ಹಾವೇರಿ: ಹೊಸ ಬಾಳಿನ ಹೊಸ ಕನಸುಗಳೊಂದಿಗೆ ಹಸೆ ಮಣೆ ಏರಿದ್ದ ಯುವಕನೊಬ್ಬ ಮದುವೆಯಾದ ಕೇವಲ ಹತ್ತೇ ಗಂಟೆಯಲ್ಲಿ ಮೃತಪಟ್ಟ ಘಟನೆ ಶಿಗ್ಗಾವಿ ತಾಲೂಕಿನ ಶ್ಯಾಡ೦ಬಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಹಸೆಮಣೆ ತುಳಿದಿದ್ದ 34 ವರ್ಷದ ಶ್ಯಾಡಂಬಿಯ ಶಿವಾನಂದ ಶೇಖಪ್ಪ ಸುಣಗಾರ ಮೃತಪಟ್ಟ ದುರ್ದೈವಿ.
ಶಿವಾನಂದ ಶೇಖಪ್ಪ ಸುಣಗಾರ ಅವರು ಬಿಎ, ಡಿಎಡ್ ಪದವೀಧರ. ಇವರ ವಿವಾಹ ಮತ್ತಿಘಟ್ಟದ ದಿ. ಯಲ್ಲಪ್ಪ ಬಾರಕೇರ ಅವರ ಪುತ್ರಿ ಜ್ಯೋತಿಯೊಂದಿಗೆ ಸ್ವಗೃಹದಲ್ಲಿ ನಡೆದಿತ್ತು. ಮದುಮಗನ ಮರಣದಿ೦ದ ಮದುವೆ ಮನೆಯಲ್ಲಿ ಸೂತಕದ ಛಾಯೆ ಹಬ್ಬಿದೆ.
ಇದನ್ನೂ ಓದಿ: ರೋಹಿತ್ ರನ್ ಹೊಡೆಯುತ್ತಾರೆ: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ʼಹಿಟ್ ಮ್ಯಾನ್ʼಮೇಲೆ ʼದಾದಾʼ ವಿಶ್ವಾಸ –