ಹಾಸನ: ಹಾಸನ ಜಿಲ್ಲೆಯ (Hasana News) ಹೊಳೆನರಸೀಪುರದಲ್ಲಿ ಭಾನುವಾರ ಅದ್ಧೂರಿಯಾಗಿ ಶ್ರೀಲಕ್ಷ್ಮೀನರಸಿಂಹ ರಥೋತ್ಸವ (Holenarasipura Lakshminarasimha Rathotsava) ನಡೆಯುತ್ತಿದೆ. ಜನರು ರಥದ ಹಗ್ಗ ಎಳೆಯುವಾಗ ನೂಕುನುಗ್ಗಲಾಗಿ, ಕಾಲ್ತುಳಿತ ಉಂಟಾಗಿದೆ. ರಥ ಎಳೆಯುವಾಗ ಏಕಾಏಕಿ ಹತ್ತಾರು ಮಂದಿ ಕೆಳಗೆ ಬಿದ್ದಿದ್ದಾರೆ.
ಗಾಬರಿಯಿಂದ ಒಬ್ಬರ ಮೇಲೆ ಒಬ್ಬರು ಬಿದ್ದು, ತುಳಿದಾಡಿಕೊಂಡು ಓಡಿದ್ದಾರೆ. ಕೂಡಲೇ ಅಲ್ಲಿದ್ದವರು ಕೆಳಗೆ ಬಿದ್ದವರನ್ನು ಮೇಲೆತ್ತಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.
ಹೊಳೆನರಸೀಪುರ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ, ಪತ್ನಿ ಭವಾನಿ ರೇವಣ್ಣ, (Bhavani Revanna) ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಭಾಗಿಯಾಗಿದ್ದರು. ಲಕ್ಷ್ಮೀ ನರಸಿಂಹ ಸ್ವಾಮಿಗೆ ಹಾಗೂ ಉತ್ಸವ ಮೂರ್ತಿಗೂ ಪೂಜೆ ಸಲ್ಲಿಸಿದ್ದರು.
ಇದೇ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕುಟುಂಬದವರು ರಥದ ಮೇಲೆ ಏರಿ ಪೂಜೆ ಸಲ್ಲಿಸಿ ಕುಳಿತಿದ್ದರು. ಈ ವೇಳೆ ಭಕ್ತರು ರಥಕ್ಕೆ ಎಸೆದ ಬಾಳೆಹಣ್ಣು ಭವಾನಿ ರೇವಣ್ಣ ಮೇಲೆ ರಭಸವಾಗಿ ಬಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ