Site icon Vistara News

BJP Karnataka : ರಾಜ್ಯದಲ್ಲಿ ತಾಲಿಬಾನಿಗಳು ತಲೆ ಎತ್ತಿದ್ದಾರೆ ಹುಷಾರ್‌ ಎಂದ ಬೊಮ್ಮಾಯಿ

BJP Protest Against Hanagal rape CaSe in Haveri

ಹಾವೇರಿ: ಹಾನಗಲ್ ಗ್ಯಾಂಗ್‌ರೇಪ್‌ (Hanagal Gang rape Case) ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಶನಿವಾರ ಹಾವೇರಿ ಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ (BJP Protest) ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ (R Ashok) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು (BJP Karnataka) ಕೂಗಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಜಂಗಲ್ ರಾಜ್ ಇದೆ, ತುಗಲಕ್ ದರ್ಬಾರ್ ಇದೆ. ತಾಲಿಬಾನ್ ಶಕ್ತಿಗಳು ತಲೆ ಎತ್ತುತ್ತಿವೆ ಎಂದು ಆಪಾದಿಸಿದರು. ಹಾನಗಲ್‌ನಲ್ಲಿ ಒಬ್ಬ ಮುಸ್ಲಿಂ ಮಹಿಳೆಯ ಮೇಲೆ ಏಳು ಮಂದಿ ದುಷ್ಟರು ಗ್ಯಾಂಗ್‌ ರೇಪ್‌ ಮಾಡಿದ್ದಾರೆ. ಆದರೆ, ಅತ್ಯಾಚಾರ ಆದ ನಾಲ್ಕು ದಿನದ ಬಳಿಕ ಕೇಸ್ ಮಾಡಿದ್ದಾರೆ. ಹಾನಗಲ್ ಪೊಲೀಸರು ಕೇಸು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ದುಷ್ಟರ ಜೊತೆಗೆ ಪೊಲೀಸರು ಸೇರಿದ್ದಾರೆ. ನಾಚಿಕೆಯಾಗಬೇಕು ಇವರಿಗೆ ಎಂದು ವಾಗ್ದಾಳಿ ನಡೆಸಿದರು.

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರ ಮೂಲಕ ಸಂತ್ರಸ್ತೆಗೆ ಆಮಿಷ ಒಡ್ಡಲಾಯಿತು. ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಈ ಎಲ್ಲ ವ್ಯವಹಾರಗಳನ್ನು ಮಾಡಿದ್ದರೂ ಆತನನ್ನು ಸಸ್ಪೆಂಡ್ ಮಾಡಲಿಲ್ಲ. ಅಮಾಯಕರನ್ನು ಬಂಧಿಸಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ನಂಬರ್ ತೋರಿಸುತ್ತಿದ್ದಾರೆ. ಅಲ್ಪ ಸಂಖ್ಯಾತರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಈಗ ಅಲ್ಪ ಸಂಖ್ಯಾತರ ರಕ್ಷಣೆ ಮಾಡಿ ನೋಡೋಣ ಎಂದು ಸವಾಲು ಹಾಕಿದರು.

ಯಾವ ಸೆಲ್‌ ಕೂಡಾ ಓಪನ್‌ ಆಗಿಲ್ಲ, ಸೆಲ್‌ ಡೌನ್‌ ಆಗಿದೆ!

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟು ಹೋಗಿದೆ. ನೈತಿಕ ಪೊಲೀಸ್ ಗಿರಿಗೆ ಅವಕಾಶ ಕೊಡುವುದಿಲ್ಲ ಅಂತ ಮುಖ್ಯಮಂತ್ರಿ ಹೇಳುತ್ತಾರೆ. ನೈತಿಕ ಪೊಲಿಸ್ ಗಿರಿ ತಡೆಯಲು ವಿಶೇಷ ಘಟಕ ಸ್ಥಾಪಿಸುವುದಾಗಿ ಹೇಳುತ್ತಾರೆ. ಎಲ್ಲಿದೆ ನಿಮ್ಮ‌ ಸೆಲ್, ಸಿದ್ದರಾಮಯ್ಯ ನವರ ಸೆಲ್ ಡೌನ್ ಆಗಿದೆ. ಒಬ್ಬ ಹೆಣ್ಣುಮಗಳನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತರನ್ನ ಏನು ರಕ್ಷಣೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾಂಗ್ ರೇಪ್ ಪ್ರಕರಣದಲ್ಲಿ ಎಸ್ ಐಟಿ ರಚಿಸುವಂತೆ ಬೇಡಿಕೆ ನಿರಂತರವಾಗಿರುತ್ತದೆ. ತಾಲೂಕು ಹಾಗೂ ಜನರ ಬಳಿಗೆ ಈ ಹೋರಾಟ ಕೊಂಡೊಯ್ಯುತ್ತೇವೆ. ಇದನ್ನು ಸುಮ್ಮನೆ ಬಿಡುವುದಿಲ್ಲ, ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ. ಪ್ರಕರಣದ ಎಸ್ಐಟಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪೊಲೀಸರು ಆಡಳಿತದ ಕೈಗೊಂಬೆ

ಹಾನಗಲ್‌ ಪ್ರಕರಣ ಜೀವಂತವಾಗಿರುವಾಗಲೇ ಬ್ಯಾಡಗಿಯಲ್ಲಿ ಮತ್ತೊಂದು ನೈತಿಕ ಪೊಲೀಸ್‌ ಗಿರಿ ಪ್ರಕರಣ ನಡೆದಿದೆ. ಅಂದರೆ ಜಿಲ್ಲೆಯಲ್ಲಿ ಕಾನೂನಿನ ಭಯವಿಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ. ಪೊಲೀಸರು ಕೂಡಾ ಗೂಂಡಾಗಳ ಜತೆ ಸೇರಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ಬೊಮ್ಮಾಯಿ ಆಪಾದಿಸಿದರು.

ಹಾನಗಲ್‌ ಪ್ರಕರಣದಲ್ಲಿ ಸಂತ್ರಸ್ತೆ ಮೇಲೆ ರೇಪ್ ಆದರೂ, ಕೇಸ್ ಹಾಕಲಿಲ್ಲ. ನಾನು ಎಸ್ಪಿಗೆ‌ ಫೋನ್‌ ಮಾಡಿದಾಗ ರೇಪ್ ‌ಆಗಿಲ್ಲ ಅಂತ ಹೇಳಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತೆ ಹೇಳಿಕೆ ಕೊಟ್ಟ ಮೇಲೆ ಕೇಸ್ ಆಯ್ತು. ಕೇಸ್ ಮಾಡದೆ ಇರಲು ಯಾವ ರಾಜಕೀಯ ಒತ್ತಡ ಇತ್ತು ಎಂದು ಪ್ರಶ್ನಿಸಿದರು.

ಸಿಎಂಗೆ ಮುಖಭಂಗವಾಗುತ್ತದೆ ಎಂದು ಸಂತ್ರಸ್ತೆಯೇ ಶಿಫ್ಟ್‌

ಪೊಲೀಸ್ ಸ್ಟೇಷನ್ ಸೆಟ್ಲ್‌ಮೆಂಟ್‌ ಸೆಂಟರ್ ಆಗಿವೆ. ಪೊಲೀಸರು ಇದನ್ನು ಮುಚ್ಚಿ ಹಾಕಿದ್ದಾರೆ. ಸಂತ್ರಸ್ತೆಯ ಆರೋಗ್ಯ ತಪಾಸಣೆ ಮಾಡಲಿಲ್ಲ. ಸಿಎಂಗೆ ಮುಖಭಂಗವಾಗುತ್ತದೆ ಎಂದು ಸಂತ್ರಸ್ತೆಯನ್ನು ಶಿರಸಿಗೆ ಶಿಫ್ಟ್‌ ಮಾಡಿದ್ದಾರೆ. ಸರಕಾರವೇ ಸಂತ್ರಸ್ತೆಗೆ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : Hanagal Case : ಗ್ಯಾಂಗ್‌ ರೇಪ್‌ ಸಂತ್ರಸ್ತೆಗೆ ಜೀವಭಯ; ಒಂಟಿಯಾಗಿ ಬಿಟ್ಟು ಹೋದ ಪೊಲೀಸ್

ಈ ಸರ್ಕಾರ ಬಂದ ಮೇಲೆ ನಿರಂತರ ರೇಪ್ ಪ್ರಕರಣ

ವಿಪಕ್ಷ ನಾಯಕ ಆರ್ ಅಶೋಕ ಮಾತನಾಡಿ, 8 ತಿಂಗಳಲ್ಲಿ ಈ ಸರ್ಕಾರ ಬಂದ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಇವರೆಲ್ಲ ನಮ್ಮ ಬ್ರದರ್ ಸಿಸ್ಟರ್ ಅಂದರು. ಈಗ ಸಿಸ್ಟರ್ ರೇಪ್ ಆಗಿದೆ ಇಲ್ಲಿ. ಎಲ್ಲಪ್ಪ ನಿನ್ನ ಬ್ರದರ್ ಸಿಸ್ಟರ್ ಗಳು. ರೇಪ್ ಮಾಡುವವರನ್ನು ಬ್ರದರ್ ಸಿಸ್ಟರ್ ಅಂದಿಯಲ್ಲಪ್ಪ. ರಾಜ್ಯದಲ್ಲಿ ರೇಪ್ ಗಳು ದಿನನಿತ್ಯ ನಡೆಯುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 6 ತಿಂಗಳಲ್ಲಿ 7 ರೇಪ್ ಆಗಿದೆ. ಇದೆ ಗ್ಯಾಂಗ್ ರೇಪ್ ಮಾಡಿದೆಯಂತೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Exit mobile version