Site icon Vistara News

Woman Death: ಮಹಿಳೆ ನೇಣಿನಿಂದ ಸಾವು, ಹೃದಯಾಘಾತ ಎಂದ ಪತಿ ಮನೆಯವರು

anusha death hasan

ಹಾಸನ: ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು (Woman Death), ಆಕೆಯ ಗಂಡನ ಮನೆಯವರು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಹಾಸನ‌ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಅನುಷಾ (21) ಮೃತ ಮಹಿಳೆ. ನಾಲ್ಕೂವರೆ ವರ್ಷದ ಹಿಂದೆ ನೆಟ್ಟೆಕೆರೆ ಗ್ರಾಮದ ಕಿರಣ್ ಎಂಬಾತನ ಜೊತೆಗೆ ಅನುಷಾ ಮದುವೆಯಾಗಿತ್ತು. ಹೃದಯಾಘಾತದಿಂದ ಅನುಷಾ ಸಾವು ಸಂಭವಿಸಿದೆ ಎಂದು ನಿನ್ನೆ ಆಕೆಯ ಪೋಷಕರಿಗೆ ಪತಿಯ ಸಂಬಂಧಿಕರು ಮಾಹಿತಿ ನೀಡಿದ್ದರು.

ನಿನ್ನೆ ನೆಟ್ಟೆಕೆರೆ ಗ್ರಾಮಕ್ಕೆ ಬಂದು ಮೃತದೇಹ ನೋಡಿದ ಮಹಿಳೆ‌ ಸಂಬಂಧಿಕರು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನೇಣಿನಿಂದ ಸಾವಾಗಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ. ನೇಣಿನಿಂದ ಅನುಷಾ ಮೃತಪಟ್ಟಿದ್ದರೂ ತವರಿನ ಸಂಬಂಧಿಕರಿಗೆ ಹೃದಯಾಘಾತ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ನೇಣಿನಿಂದ ಸಾವಾಗಿದೆ ಎಂದಾಗಿದ್ದರೆ ಇದು ಅತ್ಮಹತ್ಯೆಯೊ ಕೊಲೆಯೊ ಎನ್ನುವ ಬಗ್ಗೆ ಅನುಮಾನ ಪರಿಹಾರ ಆಗಬೇಕಿದೆ. ಹೀಗಾಗಿ ಘಟನೆ ಸಂಬಂಧಿಸಿ ಸಮಗ್ರ ತನಿಖೆ ಆಗಬೇಕು ಎಂದು ಅನುಷಾ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.

ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಮರಣೋರ ಪರೀಕ್ಷೆ ನಡೆಸಿ ಪೊಲೀಸರು ಮೃತದೇಹ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: Sagara News: ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ವನಶ್ರೀ ಶಾಲೆ ಸಂಸ್ಥಾಪಕ ಪೊಲೀಸರ ವಶಕ್ಕೆ

Exit mobile version