Site icon Vistara News

ರಾಣೇಬೆನ್ನೂರ ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ವಿರುದ್ಧ ಅವಿಶ್ವಾಸ ಮಂಡನೆಗೆ ಸಿದ್ಧತೆ

ಹಾವೇರಿ: ರಾಣೇಬೆನ್ನೂರ ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ವಿರುದ್ದ ಅವಿಶ್ವಾಸ ಮಂಡನೆಗೆ ಸಿದ್ದತೆ ನಡೆದಿದ್ದು, ಇದು ಸ್ವಪಕ್ಷೀಯರಿಂದಲೇ ನಡೆಯುತ್ತದೆ ಎನ್ನುವುದು ವಿಶೇಷ. ರಾಣೇಬೆನ್ನೂರ ನಗರಸಬೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸ್ಪಷ್ಟತೆ ಮೂಡಲಿದೆ.

ಈ ಹಿಂದಿನ ಒಪ್ಪಂದದಂತೆ ರೂಪಾ ಚಿನ್ನಿಕಟ್ಟಿ ಈ ವೇಳೆಗೆ ರಾಜೀನಾಮೆ ನೀಡಬೇಕಿತ್ತು. ಆದರೆ ರಾಜೀನಾಮೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರಿಂದ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ : ಹಾವೇರಿ ‘ಹೊಂಡ’ ಸಿಟಿ; ರಸ್ತೆಯಲ್ಲಿ ಗಾಡಿ ಪಲ್ಟಿ!

ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ ಏಪ್ರಿಲ್ 27 ರಂದು 17 ಸದಸ್ಯರು ಮನವಿ ಸಲ್ಲಿಕೆ ಮಾಡಿದ್ದರು. ನಗರಸಬೆಯಲ್ಲಿ ಒಟ್ಟು ಸದಸ್ಯರ ಬಲ 35 ಇದ್ದು ಅದರಲ್ಲಿ ಬಿಜೆಪಿ 15, ಕೆಪಿಜೆಪಿ 9, ಕಾಂಗ್ರೆಸ್ 9 ಹಾಗೂ ಪಕ್ಷೇತರ 2 ಸದಸ್ಯರಿದ್ದಾರೆ.

ಇದನ್ನೂ ಓದಿ : ಹೈಕೋರ್ಟ್‌ ತೀರ್ಪು ಉಲ್ಲಂಘಿಸುವವರಿಗೆ ಸಂವಿಧಾನದ ಮೇಲಿನ ಬದ್ಧತೆ ಪ್ರಶ್ನಾರ್ಹ: ಸಚಿವ ಪೂಜಾರಿ ಹೇಳಿಕೆ

Exit mobile version