Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಎರಡನೇ ದಿನದ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ

complete programme scedule of second day of kannada sahitya sammelana

ಹಾವೇರಿ: ಎಂಭತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ (ಜನವರಿ 7) ಕಾರ್ಯಕ್ರಮದಲ್ಲಿ ಅನೇಕ ಮೌಲಿಕ ಗೋಷ್ಠಿಗಳು, ಚಟುವಟಿಕೆಗಳು ನಡೆಯಲಿವೆ. ಅವುಗಳ ವಿವರ ಇಲ್ಲಿದೆ.

ವೇದಿಕೆ-1 ಗೋಷ್ಠಿ-3:
ಕನ್ನಡದಲ್ಲಿ ಕಾನೂನು ಸಾಹಿತ್ಯ ಬೆಳಗ್ಗೆ 9 ರಿಂದ 10 ಗಂಟೆ

ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಡಾ.ಸಿ.ಬಸವರಾಜು ಅವರಿಂದ ಆಶಯ ನುಡಿ, ಶ್ರೀ ಸಾಮಾನ್ಯನಿಗೆ ಕನ್ನಡದಲ್ಲಿ ಕಾನೂನಿನ ಅರಿವು ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿದ್ದಪ್ಪ ಕೆಂಪಗೌಡರ ಹಾಗೂ ಕಾನೂನು ವಿಷಯಗಳ ಕುರಿತು ಸಾಹಿತ್ಯ ರಚನೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಬಿ.ಶಿವಲಿಂಗೇಗೌಡ ವಿಷಯ ಮಂಡನೆ ಮಾಡಲಿದ್ದಾರೆ.

ವಿಶೇಷ ಉಪನ್ಯಾಸ: ಬೆಳಿಗ್ಗೆ 10 ರಿಂದ 11 ಗಂqe

ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ
ಸರಸ್ವತಿ ಸಮ್ಮಾನ್ ಪುರಸ್ಕೃತರ ಕುರಿತ ಗ್ರಂಥಗಳ ಬಿಡುಗಡೆ. ಹಿರಿಯ ಬರಹಗಾರ ಡಾ.ಪ್ರೇಮಶೇಖರ ಪ್ರಸ್ತಾವನೆ, ಸರಸ್ವತಿ ಸಮ್ಮಾನ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಹಾಗೂ ಹಿರಿಯ ಸಾಹಿತಿ ಡಾ.ಪ್ರಧಾನ ಗುರುದತ್ತ ಅವರು ಉಪನ್ಯಾಸ ನೀಡಲಿದ್ದಾರೆ. ಸರಸ್ವತಿ ಸಮ್ಮಾನ ಪುರಸ್ಕೃತ ಎಂ.ವೀರಪ್ಪ ಮೊಯಿಲಿ ಉಪಸ್ಥಿತರಿರುವರು.

ಗೋಷ್ಠಿ-4: ಬೆಳಗ್ಗೆ 11 ರಿಂದ ಮಧ್ಯಾಹ್ನ 1
ಯುವ ಕರ್ನಾಟಕ ನಾಡು-ನುಡಿ ಚಿಂತನೆ
ಹಿರಿಯ ಕ್ರಿಕೆಟ್ ಆಟಗಾರ ವೆಂಕಟೇಶ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಮಾಲತಿ ಹೊಳ್ಳ ಅವರು ಆಶಯ ನುಡಿಗಳನ್ನಾಡುವರು. ಯುವ ಕನ್ನಡಿಗರಿಗೆ ಸೈನ್ಯದಲ್ಲಿ ಅವಕಾಶಗಳ ಕುರಿತು ಸ್ಕ್ವಾಡ್ರನ್ ಲೀಡರ್ ವಿನುತಾ ಜಿ.ಆರ್, ಯುವ ಕರ್ನಾಟಕ ಹೊಸ ತಲೆಮಾರಿನ ಮನಸ್ಥಿತಿ ಕುರಿತು ಪ್ರೊ.ಸ್ಮೃತಿ ಹರಿತ್ಸ ಹಾಗೂ ಯುವ ಲೇಖಕರು ಮತ್ತು ಪ್ರಸ್ತುತ ಸಾಹಿತ್ಯ ಕುರಿತು ಶ್ರೀಮತಿ ದೀಪಾ ಹಿರೇಗುತ್ತಿ ಮಾತನಾಡಲಿದ್ದಾರೆ.

ಗೋಷ್ಠಿ-5: ಮಧ್ಯಾಹ್ನ 1 ರಿಂದ 3
ಮಾಧ್ಯಮ: ಹೊಸತನ ಮತ್ತು ಆವಿಷ್ಕಾರಗಳು

ಬೆಂಗಳೂರು ವಿವಿ ಹಿರಿಯ ಪ್ರಾಧ್ಯಾಪಕ ಡಾ.ಬಿ.ಕೆ.ರವಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಮೋಹನ ಹೆಗಡೆ ಆಶಯ ನುಡಿಗಳನ್ನಾಡಲಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ ಕುರಿತು ಸುದರ್ಶನ್ ಚನ್ನಂಗಿಹಳ್ಳಿ, ಸಾಮಾಜಿಕ ಜಾಲತಾಣಗಳು: ಅರಿವು ಮತ್ತು ಅಪಾಯ ಕುರಿತು ಎಚ್.ಎನ್.ಸುದರ್ಶನ್ ಹಾಗೂ ಡಿಜಿಟಲ್ ಮಾಧ್ಯಮದ ಮುಂದಿನ ಸವಾಲುಗಳು ಕುರಿತು ಡಾ.ಸಿಬಂತಿ ಪದ್ಮನಾಭ ಅವರು ವಿಷಯ ಮಂಡಿಸಲಿದ್ದಾರೆ.

ಗೋಷ್ಠಿ-6: ಮಧ್ಯಾಹ್ನ 3 ರಿಂದ 5 ಗಂಟೆ

ಶಿಕ್ಷಣದಲ್ಲಿ ಕನ್ನಡದ ಅಸ್ಮಿತೆ

ವಿಶ್ರಾಂತ ಕುಲಪತಿಗಳು ಡಾ.ಎ.ಮುರಿಗೆಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪ್ರಾಧ್ಯಾಪಕ ಡಾ.ಮಾಧವ ಪೆರಾಜೆ ಆಶಯ ನುಡಿಗಳನ್ನಾಡಲಿದ್ದಾರೆ. ಕನ್ನಡ ಶಾಲೆಗಳ ವಸ್ತುಸ್ಥಿತಿ ಕುರಿತು ಡಾ.ಎಚ್.ಎನ್.ಮುರಳೀಧರ, ಕನ್ನಡ ಭಾಷೆಯ ಮೇಲೆ ಇಂಗ್ಲಿಷ್ ಮಾಧ್ಯಮ ಬೀರುವ ಪರಿಣಾಮಗಳು ಕುರಿತು ಡಾ.ಹರ್ಷಿತ್ ಜೋಸೆಫ್, ಉನ್ನತ ಶಿಕ್ಷಣದಲ್ಲಿ ಕನ್ನಡ ಪಠ್ಯ ಮತ್ತು ಬೋಧನೆ ಕುರಿತು ಡಾ.ಧನಂಜಯ್ ಕುಂಬ್ಳೆ ಅವರು ವಿಷಯ ಮಂಡಿಸಲಿದ್ದಾರೆ.

ಸಂಜೆ 5 ರಿಂದ 6 ಗಂಟೆವರೆಗೆ ಸಮ್ಮೇಳನಾಧ್ಯಕ್ಷರ ಜೊತೆ ಮಾತು-ಮಂಥನ

ಸಮ್ಮೇಳನಾದ್ಯಕ್ಷರಾದ ಡಾ.ದೊಡ್ಡರಂಗೇಗೌಡ ಅವರು ಪಾಲ್ಗೊಳ್ಳಲಿದ್ದಾರೆ. ಡಾ.ತಲಕಾಡು ಚಿಕ್ಕರಂಗೇಗೌಡ ಪ್ರಧಾನ ನಿರ್ವಹಣೆ ಮಾಡಲಿದ್ದಾರೆ. ಮಾತು ಮಂಥನದಲ್ಲಿ ಮಹಾಬಲಮೂರ್ತಿ ಕೊಡ್ಲೆಕೆರೆ, ಶ್ರೀಮತಿ ಸಂಕಮ್ಮ ಜಿ ಸಂಕಣ್ಣನವರ, ಶ್ರೀಮಾಲತೇಶ ಅಂಗೂರ, ವಿ.ಮನೋಹರ, ಡಾ.ಶೀಲಾದೇವಿ ಎಸ್.ಮರಳಿಮಠ, ಬಾಪು ಪದ್ಮನಾಭ, ಡಾ. ಶಾರದಾ ಮುಳ್ಳೂರು, ಬುಕ್ಕಾಪಟ್ನ ವಾಸು, ರುದ್ರಣ್ಣ ಹರ್ತಿಕೋಟೆ, ಅಂಜನ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.

ಸಾಧಕರಿಗೆ ಸನ್ಮಾನ: ಸಂಜೆ 6 ರಿಂದ 7ಗಂಟೆ

ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಕಾಗಿನೆಲೆ ಶ್ರೀ ಕ್ಷೇತ್ರದ ನಿರಂಜನಾನಂದಪುರಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಜಯದೇವ ಆಸ್ಪತ್ರೆಯ ನಾಡೋಜ ಡಾ.ಸಿ.ಎನ್.ಮಂಜುನಾಥ ಆಶಯ ನುಡಿಗಳನ್ನಾಡಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ಸನ್ಮಾನಿಸುವರು.
ಸನ್ಮಾನಿತರು: ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ, ಹಿರಿಯ ವೈದ್ಯ ಡಾ.ಸಿ.ಎನ್.ಮಂಜುನಾಥ, ಕರ್ನಾಟಕ ಸಂಘ ಶಿವಮೊಗ್ಗ ಅಧ್ಯಕ್ಷ ಎಂ.ಎನ್.ಸುಂದರರಾಜ್, ಹೊರದೇಶ ಕನ್ನಡಿಗ ಕತಾರ್ ಸುಬ್ರಮಣ್ಯ ಹೆಬ್ಬಾಗಿಲು, ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್.ವರ್ಮಾ, ಕನ್ನಡಪರ ಹೋರಾಟಗಾರ ವಾಟಾಳ್ ರಮೇಶ, ಯಕ್ಷಗಾನ ಕಲಾವಿದ ಆಯುರ್ವೇದ ತಜ್ಞ ಡಾ.ಶಾಂತಾರಾಮ ಪ್ರಭು, ಸಾಹಿತಿ ವಿ.ರವೀಂದ್ರನಾಥ, ಸಮಾಜ ಸೇವಕ ಮೋಹನ ಮೆಣಸಿನಕಾಯಿ, ರಂಗಭೂಮಿ ಕಲಾವಿದ ಎಂ.ಎಸ್.ಕೊಟ್ರೇಶ, ಹಿರಿಯ ಚಲನಚಿತ್ರ ಕಲಾವಿದ ವೈಜನಾಥ ಬಿರಾದರ, ಸಾಹಿತಿ ಅನಂತರಾಜ್, ಸಾಹಿತಿ ಎ.ಸಿ.ಪಟ್ಟನದ, ಹಿರಿಯ ರಂಗಭೂಮಿ ಕಲಾವಿದ ರಮಾನಂದ ಹಿರೇಜೇವರ್ಗಿ, ಕೈಗಾರಿಕೋದ್ಯಮಿ ಪುಟ್ಟಗಂಗಯ್ಯ, ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿ ಪ್ರತಿನಿಧಿ ಡಾ.ಕೆ.ಪಿ.ಅಶ್ವಿನಿ , ವೈದ್ಯರು ಶಿಕ್ಷಣ ತಜ್ಞ ಡಾ.ಎಚ್.ಎಂ.ವೆಂಕಟಪ್ಪ, ಸಾಹಿತಿ ಶೀಮತಿ ಗಿರಿಜ ಶಂಕರ್, ಪರಿಸರ ಕಾರ್ಯಕರ್ತ ಕಾಳನಹುಂಡಿ ಗುರುಸ್ವಾಮಿ, ರೈತ ಸಂಘಟಕ ರಾಮಣ್ಣ ಕೆಂಚಳ್ಳೇರ, ರಂಗಭೂಮಿ ಕಲಾವಿದ ಡಾ. ಕೆ.ಎಂ.ಕೃಷ್ಣಮೂರ್ತಿ, ಸಂಘಟಕ ವೈ.ಪ್ರಕಾಶ, ಸಾಹಿತಿ ಡಾ.ಆರ್.ಕೆ.ಪಾಟೀಲ, ಶಿಕ್ಷಣ ತಜ್ಞ ಜಿ.ಎಸ್,ಶಿವಲಿಂಗಪ್ಪ , ವಿಶೇಷ ಚೇತನ ಸಾಧಕ ಕೆ.ಎಸ್.ರಾಜಣ್ಣ, ಸಾಹಿತಿ ಶಿಕ್ಷಣ ತಜ್ಞ ಕೆ.ಎ.ದೊಡ್ಡಮನಿ, ಸಾಹಿತಿ ಡಾ.ವಾದಿರಾಜ ದೇಶಪಾಂಡೆ, ಕನ್ನಡಪರ ಹೋರಾಟಗಾರ ಎ.ಅಶ್ವತ್ಥ ರೆಡ್ಡಿ ಅವರನ್ನು ಸನ್ಮಾನಿಸಲಾಗುವುದು.

ಸಂಜೆ 7 ರಿಂದ ರಾತ್ರಿ 10: ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಯಲಿವೆ.

ವೇದಿಕೆ-2: ಬೆಳಗ್ಗೆ 9 ರಿಂದ 11 ಗಂಟೆ
ಗೋಷ್ಠಿ-4
ವಚನ ಪರಂಪರೆ
ಹಿರಿಯ ಸಂಶೋಧಕ ಡಾ.ಸಂಗಮೇಶ ಸವದತ್ತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಡರಗಿ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ನಾಡೋಜ ಅನ್ನದಾನೇಶ್ವರ ಸ್ವಾಮೀಜಿಗಳು ಆಶಯ ನುಡಿಗಳನ್ನಾಡಲಿದ್ದಾರೆ.
ನ್ಯಾಯನಿಷ್ಠುರಿ ನಿಜಶರಣ ಅಂಬಿಗರ ಚೌಡಯ್ಯ ಮತ್ತು ಮಹಾಮನೆ ಕುರಿತು ಡಾ.ಕಾಂತೇಶ ಅಂಬಿಗೇರ, ವಚನಗಳಲ್ಲಿ ಅನುಭಾವ ಕುರಿತು ಶ್ರೀಮತಿ ವೀಣಾ ಬನ್ನಂಜೆ ಹಾಗೂ ವಚನಗಳಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ಕುರಿತು ಸಂಗಮೇಶ ಪೂಜಾರ ಅವರು ಮಾತನಾಡಲಿದ್ದಾರೆ.

ಗೋಷ್ಠಿ-5: ಬೆಳಗ್ಗೆ 11 ರಿಂದ ಮಧ್ಯಾಹ್ನ 1
“ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ” ಜರುಗಲಿದೆ. ಧಾರವಾಡ ಹಿರಿಯ ವಿದ್ವಾಂಸ ಡಾ.ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಡಾ.ಕೆ.ಮುರಳಿಧರ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ/ಕಾನೂನು ಚಿಂತನೆ ಕುರಿತು ಅಶೋಕ ಹಾರನಹಳ್ಳಿ, ಹಾವನೂರು ವರದಿಗೆ ಐವತ್ತು ವರ್ಷ ಕುರಿತು ಕೆ. ಜಯ ಪ್ರಕಾಶ್ ಹೆಗ್ಡೆ ಹಾಗೂ ಮಹಾಜನ ವರದಿ ಕುರಿತು ಡಾ.ಓಂಕಾರ ಕಾಕಡೆ ಅವರು ಮಾತನಾಡಲಿದ್ದಾರೆ.

ಗೋಷ್ಠಿ-6: ಮಧ್ಯಾಹ್ನ 1 ರಿಂದ 3
ಕವಿಗೋಷ್ಠಿ-2
ಹಿರಿಯ ಕವಯತ್ರಿ ಡಾ.ಎಚ್.ಆರ್.ಸುಜಾತಾ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಜಯಪ್ಪ ಹೊನ್ನಾಳಿ ಅವರು ಆಶಯನುಡಿಗಳನ್ನಾಡಲಿದ್ದಾರೆ.
ಡಾ.ಗೋವಿಂದ ಹೆಗಡೆ, ಶ್ರೀಮತಿ ಅರುಣಾ ನರೇಂದ್ರ, ಕೃಷ್ಣ ದೇವಾಂಗಮಠ, ಶ್ರೀಮತಿ ಕೆ.ಗಿರಿಜಾ ರಾಜಶೇಖರ, ಗುರು ಬಸವರಾಜ ಎಸ್., ಡಾ.ಸದಾಶಿವ ದೊಡಮನಿ, ಸಂತೋಷ ನಾಯಿಕ, ಎಸ್.ಎಂ.ತುಕ್ಕಪ್ಪನವರ, ಮೌನೇಶ ಬಡಿಗೇರ, ಶ್ರೀಮತಿ ಕನ್ನಿಕಾ ಎಚ್.ಆರ್., ಬಿ.ಕೆ.ಹೊಂಗಲ, ಶ್ರೀಮತಿ ನೂರ್‍ಜಹನಾ ಹೊಸಪೇಟೆ, ಶ್ರೀಮತಿ ಸುಮಾ ಸತೀಶ್, ಎಸ್.ನರಸಿಂಹಸ್ವಾಮಿ, ಲಿಂಗರಾಜ ಸೊಟ್ಟಪ್ಪನವರ, ಡಾ.ಸುಮತಿ ಪಿ, ನರೇಶ್ ನಾಯ್ಕ, ಶ್ರೀಮತಿ ಬಿ.ಟಿ.ಅಂಬಿಕಾ, ಡಾ.ಸಿ.ಶಿವಣ್ಣ, ಶ್ರೀಮತಿ ಅನುರಾಧ ಪಿ.ಎಸ್., ಶ್ರೀಧರ ಶೇಟ್, ಮಾಲತೇಶ್ ಚಳಗೇರಿ, ಪ್ರೊ.ಪ್ರಭುಲಿಂಗ ದಂಡಿನ, ಶ್ರೀಮತಿ ಪದ್ಮಾ ವಿಠಲ್, ಶ್ರೀಮತಿ ಗಂಗಮ್ಮಾ ನಾಲವಾರ ಅವರು ಭಾಗವಹಿಸಲಿದ್ದಾರೆ.

ಗೋಷ್ಠಿ -7: ಮಧ್ಯಾಹ್ನ 3 ರಿಂದ 4
ಕನ್ನಡ ಸಾಹಿತ್ಯದ ಹೊಸ ಒಲವುಗಳು

ಹಿರಿಯ ಬರಹಗಾರರಾದ ಶ್ರೀಮತಿ ಸುನಂದಾ ಪ್ರಕಾಶ ಕಡಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಣ್ಣಕಥೆ ಮತ್ತು ಕವಿತೆ ಕುರಿತು ಡಾ.ವಿ.ಎ.ಲಕ್ಷ್ಮಣ ಹಾಗೂ ಪ್ರಬಂಧ ಮತ್ತು ಲಘು ಬರಹ ಕುರಿತು ಡಾ.ತಮಿಳ್ ಸೆಲ್ವಿ ಅವರು ಮಾತನಾಡಲಿದ್ದಾರೆ.

ಗೋಷ್ಠಿ-8: ಸಂಜೆ 4 ರಿಂದ 6
ಮಕ್ಕಳ ಸಾಹಿತ್ಯ ಮನೋವಿಕಾಸ
ಹಿರಿಯ ಸಾಹಿತಿ ದುಂಡಿರಾಜ್ ಅಧ್ಯಕ್ಷತೆ ವಹಿಸಲಿದ್ದು, ಮಕ್ಕಳ ಸಾಹಿತಿ ಆನಂದ್ ಪಾಟೀಲ್ ಆಶಯ ನುಡಿಗಳನ್ನಾಡಲಿದ್ದಾರೆ. ಮಕ್ಕಳ ಸಾಹಿತ್ಯದ ಬಲವರ್ಧನೆ ಕುರಿತು ಉತ್ತರ ಕನ್ನಡದ ತಮ್ಮಣ್ಣ ಬೀಗಾರ, ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ವಿಕಾಸ ಕುರಿತು ಹಾಲಯ್ಯ ಹಿರೇಮಟ ಹಾಗೂ ಮಕ್ಕಳ ಸಾಹಿತ್ಯದಲ್ಲಿ ಪ್ರಯೋಗಶೀಲತೆ ಕುರಿತು ಡಾ.ಕೆ.ಎಸ್.ಪವಿತ್ರಾ ಅವರು ಮಾತನಾಡಲಿದ್ದಾರೆ. ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ವೇದಿಕೆ-3: ಗೋಷ್ಠಿ-4
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ: ಬೆಳಗ್ಗೆ 9 ರಿಂದ 10-30
ಭಾರತ ಸರ್ಕಾರದ ವರಮಾನ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐಚ್ಛಿಕ ಕನ್ನಡ ಕುರಿತು ಶ್ರೀಮತಿ ನಂದಿನಿ, ಶೈಕ್ಷಣಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಕುರಿತು ಮಹಮ್ಮದ ರಫಿ ಪಾಶಾ ಹಾಗೂ ಕನ್ನಡದಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆ ಕುರಿತು ಡಾ.ಪ್ರಕಾಶ್ ಜೆ.ಪಿ ಅವರು ಮಾತನಾಡಲಿದ್ದಾರೆ.

ಗೋಷ್ಠಿ-5:
ಮರೆಯಲಾಗದ ಮಹನೀಯರು: ಬೆಳಗ್ಗೆ 10-30 ರಿಂದ 1 ಗಂಟೆ
ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ವಸ್ತ್ರದ ಅವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಆಶಯ ನುಡಿಗಳನ್ನಾಡಲಿದ್ದಾರೆ. ವಚನ ಸಾಹಿತ್ಯ ಸಂರಕ್ಷಕ ಪೂಜ್ಯ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಕುರಿತು ಹಾವೇರಿ ಹುಕ್ಕೇರಿಮಠದ ಸದಾಶಿವಸ್ವಾಮಿಗಳು, ಪುಸ್ತಕ ಸಂಸ್ಕೃತಿ ವಿಸ್ತಾರಕ ಕಾದಂಬರಿ ಪಿತಾಮಹ ಗಳಗನಾಥರ ಕುರಿತು ಬಾಗಲಕೋಟೆಯ ಶ್ರೀಮತಿ ಸುರೇಖಾ ದತ್ತಾತ್ರೇಯ, ಕನ್ನಡದ ಸೀಮಾ ಪುರುಷ ಡಾ.ವಿ.ಕೃ.ಗೋಕಾಕ್ ಕುರಿತು ಶ್ರೀಧರ ಹೆಗಡೆ ಭದ್ರನ್, ಚೆಂಬೆಳಕಿನ ಕವಿ ನಾಡೋಜ ಡಾ.ಚನ್ನವೀರ ಕಣವಿ ಬಗ್ಗೆ ಡಾ.ಸಂಗಮನಾಥ ಎಂ.ಲೋಕಾಪುರ(ಬಾಗಲಕೋಟ) ಹಾಗೂ ಅಂದರ ಬಾಳಿನ ಬೆಳಕು ಪಂ.ಪುಟ್ಟರಾಜ ಗವಾಯಿಗಳು ಮತ್ತು ಪಂಚಾಕ್ಷರಿ ಗವಾಯಿಗಳ ಕುರಿತು ಗದಗ ಡಾ.ರಾಜಶೇಖರ ದಾನರಡ್ಡಿ ಅವರು ಮಾತನಾಡಲಿದ್ದಾರೆ.

ಗೋಷ್ಠಿ-6:
ಕರ್ನಾಟಕ: ಭಾಷಾ ವೈವಿದ್ಯ: ಮಧ್ಯಾಹ್ನ 1 ರಿಂದ 3
ವಿಶ್ರಾಂತ ಪ್ರಾಧ್ಯಾಪಕ ಡಾ.ವಿಠ್ಠಲ್‍ರಾವ್ ಗಾಯಕವಾಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಭಾಷಾ ತಜ್ಞರಾದ ಡಾ.ಪಾರ್ವತಿ ಜಿ.ಐತಾಳ್ ಅವರು ಆಶಯನುಡಿಗಳನ್ನಾಡಲಿದ್ದಾರೆ. ತುಳು ಭಾಷೆ ಕುರಿತು ಡಾ.ಗಣನಾಥ ಎಕ್ಕಾರು, ಸೋಲಿಗ ಬಗ್ಗೆ ಡಾ.ಉಮೇಶ್ ಮೈಸೂರು, ಕೊಂಕಣಿ ಕುರಿತು ಶ್ರೀಮತಿ ಫ್ಲೋರಿನ್ ರೋಚ್, ಅರೆಭಾಷೆ ಕುರಿತು ಶ್ರೀಮತಿ ಸ್ಮಿತಾ ಅಮೃತತಾಜ್ ಹಾಗೂ ಕೊಡವ ಬಗ್ಗೆ ಡಾ.ಕಾವೇರಿ ಎನ್.ವಿ. ಅವರು ಮಾತನಾಡಲಿದ್ದಾರೆ.

ಗೋಷ್ಠಿ-7:
ಕಲಾ ಸಂಗಮ: ಮಧ್ಯಾಹ್ನ 3 ರಿಂದ 5 ಗಂಟೆ
ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲು ಅವರು ಆಶಯನುಡಿಗಳನ್ನಾಡಲಿದ್ದಾರೆ. ಶಿಲ್ಪಕಲೆ ಕುರಿತು ವೀರಣ್ಣ ಅರ್ಕಸಾಲಿ, ಸಂಗೀತ ಮತ್ತು ನೃತ್ಯ ಕ್ಷೇತ್ರದ ಹೊಸ ಪ್ರಯೋಗಗಳು ಕುರಿತು ಡಾ.ಜಯದೇವಿ ಜಂಗಮಶೆಟ್ಟಿ, ಜನಜಾಗೃತಿಗೆ ಬೀದಿ ನಾಟಕಗಳ ಪ್ರಭಾವ ಕುರಿತು ಗ್ಯಾರಂಟಿ ರಾಮಣ್ಣ ಅವರು ಮಾತನಾಡಲಿದ್ದಾರೆ.

ಗೋಷ್ಠಿ-8:
ಪುಸ್ತಕೋದ್ಯಮದ ಸವಾಲುಗಳು: ಸಂಜೆ 5 ರಿಂದ 7
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪ್ರಕಾಶಕ ಎಂ.ಎ.ಸುಬ್ರಹ್ಮಣ್ಯ ಅವರು ಆಶಯನುಡಿಗಳನ್ನಾಡಲಿದ್ದಾರೆ.
ಪ್ರಕಾಶಕರು ಹಾಗೂ ಮಾರಾಟ ವ್ಯವಸ್ಥೆ ಕುರಿತು ಬಸವರಾಜ ಕೊನೇಕ, ಕೃತಿ ಹಕ್ಕುಸ್ವಾಮ್ಯದ ಕಾನೂನಿನ ಅರಿವು ಕುರಿತು ಶ್ರೀಧರ ಪ್ರಭು ಹಾಗೂ ಆನ್‍ಲೈನ್ ಓದುಗುರು ಮತ್ತು ಇ-ಪುಸ್ತಕ ಕುರಿತು ದೇವು ಪತ್ತಾರ ಅವರು ಮಾತನಾಡಲಿದ್ದಾರೆ.

Exit mobile version