Site icon Vistara News

JDS Politics: 4ನೇ ಹಂತದ ಪಂಚರತ್ನ ವೇಳಾಪಟ್ಟಿ ಘೋಷಣೆ: ಹಾಸನ ವಿಧಾನಸಭಾ ಕ್ಷೇತ್ರ ಮಿಸ್ಸಿಂಗ್‌!

jds-politics-fourth phase pancharatna yatre date announced

#image_title

ಬೆಂಗಳೂರು: ಜೆಡಿಎಸ್‌ ಸರ್ಕಾರ (JDS Politics) ರಚನೆಯಾದರೆ ಕೈಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಿಳಿಸಲು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ಯಾತ್ರೆಯ 4 ನೇ ಹಂತಕ್ಕೆ ಮಾರ್ಚ್‌ 8ರಿಂದ ಚಾಲನೆ ನೀಡಲಾಗುತ್ತಿದೆ.

ಮಾರ್ಚ್ 8 ರಿಂದ 26 ವರೆಗೂ ರಥಯಾತ್ರೆ ನಡೆಯಲಿದ್ದು, ತಿಪಟೂರಿನಿಂದ ಆರಂಭವಾಗಿ ಮಾರ್ಚ್ 26 ರಂದು ಸಮರೋಪ ಸಮಾರಂಭ ನಡೆಯಲಿದೆ. 6 ಜಿಲ್ಲೆಗಳ 22 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿರುವ 4ನೇ ಹಂತದ ಪಂಚರತ್ನ ರಥಯಾತ್ರೆಯಲ್ಲಿ ಹಾಸನ ಜಿಲ್ಲೆಯನ್ನೂ ಸೇರಿಸಲಾಗಿದೆ.

ಬಾರಿ ಕುತೂಹಲ ಕೆರಳಿಸಿರುವ ಹಾಸನ ಜಿಲ್ಲೆಯಲ್ಲೂ ಪಂಚರತ್ನ ರಥಯಾತ್ರೆಗೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್‌ 9- ಬೇಲೂರು, ಮಾರ್ಚ್‌ 10- ಅರಸೀಕೆರೆ, ಮಾರ್ಚ್‌ 13- ಚನ್ನರಾಯಪಟ್ಟಣ, ಮಾರ್ಚ್‌ 14-ಸಕಲೇಶಪುರ, ಮಾರ್ಚ್‌ 15-ಅರಕಲಗೂಡು, ಮಾರ್ಚ್‌ 16-ಹೊಳೆನರಸೀಪುರದಲ್ಲಿ ಸಂಚರಿಸಲಿದೆ. ಆದರೆ ಟಿಕೆಟ್‌ ಗೊಂದಲಕ್ಕೆ ಕಾರಣವಾಗಿರುವ ಹಾಸನ ವಿಧಾನಸಭೆ ಕ್ಷೇತ್ರವನ್ನು ಮಾತ್ರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿಲ್ಲ.

ಹಾಸನ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎನ್ನುವ ವಿಚಾರದಲ್ಲಿ ಜೆಡಿಎಸ್‌ ಕುಟುಂಬದಲ್ಲಿ ಗೊಂದಲ ನಿರ್ಮಾಣವಾಗಿದೆ. ಮಾಜಿ ಶಾಸಕ ಎಚ್‌.ಎಸ್‌. ಪ್ರಕಾಶ್‌ ಪುತ್ರ ಸ್ವರೂಪ್‌ಗೆ ಟಿಕೆಟ್‌ ನೀಡಬೇಕು ಎಂದು ಸ್ಥಳೀಯ ಕಾರ್ಯಕರ್ತರ ಒತ್ತಾಯವಾಗಿದ್ದು, ಭವಾನಿ ರೇವಣ್ಣ ಸ್ವತಃ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: JDS Politics: ಮುಗಿಯದ ಹಾಸನ ಜೆಡಿಎಸ್‌ ಟಿಕೆಟ್ ಪ್ರಹಸನ; ಭವಾನಿ ರೇವಣ್ಣಗೆ ಟಿಕೆಟ್ ಘೋಷಿಸುವಂತೆ ಕಾರ್ಯಕರ್ತರ ಪ್ರತಿಭಟನೆ

ಭವಾನಿ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಎರಡು ಬಾರಿ ಸ್ಪಷ್ಟನೆ ನೀಡಿದ್ದರೂ ವಿವಾದ ತಣ್ಣಗಾಗಿಲ್ಲ. ಇದೆಲ್ಲದರ ನಡುವೆ ಸ್ವತಃ ಎಚ್‌.ಡಿ. ರೇವಣ್ಣ ಅವರೇ ಕಣಕ್ಕಿಳಿಯಬಹುದು ಎಂಬ ಲೆಕ್ಕಾಚಾರವೂ ನಡೆಯುತ್ತಿದ್ದು, 4ನೇ ಹಂತದ ಪಂಚರತ್ನ ಯಾತ್ರೆಯ ನಡುವೆ ಮಾರ್ಚ್‌ 11ರಂದು ವಿಶ್ರಾಂತಿ ನೀಡಲಾಗಿದೆ. ಈ ದಿನವೇ ಹಾಸನ ಜಿಲ್ಲೆ ಸೇರಿ ರಾಜ್ಯದ ಇತರೆ ಕ್ಷೇತ್ರಗಳ ಟಕೆಟ್‌ ಘೋಷಣೆ ಮಾಡಬಹುದು ಎಂಬ ಮಾತು ಕೇಳಿಬರುತ್ತಿದೆ.

Exit mobile version