Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಜನವರಿ 6ರ ಮೊದಲ ದಿನದ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ

details-of-first-day-programme-in-kannada-sahitya-sammelana

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 6,7 ಮತ್ತು 8 ರಂದು ಹಾವೇರಿ ನಗರದ ಅಜ್ಜಯ್ಯನ ದೇವಸ್ಥಾನದ ಎದುರು ಕನಕ-ಶರೀಫ ಮತ್ತು ಸರ್ವಜ್ಞ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಯಲ್ಲಿ ಜರುಗಲಿದೆ. ಈ ಬಾರಿ ಮೂರೂ ವೇದಿಕೆಗಳನ್ನು ಒಂದೇ ಸ್ವರೂಪದಲ್ಲಿ ನಿರ್ಮಿಸಲಾಗಿದ್ದು, ಅತಿ ಹೆಚ್ಚು ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಧ್ವಜಾರೋಹಣ: ಜನವರಿ 6 ರಂದು ಬೆಳಗ್ಗೆ 7 ರಿಂದ 7-30ರವರೆಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಕಾರ್ಮಿಕ ಖಾತೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅರಬೈಲ್ ಶಿವರಾಮ ಹೆಬ್ಬಾರ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಾ.ಮಹೇಶ ಜೋಶಿ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಂಗಯ್ಯ ಹಿರೇಮಠ ಅವರು ನಾಡಧ್ವಜಾರೋಹಣ ನೆವೇರಿಸಲಿದ್ದಾರೆ.

ಮೆರವಣಿಗೆ: ಜನವರಿ 6ರ ಬೆಳಗ್ಗೆ 7-30ರಿಂದ 10-30ರವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜರುಗಲಿದೆ. ಪುಸಿದ್ದೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳನ ವೇದಿಕೆ ತಲುಪಲಿದೆ. ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳೆಗಡ್ಡಿ, ರಾಯಪ್ಪ ಹುಣಸಗಿ, ಜಿ.ಪಂ.ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಪಾಲ್ಗೊಳ್ಳಲಿದ್ದಾರೆ.

ಸಮಾರಂಭ ಉದ್ಘಾಟನೆ
ಬೆಳಗ್ಗೆ 10-30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸಿ ಉದ್ಘಾಟನಾ ನುಡಿಗಳನ್ನಾಡುವರು. ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ಶಾಸಕರು ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ನೆಹರು ಓಲೇಕಾರ ಅವರು ಸ್ವಾಗತಿಸುವರು.
ಅರಬೈಲ್ ಶಿವರಾಮ ಹೆಬ್ಬಾರ ಅವರಿಂದ ಮೊದಲ ಮಾತು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರಿಂದ ಆಶಯ ನುಡಿ, ಸಮ್ಮೇಳನಾಧ್ಯಕ್ಷರಾದ ಡಾ.ದೊಡ್ಡರಂಗೇಗೌಡರಿಂದ ಭಾಷಣ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರಿಂದ ಪರಿಷತ್ತಿನ ಪುಸ್ತಕಗಳ ಬಿಡುಗಡೆ, ಕನ್ನಡ ಮತ್ತು ಸಂಸ್ಕೃತಿ ಇಂಧನ ಖಾತೆ ಸಚಿವ ವಿ. ಸುನಿಲ್‌ ಕುಮಾರ್‌ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಂದ ವೇದಿಕೆ ಉದ್ಘಾಟನೆ, ಸಂಸದ ಶಿವಕುಮಾರ ಉದಾಸಿ ಅವರಿಂದ ಹಾವೇರಿ ಜಿಲ್ಲಾ ಪುಸ್ತಕಗಳ ಬಿಡುಗಡೆ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಚಿತ್ರಕಲಾಪ್ರದರ್ಶನ, ಶಾಸಕರಾದ ಅರುಣಕುಮಾರ ಪೂಜಾರ ಅವರು ವಾಣಿಜ್ಯ ಮಳಿಗೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಪುಸ್ತಕ ಮಳಿಗೆ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಿಧಾನ ಪರಿಷತ್ ಸದಸ್ಯರಾದ ಆರ್.ಶಂಕರ್ ವಸ್ತು ಪ್ರದರ್ಶನ ಹಾಗೂ ಪ್ರದೀಪ ಶೆಟ್ಟರ ಮಾಧ್ಯಮ ಕೇಂದ್ರ ಉದ್ಘಾಟಿಸಲಿದ್ದಾರೆ.
ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ, ವಿಧಾನ ಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ, ರುದ್ರಪ್ಪ ಲಮಾಣಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಉಪಸ್ಥಿತರಿರುವರು.


ಸಾಮರಸ್ಯದ ಭಾವ- ಕನ್ನಡದ ಜೀವ
ಮಧ್ಯಾಹ್ನ 2 ರಿಂದ 4ರವರೆಗೆ ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಗೋಷ್ಠಿ-1 “ಸಾಮರಸ್ಯದ ಭಾವ-ಕನ್ನಡದ ಜೀವ” ಜರುಗಲಿದ್ದು, ಚಿತ್ರದುರ್ಗ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅವರಿಂದ ಆಶಯನುಡಿ, ಕನಕರ ಭಾವೈಕ್ಯತಾ ದೃಷ್ಟಿ ಕುರಿತು ಡಾ.ವೈ.ಎಂ.ಯಾಕೊಳ್ಳಿ, ಶರೀಫರ ಸಾಮರಸ್ಯ ದೃಷ್ಟಿ ಕುರಿತು ಡಾ.ಅಡಿವೆಪ್ಪ ವಾಲಿ ಹಾಗೂ ಸರ್ವಜ್ಞರ ಸಾಮಾಜಿಕ ದೃಷ್ಟಿ ಕುರಿತು ಡಾ.ನಾಗರಾಜ ದ್ಯಾಮನಕೊಪ್ಪ ವಿಷಯ ಮಂಡನೆ ಮಾಡಲಿದ್ದಾರೆ.

ಗೋಷ್ಠಿ 2: ಸಂಜೆ 4 ರಿಂದ 6ರವರೆಗೆ ಜರುಗಲಿದ್ದು, ಹಿರಿಯ ಕವಿ ಸರಜೂ ಕಾಟ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಹಿರಿಯ ಕವಯತ್ರಿ ಡಾ. ವಿಜಯಶ್ರೀ ಸಬರದ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಕವಿಗೋಷ್ಠಿಯಲ್ಲಿ 25 ಕವಿಗಳು ಭಾಗವಹಿಸಲಿದ್ದಾರೆ.

ಸಾಧಕರಿಗೆ ಸನ್ಮಾನ: ಸಂಜೆ 6 ರಿಂದ 7 ಗಂಟೆವರೆಗೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ಕಲಾವಿದ ರಮೇಶ ಅರವಿಂದ ಆಶಯ ನುಡಿಗಳನ್ನಾಡುವರು. ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸನ್ಮಾನಿಸುವರು.

ಸನ್ಮಾನಿತರು: ನಿವೃತ್ತ ನ್ಯಾಯಾಧೀಶರು ಹಾಗೂ ಹಿರಿಯ ಸಾಹಿತಿ ಜಿನದತ್ತ ದೇಸಾಯಿ, ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಮಗ ನಿವೃತ್ತ ಹಿರಿಯ ಸೇನಾಧಿಕಾರಿ ಏರ್ ಮಾರ್ಷಲ್ ಕೆ.ಸಿ. ಕಾರಿಯಪ್ಪ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್., ಫರ್ಡಿನೆಂಡ್ ಕಿಟ್ವೆಲ್ ಅವರ ಮರಿಮೊಮ್ಮಗ ಯಾರ್ಕ್‍ಕಟ್ಟೆಲ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ ಸಿಇಒ ಹರಿಮಾರರ್, ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕುಲಾಧಿಪತಿ ಮಾಲ್ಡೀವ್ ದೇಶದ ಗೌರವ ಕೌನ್ಸಿಲ್ ಜನರಲ್ ಡಾ.ವಿ.ಜಿ.ಜೋಸೆಫ್, ಚಲನಚಿತ್ರ ಕಲಾವಿದ ರಮೇಶ ಅರವಿಂದ, ಹಿರಿಯ ವೈದ್ಯ ಡಾ.ಶರಣ ಪಾಟೀಲ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಹಿರೇಮಠ, ನವದೆಹಲಿ ಅಂಚೆ ಸೇವಾ ಮಂಡಳಿ ಸದಸ್ಯ ಚಾಲ್ರ್ಸ್ ಲೋಬೋ, ಹಿರಿಯ ಪೊಲೀಸ್ ಅಧಿಕಾರಿ ಅಮರ್‌ಕುಮಾರ್ ಪಾಂಡೆ, ಹೊರನಾಡ ಕನ್ನಡಿಗ ಬ್ರಹ್ಮಕುಮಾರ ಮೃತ್ಯುಂಜಯ, ಹಿರಿಯ ಸಾಹಿತಿ ಬ.ಫ.ಯಲಿಗಾರ, ರಂಗಭೂಮಿ ಕಲಾವಿದ ಗೋಪಾಲಕೃಷ್ಣ ನಾಯರಿ, ಜರ್ಮನಿ ನಗರಸಭಾ ಸದಸ್ಯ ವಿದುಷಿ ನಂದಿನಿ ನಾರಾಯಣ್, ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ, ಹಿರಿಯ ಸಾಹಿತಿ ಶ್ರೀಮತಿ ವಿದ್ಯಾವತಿ ಅಂಕಲಗಿ, ಹಿರಿಯ ಸಾಹಿತಿ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ, ರಂಗಕರ್ಮಿ ಡಿ.ವಿ.ಎಸ್.ಗುಪ್ತ, ಸಹಕಾರ ಕ್ಷೇತ್ರದ ಸಾಧಕ ಶ್ರೀಮತಿ ಶಕುಂತಲಾ ಭಟ್ ಹಳೆಯಂಗಡಿ, ಹಿರಿಯ ಸಾಹಿತಿ ಪ್ರೊ. ಅನ್ನದಾನಿ ಹಿರೇಮಠ, ಸಮಾಜ ಸೇವಕ ಚಂದ್ರಶೇಖರ ಬಾಳೆ, ಕನ್ನಡ ಸೇವಾನಿರತರಾದ ರಾಮಲಿಂಗ ಶೆಟ್ಟಿ, ಹೊರದೇಶದ ಕನ್ನಡಿಗರಾದ ಕನ್ನಡತಿ ಭಾಗೀರಥಿ, ಕನ್ನಡಪರ ಹೋರಾಟಗಾರ ಮಹಾದೇವ ತಳವಾರ, ಸಂಘಟಕ ಟಿ.ಸಿ.ವೆಂಕಟಾಚಲಪತಿ, ಸಾಮಾಜಿಕ ಹೋರಾಟಗಾರ ಫಕೀರಪ್ಪ ಹೊತ್ನಳ್ಳಿ, ಹಿರಿಯ ಪತ್ರಕರ್ತ ರಾಜು ನದಾಫ, ಹಿರಿಯ ಸಂಶೋಧಕ ಡಾ.ಎಸ್.ಡಿ.ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತದೆ.. ಸಂಜೆ 7 ರಿಂದ ರಾತ್ರಿ 10ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವೇದಿಕೆ-2: ಪಾಪು-ಚಂಪಾ ವೇದಿಕೆ ಹೆಳವನಕಟ್ಟೆ ಗಿರಿಯ ಮಹಾಮಂಟಪ:

ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ಹಾವೇರಿ ಜಿಲ್ಲಾ ದರ್ಶನ ಗೋಷ್ಠಿ-1:
ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಜೀವರಾಜ ಛತ್ರದ ಆಶಯ ನುಡಿಗಳನ್ನಾಡಲಿದ್ದಾರೆ. ರಜತ ಸಂಭ್ರಮದಲ್ಲಿ ಹಾವೇರಿ ಜಿಲ್ಲೆಯ ಕುರಿತು ವೈ.ಬಿ.ಆಲದಕಟ್ಟಿ, ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜಿಲ್ಲೆಯ ಕೊಡುಗೆ ಕುರಿತು ಡಾ.ಎಸ್.ಪಿ.ಗೌಡರ್. ಕರ್ನಾಟಕ ಏಕೀಕರಣದಲ್ಲಿ ಹಾವೇರಿ ಜಿಲ್ಲೆಯ ಪಾತ್ರ ಕುರಿತು ಮಾರುತಿ ಶಿಡ್ಲಾಪುರ ಹಾಗೂ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಕುರಿತು ಡಾ.ರಮೇಶ ತೆವರಿ ಅವರು ಮಾತನಾಡಲಿದ್ದಾರೆ.

ಗೋಷ್ಠಿ-2: “ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕರ್ನಾಟಕದ ಕೊಡುಗೆ” ಸಂಜೆ 4 ರಿಂದ 5 ಗಂಟೆವರೆಗೆ ಜರುಗಲಿದೆ. ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಕುರಿತು ಪ್ರೊ.ಟಿ.ಜಿ.ಹರೀಶ್ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಕನ್ನಡ ಪ್ರತಿಕೋದ್ಯಮದ ಕೊಡುಗಡೆ ಕುರಿತು ವಿಲಾಸ ಮೇಲಗಿರಿ ಅವರು ಮಾತನಾಡಲಿದ್ದಾರೆ.
ಗೋಷ್ಠಿ-3: “ಕನ್ನಡ ದಿಗ್ಗಜರು” ಸಂಜೆ 5 ರಿಂದ 7 ಗಂಟೆವರೆಗೆ ಜರುಗಲಿದೆ.ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅವರು ಆಶಯ ನುಡಿಗಳನ್ನಾಡಲಿದ್ದಾರೆ.

ನಾಡೋಜ ಡಾ.ಪಾಟೀಲ ಪುಟ್ಟಪ್ಪ ಕುರಿತು ಡಾ.ಮಲ್ಲಿಕಾರ್ಜುನ ಸಿದ್ದಣ್ಣನವರ, ಪ್ರೊ.ಚಂದ್ರಶೇಖರ ಪಾಟೀಲ ಕುರಿತು ವಿಜಯಕಾಂತ ಪಾಟೀಲ, ಡಾ.ಮಹಾದೇವ ಬಣಕಾರ ಕುರಿತು ಡಾ.ಪ್ರೇಮಾನಂದ ಲಕ್ಕಣ್ಣನವರ ಹಾಗೂ ಡಾ.ಶ್ರೀನಿವಾಸ ಹಾವನೂರ ಕುರಿತು ಸಂಜಯ ಹಾವನೂರ ಅವರು ಮಾತನಾಡಲಿದ್ದಾರೆ.

ವೇದಿಕೆ-3 ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ

ಗೋಷ್ಠಿ-1: ಶತಮಾನ-ಪುರುಷರು ಈ ಮಹನೀಯರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಮಧ್ಯಾಹ್ನ 2 ರಿಂದ 3-30ರವರೆಗೆ ಜರುಗಲಿದೆ. ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಬರಹಗಾರ ಬಾಬು ಕೃಷ್ಣಮೂರ್ತಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ.
ಜಿ.ನಾರಾಯಣ ಕುರಿತು ಕೆ.ಟಿ.ಶ್ರೀಕಂಠೇಗೌಡ, ಡಾ.ಹಿರೇಮಲ್ಲೂರು ಈಶ್ವರನ್ ಕುರಿತು ಪ್ರೊ.ಶಶಿಧರ ತೋಡ್ಕರ್, ಸು.ರಂ.ಎಕ್ಕುಂಡಿ ಕುರಿತು ಜೆ.ಎಂ.ರಾಜಶೇಖರ, ಶಾಂತವೇರಿ ಗೋಪಾಲಗೌಡ ಕುರಿತು ನೆಂಪೆ ದೇವರಾಜ, ಹಾಸ್ಯ ನಟ ನರಸಿಂಹರಾಜು ಕುರಿತು ಶ್ರೀಮತಿ ಸುಧಾ ನರಸಿಂಹರಾಜು ಅವರು ಮಾತನಾಡಲಿದ್ದಾರೆ.

ಗೋಷ್ಠಿ-2: ಮಧ್ಯಾಹ್ನ 3-30 ರಿಂದ 5-15ರವರೆಗೆ ಸಂಕೀರ್ಣ ಗೋಷ್ಠಿ ಜರುಗಲಿದೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದು, ಗಮಕ ಕಲೆ ಅಳಿವು ಉಳಿವು ಕುರಿತು ಡಾ.ಎ.ವಿ.ಪ್ರಸನ್ನ, ಲಿಂಗತ್ವ ಅಲ್ಪಸಂಖ್ಯಾತರ ಭವಿಷ್ಯ ಮತ್ತು ಭರವಸೆಗಳು ಕುರಿತು ಶ್ರೀಮತಿ ಕೆ.ಸಿ.ಅಕ್ಷತಾ, ಮೊಬೈಲ್: ಸಾಧಕ ಮತ್ತು ಬಾಧಕಗಳು ಕುರಿತು ಡಾ.ಶುಭಾ ಮರವಂತೆ, ಪೊಲೀಸ್ ಸಾಹಿತ್ಯ ಕುರಿತು ಡಿ.ಸಿ.ರಾಜಪ್ಪ ಅವರು ಮಾತನಾಡಲಿದ್ದಾರೆ.

ಗೋಷ್ಠಿ-3: ಸಂಜೆ 5 ರಿಂದ 7 ಗಂಟೆವರೆಗೆ ಬೆಳ್ಳಿತೆರೆ-ಕಿರುತೆರೆ.
ಹಿರಿಯ ಕಲಾವಿದ ಎಚ್.ಜಿ.ದತ್ತಾತ್ರೇಯ(ದತ್ತಣ್ಣ) ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ ಕಶ್ಯಪ್ ಆಶಯ ನುಡಿಗಳನ್ನಾಡಲಿದ್ದಾರೆ. ಚಲನಚಿತ್ರ ಸಾಹಿತ್ಯ ಪರಂಪರೆ ಕುರಿತು ಎನ್.ಎಸ್.ಶ್ರೀಧರಮೂರ್ತಿ, ಸಮಾಜದ ಮೇಲೆ ಧಾರಾವಾಹಿಗಳ ಪರಿಣಾಮ ಕುರಿತು ಶ್ರೀಮತಿ ಕುಸುಮ ಆಯರಹಳ್ಳಿ ಹಾಗೂ ಕನ್ನಡ ಚಲನಚಿತ್ರಗಳಲ್ಲಿ ದೇಶಭಕ್ತಿ ಮತ್ತು ಕನ್ನಡಪರ ಗೀತಗೆಳು ಕುರಿತು ಪ್ರಕಾಶ್ ಮಲ್ಪೆ ಅವರು ಮಾತನಾಡಲಿದ್ದಾರೆ. ಸಂಜೆ 7 ರಿಂದ ರಾತ್ರಿ 10ರವರೆಗೆ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | 11 ಮುಸ್ಲಿಮರಿಗೆ ಅವಕಾಶ, ಇಬ್ಬರಿಗೆ ಸನ್ಮಾನ; ಮುಸ್ಲಿಂ ಪ್ರಾತಿನಿಧ್ಯ ಇಲ್ಲವೆನ್ನುವುದು ಬೇಜವಾಬ್ದಾರಿ ಮಾತು: ಮಹೇಶ್‌ ಜೋಶಿ ಸಂದರ್ಶನ

Exit mobile version