ಹಾಸನ: ಗ್ಯಾಂಗ್ ವಾರ್ ಒಂದರಲ್ಲಿ ಬೆಂಗಳೂರಿನ ರೌಡಿಶೀಟರ್ ಲಿಂಗರಾಜು ಎಂಬಾತನ ಕೊಲೆ ಪ್ರಕರಣದಲ್ಲಿ ಆರೋಫಿಯಾಗಿದ್ದ ಯುವಕನನ್ನು ಹತ್ಯೆ ಮಾಡಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಲಿಂಗರಾಜು ಕಳೆದ ವರ್ಷ ಚನ್ನರಾಯಪಟ್ಟಣದ ಬಳಿಯ ಗ್ರಾಮದಲ್ಲಿ ನಡೆದಿತ್ತು.
ಈ ಪ್ರಕರಣದಲ್ಲಿ ಒಟ್ಟು 15 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಕೇಸ್ ಸಾಕ್ಷಾಧಾರಗಳಿಲ್ಲದೇ ಖುಲಾಸೆಯಾಯ್ತು. ಈ ಪ್ರಕರಣದಲ್ಲಿ ಕಮರವಳ್ಳಿ ಗ್ರಾಮದ ಸುದೀಪ್ 10ನೇ ಆರೋಪಿಯಾಗಿದ್ದ.
ಇದನ್ನೂ ಓದಿ | ಜುಗುರಾಜ್ ಕೊಲೆ ಪ್ರಕರಣ: ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..
ಈತನೂ ಬಿಡುಗಡೆಯಾಗಿ ಒಂದು ದಿನವಷ್ಟೆ ಆಗಿತ್ತು. ಸ್ನೇಹಿತನ ಜತೆಗೆ ಹಿರೀಸಾವೆಯಿಂದ ಗ್ರಾಮಕ್ಕೆ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿತ್ತು. ಸುದೀಪ್ ಹಾಗೂ ಸ್ನೇಹಿತ ಇಬ್ಬರೂ ಕೆಳಗೆ ಬಿದ್ದಿದ್ದರು. ನೀನು ಇಲ್ಲಿಂದ ಓಡಿಹೋಗು, ಇಲ್ಲದಿದ್ದರೆ ನಿನ್ನನ್ನೂ ಕೊಲ್ಲುತ್ತೇವೆ ಎಂದು ಕಾರನಲ್ಲಿದ್ದವರು ಹೇಳಿದ್ದರು. ಅಲ್ಲಿಂದ ಮಂಜುನಾಥ್ ಓಡಿ ಹೋಗುತ್ತಿದ್ದಂತೆ ಸುದೀಪ್ ಮೇಲೆ ಸುತ್ತಿಗೆ ಮತ್ತಿತರ ಹತಾರಗಳಿಂದ ಮನಬಂದಂತೆ ದಾಳಿ ಮಾಡಲಾಗಿತ್ತು.
ಮುಖದ ಗುರುತೇ ಸಿಗದಂತೆ ಬರ್ಬರವಾಗಿ ನಡೆದಿದ್ದ ಹತ್ಯೆ, ಎಂಥವರನ್ನೂ ಬಚ್ಚಿಬೀಳಿಸುವಂತಿತ್ತು. ಸುದೀಪ್ ಹತ್ಯೆ ನಡೆದು ಸುಮಾರು 15 ದಿನಗಳ ನಂತರ 8 ಆರೋಫಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುದರ್ಶನ್, ದಿಲೀಪ್, ಸಚಿನ್, ಸಂಜಯ್, ಮಂಜುನಾಥ್, ನಾಗರಾಜು, ಅಜಿತ್, ಚರಣ್ ಎಂದು ಗುರುತಿಸಲಾಗಿದೆ.
ತನ್ನ ಭಾವವನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಬ ಕಾರಣಕ್ಕೆ ಭಾವಮೈದುನನೇ ಸ್ಕೆಚ್ ಹಾಕಿ ಸುದೀಪ್‌ನ ಹತ್ಯೆ ಮಾಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರೀತಿಯ ರೌಡಿಗಳ ಗ್ಯಾಂಗ್‌ವಾರ್ ಇದೀಗ ಹಾಸನ ಜಿಲ್ಲೆಗೂ ಆವರಿಸಿಕೊಂಡಿದ್ದು, ಸ್ಥಳೀಯ ಜನರನ್ನು ಬೆಚ್ಚಿ ಬೀಳಿಸಿದೆ. ಒಂದೇ ಗ್ರಾಮದ ಸುತ್ತಮುತ್ತ ಎರಡು ಮರ್ಡರ್ ಆಗಿರುವುದು ಗ್ರಾಮಸ್ಥರ ನಿದ್ದೆಗೆಡುವಂತೆ ಮಾಡಿದೆ.
ಇದನ್ನೂ ಓದಿ: LOVE JIHAD | ಹಿಂದೂ ಯುವತಿಯ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಲು ಆಗ್ರಹ