Site icon Vistara News

Prajval Revanna : ಚುನಾವಣೆ ಹೊಸ್ತಿಲಲ್ಲಿ ದೇವದರ್ಶನ; ಪ್ರಜ್ವಲ್‌, ಸೂರಜ್‌ ರೇವಣ್ಣ ಶಬರಿಮಲೆಯಲ್ಲಿ

prajval Revanna Suraj revanna Shabarimala

ಹಾಸನ: ನಾಡಿನಾದ್ಯಂತ ಸಂಭ್ರಮದ ಸಂಕ್ರಾಂತಿ ಆಚರಣೆ (Makara samkranti Celebration) ನಡೆಯುತ್ತಿದ್ದರೆ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪ್ರಜ್ವಲ್‌ ರೇವಣ್ಣ (MP Prajval Revanna) ಮತ್ತು ಮೇಲ್ಮನೆ ಸದಸ್ಯ ಸೂರಜ್‌ ರೇವಣ್ಣ (MLC Suraj Revanna) ಅವರು ಶಬರಿಮಲೆಗೆ (Shabarimale) ತೆರಳಿದ್ದಾರೆ. ಸಹೋದದರು ಅಯ್ಯಪ್ಪ ಮಾಲಾಧಾರಿಗಳಾಗಿ ಮಕರ ಸಂಕ್ರಾಂತಿ ದಿನವೇ ಮಕರ ವಿಳಕ್ಕು ದರ್ಶನಕ್ಕಾಗಿ ಶಬರಿಮಲೆ ತಲುಪಿದ್ದಾರೆ.

ಅವರಿಬ್ಬರೂ ಮಾಲಾಧಾರಿಗಳಾಗಿ ದೇವರ ದರ್ಶನ ಮಾಡಿದ್ದಲ್ಲದೆ, ಅಯ್ಯಪ್ಪ ದೇವಾಲಯ ಮುಂದೆ ಫೋಟೋಗೆ ಫೋಸ್ ನೀಡಿದ್ದಾರೆ ಅಣ್ಣ-ತಮ್ಮ. ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿರುವ ನಡುವೆಯೇ ಅಯ್ಯಪ್ಪನ ದರ್ಶನ ಮಾಡಿದ್ದಾರೆ.

ದೇವೇಗೌಡರ ಕುಟುಂಬದ ಎಲ್ಲ ಸದಸ್ಯರಂತೆ ಅಣ್ಣ ತಮ್ಮಂದಿರಾದ ಪ್ರಜ್ವಲ್‌ ರೇವಣ್ಣ ಮತ್ತು ಸೂರಜ್‌ ರೇವಣ್ಣ ಅವರು ಕೂಡಾ ದೈವ ಭಕ್ತರಾಗಿದ್ದಾರೆ. ಹಾಸನದ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುವ ಈ ಕುಟುಂಬದವರು ಮನೆಯಲ್ಲಿಯೂ ಆಗಾಗ ಪೂಜೆ, ಪುನಸ್ಕಾರಗಳನ್ನು ನಡೆಸುತ್ತದೆ. ಪ್ರಜ್ವಲ್‌ ರೇವಣ್ಣ ಅವರು ಕುಟುಂಬ ಸಮೇತರಾಗಿಯೇ ಅಪ್ಪ-ಅಮ್ಮನ ಜತೆಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.

ಹಾಸನ ಲೋಕಸಭಾ ಟಿಕೆಟ್‌ ಪ್ರಜ್ವಲ್‌ ರೇವಣ್ಣಗೆ ಪಕ್ಕಾ?

ಈ ನಡುವೆ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್‌ ಯಾರಿಗೆ ಸಿಗಲಿದೆ ಎಂಬ ಚರ್ಚೆ ಇದುವರೆಗೆ ಇತ್ತು. ಆದರೆ, ಈಗ ಅದು ಪ್ರಜ್ವಲ್‌ ರೇವಣ್ಣ ಅವರಿಗೇ ಸಿಗುವುದು ಪಕ್ಕಾ ಆಗಿದೆ. ಈಗ ಬಿಜೆಪಿ ಮತ್ತು ಜೆಡಿಎಸ್‌ ಪರಸ್ಪರ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ ಮತ್ತು ಜೆಡಿಎಸ್‌ ನಡುವೆ 24 ಮತ್ತು ನಾಲ್ಕು ಸೀಟುಗಳ ಹೊಂದಾಣಿಕೆ ನಡೆಯುವ ಸಾಧ್ಯತೆ ಇದೆ. ಜೆಡಿಎಸ್‌ ಪಡೆಯಲಿರುವ ನಾಲ್ಕು ಸ್ಥಾನಗಳಲ್ಲಿ ಒಂದು ಹಾಸನ ಎನ್ನುವುದು ಖಚಿತವಾಗಿದೆ. ಈ ನಡುವೆ, ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್‌ ನೀಡಬಾರದು ಎಂಬ ಕೂಗು ಬಿಜೆಪಿ ಕಡೆಯಿಂದ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಪ್ರಜ್ವಲ್‌ ಅವರಿಗೇ ಟಿಕೆಟ್‌ ಸಿಗುವುದು ಖಚಿತವಾಗಿದೆ.

ಪ್ರಜ್ವಲ್‌ ರೇವಣ್ಣ ಅವರು ಕಳೆದ ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಕೊನೆಯ ಕ್ಷಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜಾಗದಲ್ಲಿ ಟಿಕೆಟ್‌ ಪಡೆದ ಪ್ರಜ್ವಲ್‌ ಅವರು ಜಯ ಪಡೆಯುವಲ್ಲಿ ಸಫಲರಾಗಿದ್ದರು. ಇದು ಜೆಡಿಎಸ್‌ನ ಪ್ರಬಲ ಕಣವಾಗಿರುವುದರಿಂದ ಈ ಬಾರಿಯೂ ಜೆಡಿಎಸ್‌ಗೇ ಬಿಟ್ಟುಕೊಡಲು ನಿರ್ಧರಿಸಲಾಗಿದೆ.

Exit mobile version