Site icon Vistara News

Murder Case : ಮದ್ಯಪಾನದ ವೇಳೆ ಹುಟ್ಟಿದ 50 ರೂ. ಜಗಳ; ಕೊಲೆಯಲ್ಲಿ ಅಂತ್ಯ

Murder Case Hassan Ramachandra rudraiah

ಹಾಸನ: ಗೆಳೆಯರು ಜತೆಯಾಗಿ ಕುಳಿತು ಮದ್ಯಪಾನ ಮಾಡುವ ವೇಳೆ ಐವತ್ತು ರೂಪಾಯಿಗಾಗಿ ಹುಟ್ಟಿದ ಜಗಳ (Fight for 50 rupees) ಕೊಲೆಯಲ್ಲಿ ಅಂತ್ಯವಾಗಿದೆ (Murder Case). ರಾಮಚಂದ್ರ ಸಂಜೀವಪ್ಪನವರ (42) ಕೊಲೆಯಾದ ವ್ಯಕ್ತಿ. ರುದ್ರಯ್ಯ ಕೊಂಗವಾಡ ರಾಮಚಂದ್ರನನ್ನು ಕೊಲೆಗೈದ ಆರೋಪಿ.

ಹಾಸನ ಜಿಲ್ಲೆಯ (Hassan News) ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಅರುವನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರುದ್ರಯ್ಯ ಹಾಗೂ ರಾಮಚಂದ್ರ ಬಾಗಲಕೋಟೆ ಜಿಲ್ಲೆ, ಬಾದಾಮಿ ಪಟ್ಟಣದ, ಕಳ್ಳಿಪೇಟೆ ಓಣಿಯ ನಿವಾಸಿಗಳು. ಅವರಿಬ್ಬರೂ ಎರಡು ವಾರಗಳ ಹಿಂದೆ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದರು. ಜತೆಯಾಗಿಯೇ ಕೆಲಸ ಮಾಡುವ ಉತ್ಸಾಹದಿಂದ ಅವರಿಬ್ಬರೂ ಅರುವನಹಳ್ಳಿ ಗ್ರಾಮದ ಕೆಪಿಐ ಇಟ್ಟಿಗೆ ಕಾರ್ಖಾನೆಗೆ ಬಂದಿದ್ದರು. ಕೆಲಸವನ್ನೂ ಮಾಡುತ್ತಿದ್ದರು.

ಈ ನಡುವೆ, ಬುಧವಾರ ರಾತ್ರಿ ಅವರಿಬ್ಬರೂ ಜತೆಯಾಗಿ ಕುಳಿತು ಕುಡಿಯಲು ಆರಂಭ ಮಾಡಿದ್ದಾರೆ. ಹಿಂದಿನಿಂದಲೂ ಗೆಳೆಯರಾಗಿದ್ದರಿಂದ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈ ನಡುವೆ, ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿದೆ. ಯಾವತ್ತೋ ತೆಗೆದುಕೊಂಡ 50 ರೂ. ವಿಚಾರದಲ್ಲಿ ಅವರಿಬ್ಬರೂ ಜಗಳ ಶುರು ಮಾಡಿದ್ದಾರೆ.

ಜಗಳ ವಿಕೋಪಕ್ಕೆ ರಾಮಚಂದ್ರನ ಮೇಲೆ ರುದ್ರಯ್ಯ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರಾಮಚಂದ್ರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Murder Case: ವರದಕ್ಷಿಣೆ ಕಿರುಕುಳ ದೂರು ನೀಡಿದಳೆಂದು ಹೆಂಡತಿಯನ್ನೇ ಕೊಂದ ಪಾಪಿ ಗಂಡ

Woman death: ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮಂಗಳೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ (Woman Jumps from Moving train) ಘಟನೆ ಮಂಗಳೂರು (Mangalore News) ಬಳಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ರೈಲಿನಲ್ಲಿ ಬಂಟ್ವಾಳದ ಬಳಿ ನೇತ್ರಾವತಿ ನದಿಗೆ ಹಾರಿ ಆಕೆ ಆತ್ಮಹತ್ಯೆ (Woman death) ಮಾಡಿಕೊಂಡಿದ್ದಾರೆ.

ತುಮಕೂರಿನ ಮಧುಗಿರಿ ನಿವಾಸಿ ನಯನಾ ಎಂ.ಜಿ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಮಧುಗಿರಿ ತಾಲೂಕಿನ ಪಡಸಾಲಹಟ್ಟಿ ಮಿಡಿಗೇಶಿ ಹೋಬಳಿಯವರು. ಇವರು ಅವಿವಾಹಿತೆ. ಅವರು ಪ್ರಯಾಣಿಸುತ್ತಿದ್ದ ರೈಲು ಬೆಳಗ್ಗೆ ಮಂಗಳೂರಿನಿಂದ ಹೊರಟು ಬೆಂಗಳೂರಿಗೆ (Mangalore-Bangalore train) ಬರುತ್ತಿತ್ತು. ಮುಂದೆ ಬಿ.ಸಿ. ರೋಡ್‌ ನಿಲ್ದಾಣ ದಾಟಿ ರೈಲು ಸಾಗುತ್ತಿತ್ತು.

Woman Death Nayana MG

ರೈಲು ನೇತ್ರಾವತಿ ನದಿಯ ಸೇತುವೆ ಬಳಿ ಬಂದಾಗ ನಯನಾ ಅವರು ಬಾಗಿಲಿನ ಮೂಲಕ ರೈಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ಸೇರಿದರು. ಪೊಲೀಸರು ಸಾರ್ವಜನಿಕರ ಸಹಕಾರದಿಂದ ಶವವನ್ನು ನದಿಯಿಂದ ಮೇಲಕ್ಕೆ ಎತ್ತಿದ್ದಾರೆ. ಮುಳುಗುತಜ್ಞ ಮಹಮ್ಮದ್ ತಂಡ ಶವವನ್ನು ಮೇಲೆತ್ತುವಲ್ಲಿ ದೊಡ್ಡ ಪಾತ್ರ ವಹಿಸಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ ನಯನಾ ಅವರು ಒಬ್ಬರೇ ಪ್ರಯಾಣಿಸುತ್ತಿದ್ದರೇ ಅಥವಾ ಕುಟುಂಬ ಸಮೇತವಾಗಿ ಸಾಗುತ್ತಿದ್ದರೇ? ಅವರು ಎಲ್ಲಿಂದ ಬಂದಿದ್ದರು? ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಯಾಕೆ ಮಾಡಿದರು? ರೈಲಿನಿಂದ ಜಿಗಿಯುವ ಅಪಾಯಕಾರಿ ನಿರ್ಧಾರ ಯಾಕೆ ಮಾಡಿದರು ಎಂಬ ಅಂಶಗಳ ಮೇಲೆ ಪೊಲೀಸರು ಬೆಳಕು ಚೆಲ್ಲಬೇಕಾಗಿದೆ.

Exit mobile version