ಹಾಸನ: ಪಕ್ಷದೊಂದಿಗೆ ಸುಮಾರು ಎರಡು ವರ್ಷದಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಕಡೆಗೆ ವಾಲಲು ಸಿದ್ಧವಾಗಿರುವ ಅರಸೀಕೆರೆ ಜೆಡಿಎಸ್(JDS Politics) ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕುರುಬ ಸಮುದಾಯದ ಅಶೋಕ್ ಭಾಣಾವರ (ಬಿ.ಎಸ್. ಅಶೋಕ್) ಅವರನ್ನು ಅಭ್ಯರ್ಥಿಯಾಗಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಅರಸೀಕೆರೆಯಲ್ಲಿ ಆಯೋಜಿಸಿದ್ದ ಪಂಚರತ್ನ ಯಾತ್ರೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದರು. ಭಾಷಣದುದ್ದಕ್ಕೂ ಶಿವಲಿಂಗೇಗೌಡ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.
ಜನತಾದಳ ಬಾವುಟ ಕೈಯಲ್ಲಿ ಹಿಡಿದರೆ ಅರಸೀಕೆರೆಯಲ್ಲಿ ಜನ ಬರಲ್ಲ, ಅದುಕ್ಕೋಸ್ಕರವಾಗಿ ಸ್ವಲದಿನ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗಲು ಸಮಯ ಕೊಡಿ ಅಂತ ಈಗಿನ ಶಾಸಕರು ಹೇಳುತ್ತಿದ್ದಾರೆ. ನಾವು ಕಾಯ್ದು, ಕಾಯ್ದು, ಕಾಯುತ್ತಲೇ ಇದ್ದೆವು. ಆದ್ರೆ ಜನತಾದಳ ಮುಗಿಸಲಿಕ್ಕೆ ಪುಣ್ಯಾತ್ಮರು ಹೊರಟರು. ಎರಡು ದಿನಗಳಿಂದ ಹಣಕೊಟ್ಟ ಸಭೆಗೆ ಹೋಗಬೇಡಿ ಅಂತ ಹೇಳಿದ್ರು. ಇದು ಹೊಸದಾಗಿ ಪ್ರಥಮವಾಗಿ ಅರಸೀಕೆರೆಯಲ್ಲಿ ನಡೆದಿರೋದು.
ನಾನು ಇದೇ ಮೊದಲು ಬೇರೆ ಪಕ್ಷದ ಸಭೆಗೆ ಹೋಗಬೇಡಿ ಅಂತ ಹಣ ಕೊಟ್ಟಿರೋದನ್ನು ನೋಡಿರೋದು. ಅದೆಲ್ಲವನ್ನು ಧಿಕ್ಕರಿಸಿ ಅರಸೀಕೆರೆ ಮಹಾಜನತೆ ನಿರೂಪಿಸಿದ್ದೀರಿ. ನನ್ನ ಕೊನೆಯ ಉಸಿರು ಇರುವವರೆಗೆ ಯಾವುದೇ ಲೋಪ, ಧಕ್ಕೆ ಬಾರದ ರೀತಿಯಲ್ಲಿ ನಿಮ್ಮ ಜತೆ ಇರುತ್ತೇವೆ. ಇದು ದೇವರ ಸಭೆ, ನೀವೆಲ್ಲ ನನಗೆ ದೇವರು ಎಂದರು.
ಇವತ್ತಿನ ಜೆಡಿಎಸ್ ಕಾರ್ಯಕ್ರಮ ಜೆಡಿಎಸ್ ಪುನಶ್ಚೇತನ ಕಾರ್ಯಕ್ರಮ. ನನಗೆ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದ್ದರೂ ನಿತ್ಯ18 ಗಂಟೆ ಹೋರಾಟ ಮಾಡುತ್ರಿದ್ದೇನೆ. ಇದಕ್ಕೆ ಜನರ ಪ್ರೀತಿ ವಿಶ್ವಾಸ ಕಾರಣ. ನಾನು ಅರಸೀಕೆರೆ ಜನತೆ ಮಾತ್ರ ಅಲ್ಲ ನಾಡಿನ ಜನತೆಗೆ ಹೇಳುತ್ತೇನೆ, ನಮ್ಮ ತಂದೆ ಪಕ್ಷ ರೈತರು ಎಂದು ಚಿಂತನೆ ಮಾಡುತ್ತಾರೆ.
ಕುಮಾರಸ್ವಾಮಿ ಮಾತನಾಡುವಾಗ ಮಧ್ಯಪ್ರವೇಶಿಸಿದ ಮಾಜಿಸಚಿವ ಎಚ್.ಡಿ.ರೇವಣ್ಣ, ಕುರುಬರು ನಿಂತ್ರೆ ಲಾರ್ಟಿ ಹೊಡೆಯುತ್ತದೆ ಎಂದು ಕೋಡಿಮಠದ ಸ್ವಾಮಿ ಭವಿಷ್ಯ ಹೇಳವ್ರಂತೆ ಎಂದು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಂಇ, ಹಾಗಾದರೆ ಅಶೋಕ್‌ಗೆ ಲಕ್ ಹೊಡೆಯುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಅಂದರೆ ಪರೋಕ್ಷವಾಗಿ, ಅರಸೀಕೆರೆಗೆ ಅಶೋಕ್ ಬಾಣಾವರ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಣೆ ಮಾಡಿದರು.
ಪಂಚರತ್ನ ಯಾತ್ರೆ ನಡೆಸುವಾಗ ಪ್ರತಿದಿನ ಒಂದು ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ಎಲ್ಲ ಕಡೆಯಲ್ಲಿಯೂ ದೇವರ ಪ್ರಸಾದ ಆಗುತ್ತಿದೆ. ಇದು ಕಾಂಗ್ರೆಸ್‌ನವರನ್ನೂ ಕಂಗೆಡಿಸಿದೆ. ಜೆಡಿಎಸ್‌ಗೆ ಹೋದ ಕಡೆಯೆಲ್ಲ ಹೀಗೆ ದೇವರ ಪ್ರಸಾದ ಆಗ್ತಾ ಇದೆಯಲ್ಲ ಎಂದು ಜ್ಯೋತಿಷ ಕೇಳಿದ್ದಾರಂತೆ. ಈ ಹಿಂದೆ ಇಬ್ರಾಹಿಂ ಅವರು ಜೆಡಿಎಸ್ ಅಧ್ಯಕ್ಷರಾಗಿದ್ದಾಗ ದೇವೇಗೌಡರು ಪ್ರಧಾನಿಯಾದರು. ಅವರ ಕಾಲ್ಗುಣ ಚೆನ್ನಾಗಿದೆ
ದೇವೇಗೌಡರ ಭಾವನೆಗಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ನಮ್ನ ತಂದೆಯವರನ್ನು ಗೆಲ್ಲಿಸಿದಿರಿ, ಸೋಲಿಸಿದಿರಿ ಆದರೆ ಪ್ರೀತಿ ವಿಶ್ವಾಸ ಎಂದು ಕೊರತೆ ಮಾಡಿಲ್ಲ. ಹಾಸನಾಂಬೆಯ ಶಕ್ತಿ, ನಾನು ಕುಮಾರಸ್ವಾಮಿ ಆಗಿ ಗುರ್ತಿಸಿಕೊಳ್ಳುವಂತೆ ಮಾಡಿದೆ. 2004 ರ ಚುನಾವಣೆಯಲ್ಲಿ ಗಂಡಸಿ ಕ್ಷೇತ್ರದಲ್ಲಿ ರೇವಣ್ಣ ದೇವೇಗೌಡರ ಸಹಕಾರದಲ್ಲಿ ಕೇವಲ 14 ಮತಗಳ ಅಂತರದ ಸೋತರು. ಆ ವ್ಯಕ್ತಿಗೆ(ಶಿವಲಿಂಗೇಗೌಡ) ನಾನು ಸಿಎಂ ಆದಾಗ ಮುಂದಿನ ಶಾಸಕರಾಗಲು ರೇವಣ್ಣ ಶಕ್ತಿಯನ್ನು ಧಾರೆ ಎರೆದಿದ್ದಾರೆ. ಅವರು ಕಾಂಟ್ರಾಕ್ಟ್ ಮಾಡಲು, ಎಷ್ಟು ಅವಕಾಶ ಕೊಟ್ಟೆವು.
ರಾಮನಗರದಲ್ಲಿ ಕೆಲಸ ಮಾಡಿದಾಗಲು ನಾವು ಮಾತನಾಡಲಿಲ್ಲ. ಒಂದೊಂದು ಚುನಾವಣೆಯಲ್ಲಿ ಅವರು ಯಾವ ರೀತಿಯಲ್ಲಿ ನಡೆದು ಕೊಂಡರು ಎಂದು ಗೊತ್ತಿದೆ. ಚುನಾವಣೆ ಗೆಲ್ಲಲು ಯಾರ ಕಾಲು ಬೇಕಿದ್ರು ಹಿಡಿತಾರೆ ಏನು ಬೇಕಿದ್ರು ಮಾಡ್ತಾರೆ. ಅವರೇ ಹೇಳಿದ ಹಾಗೆ, ದುಡುಕದಂತೆ ರೇವಣ್ಣ ನಿನ್ನೆಯೂ ಹೇಳಿದ್ದಾರೆ. ಇದು ರೇವಣ್ಣ ಅವರ ದೊಡ್ಡ ತನ ತೋರಿಸುತ್ತದೆ. ನಾನೇ ಕೇಳಿದಾಗ ಅಣ್ಣ ಅರಸೀಕೆರೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಅಂದಿದ್ದರು.
ಮಾಡಲಿ ತೊಂದರೆ ಇಲ್ಲ, ಹಾಗಿದ್ರೆ ದೇವೇಗೌಡರು ರೇವಣ್ಣ ಇವರಿಗೆ ಶಕ್ತಿ ತುಂಬಿಲ್ಲವೆ? ನಾನು ಎಂದು ಜಾತಿ ರಾಜಕೀಯ ಮಾಡಿಲ್ಲ. ಒಕ್ಕಲಿಗ ಮತಗಳು ಕಡಿಮೆ ಇವೆ ಬೇರೆ ಜಾತಿ ಒಗ್ಗೂಡಿಸಬೇಕು ಅಂತಾರೆ ಅದಕ್ಕೆ ನಮ್ಮ ಸಹಮತವು ಇದೆ. ಆದರೆ ಒಂದು ಜಾತಿಗೆ ಸೀಮಿತವಾಗಿ ಯಾರೂ ಕೆಲಸ ಮಾಡಬಾರದು. ಈ ವ್ಯಕ್ತಿ ಗೆದ್ದು ಈಗ ಅವರಿಗೆ ದೇವೇಗೌಡರ ಹೆಸರು ಹೇಳಿದ್ರೆ ಮತ ಬರಲ್ಲ ಅಂತಾರೆ.
ಇದನ್ನೂ ಓದಿ: ಜೆಡಿಎಸ್ ಸಮಾಲೋಚನಾ ಸಭೆಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಗೈರು; ಪಕ್ಷದಿಂದ ಮತ್ತಷ್ಟು ದೂರ?
ದೇವೇಗೌಡರು ಕುಮಾರಸ್ವಾಮಿ ಅವರ ಹೆಸರು ಹೇಳಿದ್ರೆ ಓಟ್ ಒತ್ರುತ್ತಾರಾ ಅಂತಾರೆ. ಹೌದು ನಮ್ಮಿಂದ ನೀವು ಗೆದ್ದಿದಿರಾ ಎಂದು ಹೇಳಿಲ್ಲ ಆದರೆ ನಮ್ನ ಸಹಮಾರೆ ಇಲ್ಲವೇ? ಒಳ್ಳೆಯ ತನ ಇದ್ದರೆ ಹೊಗಳಲಿ ಏನು ಸಮಸ್ಯೆ ಇಲ್ಲ. ಸಿದ್ದರಾಮಯ್ಯ ಅವರನ್ನು ಹೊಗಳುತ್ತಿದ್ದಾರೆ. ಆದರೆ ಅಕಸ್ಮಾತ್ ಸಿದ್ದರಾಮಯ್ಯಗೆ ಹಿನ್ನಡೆಯಾದರೆ ಅವರ ವಿರುಧ್ದವು ಮಾತಾಡ್ತಾರೆ. ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರ್ತಾರೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇದೇನು ನನಗೆ ಆಶ್ಚರ್ಯ ಅಲ್ಲ, ಇದು ನನಗೆ ಮೊದಲೇ ಗೊತ್ತಿತ್ತು. ಈ ವ್ಯಕ್ತಿ ಹಂತ ಹಂತದಲ್ಲಿ ಯಾವ ರೀತಿ ನಡೆದು ಕೊಂಡಿದಾರೆ ಎನ್ನುವುದು ತಿಳಿದಿದೆ. ಇವರಿಗೆ ನಾವು ಯಾವುದೇ ದ್ರೋಹ ಮಾಡಿಲ್ಲ.
ಅರಸೀಕೆರೆಗೆ ಇಂಜಿನಿಯರಿಂಗ್ ಕಾಲೇಜ್ ಬೇಕು ಎಂದಾಗ ವಿರೋಧದ ನಡುವೆ ಕೂಡ ಕೊಟ್ಟೆ. ಕಳೆದ ಎರಡು ವರ್ಷದಿಂದ ಕಳ್ಳಾಟ ಆಡಿಕೊಂಡು ಬಂದರು. ನಾನು ಜೆಡಿಎಸ್ ಶಾಸಕ ಎಂದು ನಿನ್ನೆಯೂ ಅವರು ಹೇಳಿದಾರೆ. ಕಾಂಗ್ರೆಸ್ ಅಭ್ಯರ್ಥಿ ಆದರೆ ಐವತ್ತು ಸಾವಿರ ಮತದಿಂದ ಗೆಲ್ತಾರಂತಲ್ಲಾ? ನಾನು ರಾಜ್ಯದ ಬಡತನ ಹೋಗಲಾಡಿಸಲು ಹೋರಾಟ ಮಾಡುತ್ತಿದ್ದೇನೆ. ದೇವರ ಆಶೀರ್ವಾದದಿಂದ ಎರಡು ಬಾರಿ ಸಿಎಂ ಆಗಿದ್ದೇನೆ.
ಶಾಸಕಾಂಗ ಪಕ್ಷದ ಸಭೆಗೆ ಕರೆದರೂ ಬರುವುದಿಲ್ಲ. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲವೇ? ಎರಡು ಬಾರಿ ಸಿಎಂ ಆಗಿದ್ದಾಗಲೂ ಈ ಕ್ಷೇತ್ರಕ್ಕೆ ಏನೇನು ಕೊಟ್ಟಿದ್ದೇನೆ ಎಂದು ಹೇಳಲು ಸಿದ್ಧನಾಗಿದ್ದೇನೆ ಎಂದರು.