸಾಕು ಗಜರಾಜನ ದರ್ಶನವಾಗುತ್ತದೆ. ಇದೊಂಥರಾ ಗಜರಾಜನ ಕರ್ಫ್ಯೂ. ನಿತ್ಯದ ಕೆಲಸಕ್ಕಾಗಿ ಮನೆಯಿಂದ ಹೊರಹೊರಡಲೇ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಜನ. ಕಾಡಾನೆ ಸಮಸ್ಯೆಯಿಂದ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Ramanagara News | ತಾಯಿ ಕಳೆದುಕೊಂಡು ನಿತ್ರಾಣಗೊಂಡ ಆನೆಮರಿಗೆ ಗ್ರಾಮಸ್ಥರ ಆಶ್ರಯ

Exit mobile version