Site icon Vistara News

UDR Case: ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು

udr case hassan

ಹಾಸನ: ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ (De-addiction Center) ಸೇರಿಸಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, (UDR Case) ಹಲ್ಲೆ ನಡೆಸಿದ್ದರಿಂದ (Assault) ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಪ್ರಶಾಂತ್ (48) ಮೃತ ವ್ಯಕ್ತಿ. ಬೆಂಗಳೂರಿನಲ್ಲಿ ಪಶುವೈದ್ಯಕೀಯ ಇಲಾಖೆಯ ನಿರೀಕ್ಷಕರಾಗಿದ್ದ ಪ್ರಶಾಂತ್ ಅವರನ್ನು ಕುಟುಂಬಸ್ಥರು ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ನಡೆಯುತ್ತಿದ್ದ ಮದ್ಯ ವ್ಯಸನ‌ಮುಕ್ತ ಕೇಂದ್ರಕ್ಕೆ ಸೋಮವಾರ ಮಧ್ಯಾಹ್ನ ಸೇರಿಸಿದ್ದರು.

ನಿನ್ನೆ ಪ್ರಶಾಂತ್‌ಗೆ ಅನಾರೋಗ್ಯ ಎಂದು ಮದ್ಯವ್ಯಸನ ಮುಕ್ತ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದು, ಕುಡಿತ ಬಿಡಿಸಲು ಹಲ್ಲೆ ನಡೆಸಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಮೈಮೇಲೆ ಗಾಯದ ಗುರುತುಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಹಲ್ಲೆ ಮಾಡಿ ಹತ್ಯೆಗೈಯಲಾದ ಆರೋಪ ಮಾಡಲಾಗಿದೆ. ಕಳೆದ ಹತ್ತು ದಿನದಲ್ಲಿ ಹಾಸನ ಜಿಲ್ಲೆಯಲ್ಲಿ ನಡೆದ ಇಂಥ ಎರಡನೇ ಪ್ರಕರಣ ಇದಾಗಿದೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ (murder case) ಮಾಡಲಾಗಿದೆ. ಅಸ್ಲಂ ಮಕಾಂದಾರ್ (30) ಕೊಲೆಯಾದ ಯುವಕ. ಮಂಜುನಾಥ್‌ ಎಂಬಾತ ಚಾಕುವಿನಿಂದ ಇರಿದಿದ್ದಾನೆ.

ಬೆಂಗೇರಿಯ ವೆಂಕಟೇಶ್ವರ ಕಾಲನಿಯಲ್ಲಿ ಘಟನೆ ನಡೆದಿದೆ. ಮಂಜುನಾಥ ಸ್ಮಾರ್ಟ್ ವಾಚ್ ವಿಚಾರಕ್ಕೆ ಜಗಳ ತೆಗೆದು ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಸ್ಲಂನನ್ನು ಕಿಮ್ಸ್ ಆಸ್ಪತ್ರೆಗೆ ಸ್ನೇಹಿತರು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Exit mobile version