ಹಾಸನ: ನಗರ ಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹಾಸನಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಹತ್ಯೆ ನಂತರ ಹಾಸನದಲ್ಲೆ ಇದ್ದುಕೊಂಡು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರಶ್ನೆಗೆ ಶಾಸಕ ಪ್ರೀತಂ ಗೌಡ ಪ್ರತ್ಯುತ್ತರ ನೀಡಿದ್ದಾರೆ.
ಘಟನೆ ಬಗ್ಗೆ ಸ್ಥಳಿಯ ಶಾಸಕ ಪ್ರೀತಂಗೌಡ ಮಾತನಾಡಿ, ಒಂದು ದುರದೃಷ್ಟಕರ ಘಟನೆ ನಡೆದಿದೆ. ಅವರ ಮನೆಗೆ ಹೋಗಿ ಸಾಂತ್ವಾನ ಹೇಳುತ್ತೇನೆ. ಯಾವ ತನಿಖೆ, ಯಾವ ಮಟ್ಟದಲ್ಲಾದರೂ ಕ್ಷೇತ್ರದ ಶಾಸಕನಾಗಿ ಸಹಕಾರ ಕೊಡುತ್ತೇನೆ ಎಂದರು. ಕೊಲೆಯಾಗಿರುವುದು ವೈಯಕ್ತಿಕ ಕಾರಣಕ್ಕೋ ರಾಜಕೀಯ ಕಾರಣಕ್ಕೋ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಎಲ್ಲರಿಗೂ ಎಲ್ಲ ಸಂದರ್ಭದಲ್ಲಿಯೂ ಭದ್ರತೆ ಕೊಡಲು ಆಗುವುದಿಲ್ಲ.
ಇದನ್ನೂ ಓದಿ | ನಗರಸಭೆ ಸದಸ್ಯನ ಹತ್ಯೆ: ಅಂತಿಮ ದರ್ಶನ ಪಡೆದ ಸಾ.ರಾ. ಗೋವಿಂದು
ಪೊಲೀಸ್ ಇಲಾಖೆ ವೈಫಲ್ಯ ಎಂದು ಹೇಳಲು ಅಸಾಧ್ಯ. ಚನ್ನರಾಯಪಟ್ಟಣದಲ್ಲಿ ನಾಲ್ಕು ಕೊಲೆಗಳಾಗಿದೆ. ಅದಕ್ಕೆ ಶಾಸಕರು, ಸಂಸದರು ಕಾರಣ ಎಂದು ಹೇಳಲು ಆಗುವುದಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ತಿರುಗೇಟು ನೀಡಿದ್ದಾರೆ.
ಪ್ರಮುಖ ಆರೋಪಿಯಾಗಿರುವ ಪೂರ್ಣಚಂದ್ರ ಜೆಡಿಎಸ್ ಕಾರ್ಯಕರ್ತ ಇರಬಹುದೆಂಬ ಅನುಮಾನ ಹುಟ್ಟುಹಾಕಿದೆ. ಡಿಎಸ್ ಮುಖಂಡರ ಹುಟ್ಟುಹಬ್ಬ ಆಚರಣೆಯ ಫ್ಲೆಕ್ಸ್‌ಗಳಲ್ಲಿ ಪೋಟೋ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಲಯ ಐಜಿಪಿ ಭೇಟಿ
ಪ್ರಕರಣದ ತನಿಖೆ ಚುರುಕುಗೊಂಡಿದ್ದು, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಎಸ್ಪಿ ಕಚೇರಿಗೆ ಭೇಟಿ ನೀಡಿದ್ದಾರೆ, ಪ್ರಕರಣದ ಸಂಬಂಧ ಹಾಗೂ ನಗರಪೊಲೀಸ್ ಇನ್ಸ್ ಪೆಕ್ಟರ್ ರೇಣುಕಾಪ್ರಸಾದ್ ವಿರುದ್ಧ ಮಾಜಿ ಸಚಿವ ರೇವಣ್ಣ ಆರೋಪ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಎಸ್ಪಿ ಶ್ರೀನಿವಾಸಗೌಡರಿಂದ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | “ಉನ್ನತಾಧಿಕಾರ ಕ್ರಿಯಾ ಸಮಿತಿ-2024”: ಪ್ರಶಾಂತ್ ಕಿಶೋರ್ ಕುರಿತು ಗೊಂದಲ ಮುಂದುವರಿಕೆ
ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸ್ವತಃ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾಹಿತಿ ನೀಡಿದ್ದಾರೆ. ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಕೊಲೆಯ ಹಿಂದೆ ಯಾವುದೇ ರಾಜಕೀಯ ಶಡ್ಯಂತ್ರವಿಲ್ಲ, ಎರಡು ಕುಟುಂಬಗಳ ನಡುವಿನ ಗಲಾಟೆಯಿಂದ ಕೊಲೆ ನಡೆದಿದೆ ಎಂದು ಹೇಳಿದರು.ಇಂತಹ ಘಟನೆಗಳು ಆಗಬಾರದೆಂದು ಸಿಎಂಗೆ ಹೇಳಿದ್ದೇನೆ. ಯಾರೇ ಆಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗೇ ಆಗುತ್ತದೆ. ತನಿಖೆಗಳು ಆಗಲಿ, ವರದಿ ಬಂದಮೇಲೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.
ಮೃತ ಪ್ರಶಾಂತ್ ಅವರಿಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಭೆಯನ್ನು ನಡೆಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಇದನ್ನೂ ಓದಿ | ನಗರಸಭೆ ಸದಸ್ಯ ಹತ್ಯೆ: ಡಾ.ರಾಜ್ ಕುಟುಂಬಕ್ಕೆ ಆಪ್ತವಾಗಿದ್ದ ಪ್ರಶಾಂತ್