ಹಾವೇರಿ: ಪಠ್ಯಪುಸ್ತಕ ರಚನೆ ಹಾಗೂ ಪರಿಷ್ಕರಣೆ ವಿಚಾರದಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು ಎಂದು ಮಾಜಿ ಸಚಿವ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಹಾವೇರಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊರಟ್ಟಿ, ಶಿಕ್ಷಣ ಇಲಾಖೆಯಲ್ಲಿ ಡಿಎಸ್‌ಇಆರ್‌ಟಿ ಎಂಬ ಒಂದು ಸಂಸ್ಥೆ ಇದೆ. ಆ ಸಂಸ್ಥೆಯೇ ಈ ಕಾರ್ಯವನ್ನ ನೊಡಿಕೊಳ್ಳುತ್ತದೆ. ಡಿಎಸ್‌ಇಆರ್‌ಟಿಯವರೇ ಸಿಲೆಬಸ್, ಮತ್ತು ಬುಕ್‌ಗಳನ್ನು ತಯಾರಿ ಮಾಡೋದು. ಅದರಲ್ಲಿ ನಾವು ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು.
ಚುನಾವಣೆ ಬಗ್ಗೆ ಮಾತನಾಡಿದ ಹೊರಟ್ಟಿ, ಈ ಬಾರಿ 40% ಓಟ್ ನನಗೆ ಹೆಚ್ಚು ಬರುತ್ತವೆ ಎನ್ನುವ ನಂಬಿಕೆ ಇದೆ. ಪ್ರತಿ 6 ವರ್ಷಕ್ಕೊಮ್ಮೆ ನಾನು ಏನೆಲ್ಲ ಕೆಲಸಗಳನ್ನ ಮಾಡುತ್ತೇನೆ ಎಂಬುದರ ಬಗ್ಗೆ ಬುಕ್ ಪ್ರಿಂಟ್ ಮಾಡಿ ಹಂಚಿರುವೆ. ವಿರೋಧ ಪಕ್ಷದವರ ಮಾತಿಗೆ ನಾನು ಬೆಲೆ ಕೊಡುವುದಿಲ್ಲ. ನನ್ನ ವಿರುದ್ದ ಅವರಿಗೆ ಹೇಳೋದಕ್ಕೆ ಏನೂ ಇಲ್ಲದಿದ್ದರೂ ಸುಮ್ಮನೆ ಹೇಳುತ್ತಾರೆ.
ಶಿಕ್ಷಕರನ್ನು ಹೆದರಿಸಿ ಓಟ್ ಹಾಕಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಶಿಕ್ಷಕರನ್ನು ಹೆದರಿಸೋಕೆ ಆಗುತ್ತಾ? ಹೆದರಿಸಿ ಬೆದರಿಸಿ 7 ಬಾರಿ ಗೆಲ್ಲೋಕೆ ಆಗುತ್ತಾ? ವಿರೋಧ ಪಕ್ಷದವರ ಮಾತಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ನನಗೆ ಎಲ್ಲಾ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಕಾಂಗ್ರೆಸ್‌ನವರೂ ನನಗೆ ಓಟ್ ಹಾಕುತ್ತಾರೆ ಎಂದರು.
ದನ್ನೂ ಓದಿ: Textbook controversy: ಪಠ್ಯ ಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಲು ನಿರಂಜನಾರಾಧ್ಯ ಒತ್ತಾಯ