Site icon Vistara News

Wild Animals Attack : ಅತ್ತೆ ಮನೆಗೆ ಬಂದ ಅಳಿಯನ ಅಟ್ಟಾಡಿಸಿದ ಕಾಡಾನೆ! ಮುಂದೇನಾಯ್ತು

wild animals attack

ಹಾಸನ: ಅತ್ತೆ ಮನೆಗೆ ಬಂದ ಅಳಿಯನನ್ನು ಕಾಡಾನೆಯೊಂದು (Wild Animals Attack) ಅಟ್ಟಾಡಿಸಿಕೊಂಡು ಬಂದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದಲ್ಲಿ ಘಟನೆ ನಡೆದಿದೆ.

ಕೋಲಾರ ಮೂಲದ ನಾಗೇಶ್ (35) ಎಂಬುವವರು ಉದೇವಾರ ಗ್ರಾಮದಲ್ಲಿದ್ದ ತಮ್ಮ ಅತ್ತೆ ಮನೆಗೆ ಬಂದಿದ್ದರು. ಊಟಕ್ಕೆ ಮೊಸರು ತರಲೆಂದು ಅಂಗಡಿಗೆ ತೆರಳುತ್ತಿದ್ದರು. ಅದ್ಯಾವ ಕಡೆಯಿಂದಲೋ ಓಡಿ ಬಂದ ಕಾಡಾನೆಯೊಂದು ನಾಗೇಶ್‌ರನ್ನು ಅಡ್ಡಗಟ್ಟಿತ್ತು.

ಕಾಡಾನೆಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ ನಾಗೇಶ್‌ ಗಾಬರಿಯಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಗಾಯಗೊಂಡ ನಾಗೇಶ್‌ ಸಕಲೇಶಪುರ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಗಾಯಾಳು ಆರೋಗ್ಯ ವಿಚಾರಣೆಗೆ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Wild animals Attack

ಇದನ್ನೂ ಓದಿ: Prabhas: ಶಾರುಖ್, ಸಲ್ಮಾನ್ ಹಿಂದಿಕ್ಕಿ ‘ಅತ್ಯಂತ ಜನಪ್ರಿಯ ಪುರುಷ ತಾರೆ’ಯಾಗಿ ಹೊರಹೊಮ್ಮಿದ ಪ್ರಭಾಸ್!

ಕೊಚ್ಚಿ ಹೋಗುತ್ತಿದ್ದ ಹಸುವನ್ನು ರಕ್ಷಿಸಿದ ಯುವಕರು

ನೋಡ ನೋಡುತ್ತಿದ್ದಂತೆ ರಭಸವಾಗಿ ಹರಿಯುತ್ತಿದ್ದ ಕಾಲುವೆ ನೀರಲ್ಲಿ ಹಸುವೊಂದು ಕೊಚ್ಚಿ ಹೋಗುತ್ತಿತ್ತು. ಇದನ್ನು ಗಮನಿಸಿದ ಯುವಕರು ಪ್ರಾಣವನ್ನು ಲೆಕ್ಕಿಸದೆ ಹಸು ರಕ್ಷಣೆ ಮಾಡಿದ್ದಾರೆ. ವಿಜಯನಗರದ ಹೊಸಪೇಟೆ ಹೊರವಲಯದ ಎಚ್‌ಎಲ್‌ಸಿ ಕಾಲುವೆಯಲ್ಲಿ ಘಟನೆ ನಡೆದಿದೆ.

31ನೇ ವಾರ್ಡಿನ ಯುವಕ ಕೃಷ್ಣನ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ. ನೀರು ಕುಡಿಯಲು ಹೋದ ಸಂದರ್ಭದಲ್ಲಿ ಹಸುವೊಂದು ಆಯತಪ್ಪಿ ಬಿದ್ದಿತ್ತು. ಅಲ್ಲಿಯೇ ಇದ್ದ ಸ್ಥಳೀಯ ಯುವಕರು ಕೂಡಲೇ ಅಗ್ಗದ ಮೂಲಕ ಹಸು ರಕ್ಷಣೆಗೆ ಮುಂದಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ಒಂಟಿ ಸಲಗದ ದಾಂಧಲೆ

ಚಿಕ್ಕಮಗಳೂರು ತಾಲೂಕಿನ ಮಾವಿನಗುಣಿ ಗ್ರಾಮದ ಬಳಿ ಒಂಟಿ ಸಲಗದ ದಾಂಧಲೆ ಮುಂದುವರಿದಿದೆ. ಕಾಫಿ, ಅಡಿಕೆ ತೋಟಗಳಿಗೆ ನುಗ್ಗಿ ನಾಶ ಮಾಡಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಒಂಟಿ ಸಲಗ ಲಗ್ಗೆಯಿಡುತ್ತಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ವಾಹನ ಸವಾರರು, ತೋಟಕ್ಕೆ ತೆರಳುವ ಕಾರ್ಮಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

ಕಬ್ಬು ಕಟಾವು ಮಾಡುವ ವೇಳೆ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಕಾರ್ಮಿಕರು ಚಿರತೆ ಮರಿಗಳನ್ನು ಕಂಡು ಅವಕ್ಕಾದರು. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಂಗಳಪುರದ ರೈತ ಮಹೇಶ್ ಎಂಬುವರ ಜಮೀನಿನಲ್ಲಿ ಚಿರತೆ ಮರಿಗಳು ಪತ್ತೆಯಾಗಿವೆ. ಕಬ್ಬು ಕಟಾವು ಮಾಡುವಾಗ ತಾಯಿಗಾಗಿ ಮರಿಗಳ ಚೀರಾಟ ಕೇಳಿ ಕಾರ್ಮಿಕರು ರಕ್ಷಿಸಿದ್ದಾರೆ. ಚಿರತೆ ಮರಿಗಳನ್ನು ಬೋನಿನಲ್ಲಿಟ್ಟು ತಾಯಿ ಚಿರತೆ ಜತೆ ಸೇರಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version