Site icon Vistara News

Murder Case : ಹಾಸನದಲ್ಲಿ ಚಾಕುವಿನಿಂದ ಇರಿದು ವಾಟರ್‌ಮ್ಯಾನ್‌ನ ಬರ್ಬರವಾಗಿ ಕೊಂದ ರೌಡಿಶೀಟರ್‌

Murder case

ಹಾಸನ: ಚಾಕುವಿನಿಂದ ಇರಿದು ವಾಟರ್‌ಮ್ಯಾನ್‌ ಬರ್ಬರ ಹತ್ಯೆ (Murder case) ನಡೆದಿದೆ. ಗಣೇಶ (27) ಕೊಲೆಯಾದ ವಾಟರ್‌ಮ್ಯಾನ್. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಚೀಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚೀಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗಣೇಶ ವಾಟರ್‌ಮ್ಯಾನ್ ಆಗಿದ್ದ. ನಿನ್ನೆ ಶುಕ್ರವಾರ ರಾತ್ರಿ ಚೀಕನಹಳ್ಳಿ ಗ್ರಾಮದ ಆಟೋ ನಿಲ್ದಾಣದ ಬಳಿ ಗಣೇಶ ನಿಂತಿದ್ದ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಅದೇ ಗ್ರಾಮದ ರೌಡಿಶೀಟರ್ ಮಧು ಗಣೇಶನ ಜತೆ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಗಣೇಶನಿಗೆ ಇರಿದಿದ್ದಾನೆ.

ತೀವ್ರ ರಕ್ತಸ್ರಾವವಾಗಿ ಗಣೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಬಳಿಕ ಆರೋಪಿ ಎಸ್ಕೇಪ್ ಆಗಿದ್ದಾನೆ. ಗೌರಿ-ಗಣೇಶ ಹಬ್ಬಕ್ಕೆ ಗ್ರಾಮಕ್ಕೆ ರೌಡಿಶೀಟರ್ ಮಧು ಬಂದಿದ್ದ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗುಂಡು ಹಾರಿಸಿ ಗ್ರಾಪಂ ಸದಸ್ಯನ ಹತ್ಯೆ

ಕಲಬುರಗಿ: ಮಾಜಿ ಗ್ರಾಪಂ ಸದಸ್ಯನನ್ನು ಹಾಡುಹಗಲೇ ಕೊಲೆ ಮಾಡಲಾಗಿದೆ. ವಿಶ್ವನಾಥ್ ಜಮಾದರ್ ಗ್ರಾಮ ಪಂಚಾಯತ್ ಸದಸ್ಯ ಕೊಲೆಯಾದವನು. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ಘಟನೆ ನಡೆದಿದೆ. ಪಡಸಾಳಗಿ ಗ್ರಾಮಪಂಚಾತ್ ಮಾಜಿ ಸದಸ್ಯನಾಗಿರುವ ವಿಶ್ವನಾಥ್‌ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಗುಂಡು ಹಾರಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೆ ವೈಷಮ್ಯ ಹಿನ್ನೆಲೆ ಗುಂಡು ಹಾರಿಸಿ‌ ಹತ್ಯೆಗೈದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version