Site icon Vistara News

Kodi Mutt Swameeji : ಸಿದ್ದರಾಮಯ್ಯ ಸಿಎಂ ಭವಿಷ್ಯ ಸಂಸತ್‌ ಎಲೆಕ್ಷನ್‌ ಮೇಲೆ ನಿಂತಿದ್ಯಾ; ಕೋಡಿ ಶ್ರೀಗಳು ನಿಗೂಢವಾಗಿ ಹೇಳಿದ್ದೇನು?

Kodi Mutt swameeji

ಹಾಸನ: ರಾಜ್ಯ ರಾಜಕೀಯದಲ್ಲಿ ಪ್ರಸಕ್ತ ಚರ್ಚೆಯಾಗುತ್ತಿರುವ ಹಲವು ವಿಷಯಗಳಲ್ಲಿ ಪ್ರಮುಖವಾಗಿರುವುದು ಸಿದ್ದರಾಮಯ್ಯ (CM Siddaramaiah) ಅವರು ಐದು ವರ್ಷ ಪೂರ್ಣಾವಧಿ ಸಿಎಂ (Will siddaramaiah survive as full time CM?) ಆಗಿರುತ್ತಾರಾ? ಅಥವಾ ಅಧಿಕಾರ ಬಿಟ್ಟುಕೊಡಬೇಕಾಗುತ್ತದಾ ಎನ್ನುವುದು. ಅದರಲ್ಲೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಖಾತೆ ಸಚಿವ ಕೆ.ಎಚ್‌. ಮುನಿಯಪ್ಪ (KH Muniyappa) ಅವರು ಮಂತ್ರಿಗಳಿಗೆ 30:30 ಸೂತ್ರ ಮಂಡಿಸಿದ ಮೇಲಂತೂ ಈ ಚರ್ಚೆ ಜೋರಾಗಿದೆ. ಈ ಚರ್ಚೆಗೆ ಸಂಬಂಧಿಸಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swameeji) ಬುಧವಾರ ಭವಿಷ್ಯ ನುಡಿದಿದ್ದಾರೆ. ಆದರೆ, ಈ ನಿಗೂಢವಾದ ಉತ್ತರ ನೀಡಿದ್ದಾರೆ.

ಬುಧವಾರ ಕೋಡಿ ಮಠದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಏನು ತೊಂದರೆಯಿಲ್ಲ No Problem for Congress Government) ಎಂದು ಭವಿಷ್ಯ ನುಡಿದರು. ಆದರೆ, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಪಾರ್ಲಿಮೆಂಟ್ ಎಲೆಕ್ಷನ್‌ (Parliament Election) ಆದ್ಮೇಲೆ ತೀರ್ಮಾನ ಆಗುತ್ತದೆ ಎಂದು ಹೇಳಿದರು. ಪಾರ್ಲಿಮೆಂಟ್ ಚುನಾವಣೆ ಬಂದಾಗ ಏನಾಗುತ್ತದೆ? ಯಾವ ಸರ್ಕಾರ ಬರುತ್ತೆ ಅಂತ ಹೇಳ್ತೀನಿ ಎಂದರು ಸ್ವಾಮೀಜಿ.

ಸಂಸತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಅದರ ಕ್ರೆಡಿಟನ್ನು ತೆಗೆದುಕೊಂಡು ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಹುದ್ದೆಯ ಬೇಡಿಕೆ ಇಡುತ್ತಾರಾ? ಒಂದೊಮ್ಮೆ ನಿರೀಕ್ಷಿಸಿದಷ್ಟು ಸೀಟು ಬಾರದೆ ಹೋದರೆ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರಾ ಹೀಗೆ ಯಾವುದನ್ನೂ ಶ್ರೀಗಳು ನೇರವಾಗಿ ಹೇಳಿಲ್ಲ. ಆದರೆ, ಸಂಸತ್‌ ಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಸ್ಥಾನದ ಮೇಲೆ ಪರಿಣಾಮ ಬೀರಲಿದೆ ಎಂದು ಸೂಚ್ಯವಾಗಿ ಹೇಳಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ಅಪಾಯವಿಲ್ಲ

ಆದರೆ, ರಾಜ್ಯ ಸರ್ಕಾರ ಭವಿಷ್ಯ ಮಾತ್ರ ಭದ್ರವಾಗಿದೆ ಎಂಬರ್ಥದಲ್ಲಿ ಸ್ವಾಮೀಜಿ ಭವಿಷ್ಯ ನುಡಿದರು. ʻʻಸ್ಮಶಾನದಲ್ಲಿ ಪಿಶಾಚಿ ಕುಣಿದಂತೆ ಆಗ್ತಾ ಇದೆ, ಏನು ಆಗಲ್ಲ. ನೋಡೋರಿಲ್ಲ, ಕೇಳೋರಿಲ್ಲ, ಆನಂದ ಪಡುವವರಿಲ್ಲʼʼ ಎನ್ನುವುದು ಕೋಡಿ ಶ್ರೀಗಳ ನುಡಿ.

ಶ್ರಾವಣದ ಉತ್ತರಾರ್ಧದಲ್ಲಿ ಕಾದಿದೆಯಾ ಮಳೆ ಅಬ್ಬರ?

ಮಳೆ, ಪ್ರಕೃತಿ ವಿಕೋಪಗಳ ವಿಚಾರದಲ್ಲಿ ಆಗಾಗ ಭವಿಷ್ಯ ನಡೆಯುವ ಸ್ವಾಮೀಜಿ ʻಮಳೆ ಬರುತ್ತೆ ತೊಂದರೆ ಏನಿಲ್ಲʼʼ ಎಂದು ಅಭಯ ನೀಡಿದ್ದಾರೆ. ಈಗಾಗಲೇ ಕಾಲಕ್ಕೆ ಸರಿಯಾಗಿ ಮಳೆ ಬಾರದೆ ತೊಂದರೆಯಾಗಿದೆ, ಇನ್ನೂ ಮಳೆಯ ಲಕ್ಷಣಗಳಿಲ್ಲ ಎನ್ನುವ ಸಂದರ್ಭದಲ್ಲಿ ಸ್ವಾಮೀಜಿಗಳು ಅಭಯ ನೀಡಿದಂತಾಗಿದೆ.

ʻʻಹಿಂದೆ ಒಂದು ಸಾರಿ ಮಳೆ ಬಂದಂತೆ ಇನ್ನೊಂದು ಸಾರಿ ಮಳೆ‌ ಬರುತ್ತೆ. ಮಳೆಗೇನು ತೊಂದರೆ ಆಗಲ್ಲ, ಕಾಲ‌ ಹೇಳ್ತೀನಿ., ಅಷ್ಟೇ ಮಳೆ‌ ಬರುತ್ತೆ. ಅನ್ನಕ್ಕೆ ತೊಂದರೆ ಇಲ್ಲಾʼʼ ಎಂದು ಭವಿಷ್ಯ ನುಡಿದರು ಕೋಡಿ ಶ್ರೀ.

ʻʻವಿಪರೀತ ಮಳೆಯಾಗುವ ಲಕ್ಷಣ ಇದೆ, ಬೇಕಾದಷ್ಟು ಮಳೆ ಬರುತ್ತೆ. ಇನ್ನೂ ಮಳೆ, ಗುಡುಗು, ಭೂಮಿ ಬಿರುಕು ಆಗುವುದು, ದ್ವೇಷಗಳು ಹೆಚ್ಚುತ್ತವೆ, ಅಪಮೃತ್ಯು ಎಲ್ಲಾ ನಡೆಯುತ್ತದೆʼʼ ಎಂದು ಹೇಳಿದ ಸ್ವಾಮೀಜಿ, ʻʻಪ್ರಕೃತಿಯಿಂದಲೂ ಹಾನಿ ಇದೆ, ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ಗೊತ್ತಾಗುತ್ತದೆ. ಶ್ರಾವಣದ‌ ಮಧ್ಯಭಾಗದ ಮೇಲೆ ಕಾರ್ತಿಕದವರೆಗೂ ಮಳೆ ಆಗುತ್ತದೆ. ಮತ್ತೆ ಮಳೆಯಿಂದ ಅಪಾಯ ಆಗುವ ಲಕ್ಷಣಗಳಿವೆʼʼ ಎಂದು ಹೇಳಿದರು.

ಕಳೆದ ಜೂನ್‌ನಲ್ಲೂ ಭವಿಷ್ಯ ನುಡಿದಿದ್ದ ಶ್ರೀಗಳು, ದೇಶಕ್ಕೆ ಒಂದು ಗಂಡಾಂತರ ದೇಶಕ್ಕೆ ಕಾದಿದೆ ಎಂದಿದ್ದರು. ʻʻಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗಲಿವೆ. ಎಲ್ಲೋ ನಡೆದ ಬಾಂಬ್ ದಾಳಿಯಿಂದ ನಮಗೆ ಸಾಕಷ್ಟು ಅನಾಹುತ ಸಂಭವಿಸಲಿದೆʼʼ ಎಂದಿದ್ದರು. ಸಿದ್ದರಾಮಯ್ಯ ಅವರು ಅಧ್ಯಾತ್ಮಿಕವಾಗಿ ನಡೆದುಕೊಂಡರೆ ತೊಂದರೆ ಇಲ್ಲ. ಆಧ್ಯಾತ್ಮ ಬಿಟ್ಟು ಹೋದರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದಿದ್ದರು.

Exit mobile version