ಹಾಸನ : ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದ ಸಮೀಪ ಪತ್ನಿಯನ್ನು ಕೊಂದಿದ್ದ ಪತಿ ನೇಣಿಗೆ ಶರಣಾಗಿದ್ದಾನೆ (Suicide Case). ಇದೀಗ ಆರೋಪಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚಂದ್ರಯ್ಯ (55) ಮೃತಪಟ್ಟಿರುವ ಆರೋಪಿಯಾಗಿದ್ದಾನೆ. ಸಪ್ಟೆಂಬರ್ 2ರಂದು ಪತ್ನಿ ಇಂದ್ರಮ್ಮನನ್ನು ಕೊಚ್ಚಿ ಕೊಂದಿದ್ದ. ಕೆಲಸಕ್ಕೆ ಹೋಗುವ ವೇಳೆ ಮಚ್ಚಿನಿಂದ ಇಂದ್ರಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ಅರೆಹಳ್ಳಿ ಪೊಲೀಸರು ಆರೋಪಿಗಾಗಿ ಹುಟುಕಾಟ ನಡೆಸುತ್ತಿದ್ದರು.
ಕೊಲೆ ಮಾಡಿದ ಸ್ವಲ್ಪ ದೂರಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಚಂದ್ರಯ್ಯ ಮೃತದೇಹ ಪತ್ತೆಯಾಗಿದೆ. ನೇಣು ಹಾಕಿಕೊಂಡು ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಇದನ್ನೂ ಓದಿ | Suicide case | ಪೊಲೀಸರ ಕಿರುಕುಳದಿಂದ ಕಾರು ಪಾರ್ಕಿಂಗ್ ಕೆಲಸ ಮಾಡುತಿದ್ದ ಯುವಕ ಆತ್ಮಹತ್ಯೆ?