Site icon Vistara News

ಹೊಳೆನರಸೀಪುರದಲ್ಲಿ ಸರಣಿ ಅಂಗಡಿ ಕಳವು

shops

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಅಂಗಡಿಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.

ಹೊಳೆನರಸೀಪುರದ ಗಾಂಧಿವೃತ್ತದಲ್ಲಿರುವ ಏಳು ದಿನಸಿ ಅಂಗಡಿ, ಒಂದು ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಕಳ್ಳತನವಾಗಿದೆ. ಐದು ಲಕ್ಷ ರೂ. ನಗದು ಹಾಗೂ ಬೆಲೆಬಾಳುವ ಬಟ್ಟೆಗಳು, ವಸ್ತುಗಳನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ.

ರೋಲಿಂಗ್ ಶಟರ್ ಮುರಿದು ಒಳ ನುಗ್ಗಿರುವ ಕಳ್ಳ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಒಳನುಗ್ಗಿ ಹಣ, ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ. ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Status War | ಸ್ಟೇಟಸ್ ವಿಚಾರಕ್ಕೆ ಕಿರಿಕ್‌: ಮಗನನ್ನು ಮುಗಿಸಲು ಮನೆ ನುಗ್ಗಿದ ಪುಂಡರಿಗೆ ಮಚ್ಚಿನೇಟು ನೀಡಿದ ತಂದೆ!

Exit mobile version