Site icon Vistara News

Road Accident : ಕೆಳಗೆ ಬಿದ್ದವನ ಮೇಲೆ ಹರಿಯಿತು ಮೂರ್ನಾಲ್ಕು ವಾಹನಗಳು; ಛಿದ್ರ ಛಿದ್ರಗೊಂಡ ಸವಾರ

Road Accident bike riders dead

ಹಾಸನ/ಶಿವಮೊಗ್ಗ/ಬೆಂಗಳೂರು: ಅತಿ ವೇಗ ತಂದ ಆಪತ್ತು (Rush Driving) ಯುವಕನ ಪ್ರಾಣವನ್ನೇ ಕಸಿದುಕೊಂಡಿದೆ. ಯುವಕನೊಬ್ಬ ಬೈಕ್‌ನಲ್ಲಿ ವೇಗವಾಗಿ ಬರುವಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದ. ಈ ವೇಳೆ ಹಿಂದಿನಿಂದ ಬಂದ ಮೂರ್ನಾಲ್ಕು ವಾಹನಗಳು ಯುವಕನ ಮೇಲೆ ಹರಿದ ಪರಿಣಾಮ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾನೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಬೈಪಾಸ್‌ನಲ್ಲಿ ಡೆಡ್ಲಿ ಅಪಘಾತ ನಡೆದಿದೆ. ರಾಕೇಶ್.ವಿ.ಆರ್ (27) ಮೃತ ದುರ್ದೈವಿ. ಹಾಸನ ನಗರದ ಗೌರಿಕೊಪ್ಪಲಿನ‌ ನಿವಾಸಿಯಾದ ರಾಕೇಶ್‌, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಬೈಕ್‌ನಲ್ಲಿ ವೇಗವಾಗಿ ಬರುವಾಗ ನಿಯಂತ್ರಣಕ್ಕೆ ಸಿಗದೆ ಕೆಳಗೆ ಬಿದ್ದಿದ್ದ. ಈ ವೇಳೆ ಇತರೆ ವಾಹನಗಳು ರಾಕೇಶ್‌ ಮೇಲೆ ಹರಿದಿತ್ತು. ವಾಹನಗಳು ಹರಿದ ರಭಸಕ್ಕೆ ರಾಕೇಶ್ ದೇಹವೇ ಛಿದ್ರ ಛಿದ್ರವಾಗಿತ್ತು.

ಇನ್ನೂ ಅಪಘಾತದಲ್ಲಿ ಸವಾರರು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾರೆ. ಮತ್ತೊಂದು ಕಡೆ ರಾಕೇಶ್ ಮೇಲೆ ವಾಹನ ಹತ್ತಿಸುವುದನ್ನು ನಿಯಂತ್ರಿಸಲು ಹೋಗಿ ಕಾರೊಂದು ಡಿವೈಡರ್‌ಗೆ ಗುದ್ದಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Attiguppe Metro Incident: ಮೆಟ್ರೋ ರೈಲಿಗೆ ತಲೆಕೊಟ್ಟ ವಿದ್ಯಾರ್ಥಿ; ಆತ್ಮಹತ್ಯೆಯ ಲೈವ್‌ ವಿಡಿಯೊ ಇಲ್ಲಿದೆ

ಸೊರಬದಲ್ಲಿ ಭೀಕರ ಅಪಘಾತ

ಶಿವಮೊಗ್ಗ: ಶಿವಮೊಗ್ಗದ ಸೊರಬದಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದೆ. ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಸೊರಬ ತಾಲೂಕಿನ ಉಳವಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಸಮೀಪ ಅಪಘಾತ ಸಂಭವಿಸಿದ್ದು, ಸವಾರರೊಬ್ಬರು ಮೃತಪಟ್ಟಿದ್ದಾರೆ. ಸೊರಬ ತಾಲೂಕಿನ ಕಣ್ಣೂರು ಗ್ರಾಮದ ನಿವಾಸಿ ಶಿವಪ್ಪ (45) ಮೃತ ದುರ್ದೈವಿ.

ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಡಿವೈಡರ್‌ಗೆ ಡಿಕ್ಕಿ ಹೊಡೆದ ಮಿನಿ ಗೂಡ್ಸ್‌ ಗಾಡಿ

ಬೆಂಗಳೂರಿನ ಯಶವಂತಪುರ ಸರ್ಕಲ್ ಫ್ಲೈಓವರ್ (Yashwanthpur Flyover) ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಮಿನಿ ಗೂಡ್ಸ್ ಗಾಡಿ ಡಿಕ್ಕಿ ಹೊಡೆದಿದೆ. ತುಮಕೂರು ರಸ್ತೆ ಮೂಲಕ ಹೆಬ್ಬಾಳ ಮಾರ್ಗವಾಗಿ ಸಂಚರಿಸುತ್ತಿದ್ದ ಗೂಡ್ಸ್‌ ಗಾಡಿಯು ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ರಾತ್ರಿ 11:30 ರ ಸುಮಾರಿಗೆ ಅಪಘಾತ (Road Accident) ನಡೆದಿದೆ.

ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಂಬ್ಯುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್‌ ಮಾಡಿ

Exit mobile version