Site icon Vistara News

Belagavi Winter Session: ಸುವರ್ಣಸೌಧದಲ್ಲಿ ಜಾರಿ ಬಿದ್ದ ಪ್ರಕಾಶ್ ಕೋಳಿವಾಡ;‌ ಸದನಕ್ಕೆ ಲೇಟ್‌ ಎಂಟ್ರಿ!

Prakash Koliwada

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನವು (Belagavi Winter Session) ಇಂದು (ಶುಕ್ರವಾರ) ಕೊನೆಗೊಳ್ಳುತಿದೆ. ಈ ನಡುವೆ ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ಅವರ ನಡೆ ಎಲ್ಲ ಕಡೆ ಪ್ರಶಂಸೆಗೆ ಪಾತ್ರವಾಗುತ್ತಿದೆ. ಸದನಕ್ಕೆ ತಡವಾಗಿ ಬರುವವರನ್ನು ಪ್ರಶ್ನೆ ಮಾಡುವುದು, ಮೊದಲಿಗೆ ಬರುವ 25 ಮಂದಿಯ ಹೆಸರನ್ನು ಹೇಳುವುದು ಹಾಗೂ ಅಷ್ಟೂ ದಿನ ತಪ್ಪದೇ ಹಾಜರಾದವರಿಗೆ ಟೀ ಕಪ್‌ ಅನ್ನು ಉಡುಗೊರೆಯಾಗಿ ಕೊಡುವುದಾಗಿ ಘೋಷಿಸಿದ್ದಾರೆ. ಈ ನಡುವೆ ಮೊದಲ ಬಾರಿಗೆ ಶಾಸಕರಾದವರು ಸದನಕ್ಕೆ ತಡವಾಗಿ ಬಂದರೆ ಅವರಿಗೆ ಪ್ರಶ್ನೆಗಳನ್ನು ಕೇಳುವ ಪರಿಪಾಠವನ್ನೂ ಇಟ್ಟುಕೊಂಡಿದ್ದಾರೆ. ಹೀಗೆ ಶುಕ್ರವಾರ ವಿಧಾನಸಭಾ ಕಲಾಪಕ್ಕೆ ವಿಳಂಬವಾಗಿ ಬಂದ ಶಾಸಕ ಪ್ರಕಾಶ್ ಕೋಳಿವಾಡ (MLA Prakash Koliwada) ಅವರನ್ನೂ ಸ್ಪೀಕರ್‌ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಅವರು ಕಾಲು ಜಾರಿ ಬಿದ್ದ ಬಗ್ಗೆ ಉತ್ತರ ಕೊಟ್ಟಿದ್ದು, ಸದನವು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ಸದನಕ್ಕೆ ತಡವಾಗಿ ಬಂದ ಶಾಸಕ ಪ್ರಕಾಶ್ ಕೋಳಿವಾಡ ಅವರನ್ನು ಪ್ರಶ್ನೆ ಮಾಡಿದ ಸ್ಪೀಕರ್‌ ಯು.ಟಿ. ಖಾದರ್‌, ಯಾಕೆ ಲೇಟ್ ಬಂದಿದ್ದು ಎಂದು ಕೇಳಿದ್ದಾರೆ. ಅದಕ್ಕೆ ಕೋಳಿವಾಡ ಅವರು, ನಿನ್ನೆ (ಗುರುವಾರ) ಸುವರ್ಣಸೌಧದ ಮೆಟ್ಟಿಲ ಬಳಿ ಜಾರಿ ಬಿದ್ದು ಕಾಲಿಗೆ ಏಟಾಗಿತ್ತು. ಡಾಕ್ಟರ್ ಬಳಿ ಹೋಗಿ ಬಂದೆ, ಅದಕ್ಕೆ ಲೇಟಾಯ್ತು ಅಂತ ಉತ್ತರಿಸಿದ್ದಾರೆ. ಈ ವೇಳೆ ಸದನವು ನಗೆಗಡಲಲ್ಲಿ ತೇಲಿತು.

ಇದನ್ನೂ ಓದಿ: Security Breach in Lok Sabha: ಸ್ಥಳೀಯ ಹೋರಾಟಗಾರರಿಗೂ ಲಿಂಕ್‌? ರಾಜ್ಯ ಗುಪ್ತಚರ ಇಲಾಖೆ ಇನ್ನಷ್ಟು ತನಿಖೆ

ಆಗ ಮಾತನಾಡಿದ ಅರವಿಂದ ಬೆಲ್ಲದ್‌, ಯಾಕೆ ಬಿದ್ದಿರಿ ಅಂತ ಮಾತ್ರ ಕೇಳಬೇಡಿ ಅಧ್ಯಕ್ಷರೇ ಅಂತ ಕಾಲೆಳೆದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ಕೋಳಿವಾಡ, ನಾನು ಬೇರೆ ಕಡೆ ಬಿದ್ದಿಲ್ಲ, ಸುವರ್ಣಸೌಧದಲ್ಲಿಯೇ ಬಿದ್ದಿರೋದು ಎಂದು ಹೇಳಿದರು.

ಸ್ಪೀಕರ್‌ ಯು.ಟಿ. ಖಾದರ್‌ ಶ್ಲಾಘನೆ

ಈ ವೇಳೆ ಪ್ರಕಾಶ್ ಕೋಳಿವಾಡಗೆ ಸ್ಪೀಕರ್ ಯು.ಟಿ. ಖಾದರ್‌ ಅವರು ಶ್ಲಾಘನೆ ವ್ಯಕ್ತಪಡಿಸಿದ್ದರು. ನೋಡಿ ಪ್ರಕಾಶ್‌ ಕೋಳಿವಾಡ ಅವರು ಬಿದ್ದು ಕಾಲು ನೋವಾದರೂ ವೈದ್ಯರ ಬಳಿ ತೋರಿಸಿಕೊಂಡು ಸದನಕ್ಕೆ ಬಂದಿದ್ದಾರೆ. ಇದು ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದು ಹೊಗಳಿದರು.

ನನ್ನನ್ನೂ ಮಂತ್ರಿ ಮಾಡಿ ಎಂದ ಪ್ರಕಾಶ್‌ ಕೋಳಿವಾಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನ್ನನ್ನೂ ಮಂತ್ರಿ ಮಾಡಿ. ನಾನು ಮಂತ್ರಿಯಾದರೆ ಜನರಿಗೆ ಎಲ್ಲ ಅನುಕೂಲ ಮಾಡಿಕೊಡಬಹುದು ಎಂದು ವಿಧಾನಸಭಾ ಕಲಾಪದಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಒತ್ತಾಯಿಸಿದರು.

ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ನಡೆಯುತ್ತಿದ್ದ ಚರ್ಚೆ ವೇಳೆ ಮಾತನಾಡಿದ ಪ್ರಕಾಶ್‌ ಕೋಳಿವಾಡ, ನಮ್ಮ ಮುಖ್ಯಮಂತ್ರಿಗಳಿಗೆ ದಯವಿಟ್ಟು ಕೇಳುತ್ತೇನೆ. ನನಗೂ ಸಿಎಂ ಮಾಡಿ. ನಮ್ಮ ಭಾಗದ ರೈತರಿಗೆ ಅನ್ಯಾಯ ಆಗುತ್ತಿದೆ. ನಾನು ಮಂತ್ರಿಯಾದರೆ ಮಾತ್ರ ಕೆಲಸ ಮಾಡಬಹುದು ಎಂದು ಹೇಳಿದರು.

ಇದನ್ನೂ ಓದಿ: Satellite phone: ರಾಯಚೂರಿನ ಗೂಗಲ್‌ ಗ್ರಾಮದಲ್ಲಿ ಸ್ಯಾಟ್‌ಲೈಟ್‌ ಫೋನ್‌ ಆನ್!‌ ಉಗ್ರಾತಂಕ?

ಮಂತ್ರಿ ಮಾಡುವ 4 ಬಾರಿ ಗೆದ್ದು ಬನ್ನಿ

ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್‌ ಯು.ಟಿ. ಖಾದರ್‌, ಆಯ್ತು ನಿಮ್ಮನ್ನು ಮಂತ್ರಿ ಮಾಡುವ. ಹಾಗಾದರೆ ನಾಲ್ಕು ಸಲ ಗೆದ್ದು ಬನ್ನಿ ಎಂದು ಹೇಳಿದರು.

Exit mobile version