Site icon Vistara News

Ram Mandir: ಮೋದಿ, ರಾಮ ಮಂದಿರ ವಿರುದ್ಧ ಅವಹೇಳನಕಾರಿ ಪೋಸ್ಟ್‌; ದೂರು

modi insult haveri

ಹಾವೇರಿ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ (Ayodhya Rama Mandir Pran Prathistha) ಬಳಿಕ ಹಲವಾರು ಮಂದಿ ಯುವಕರು ವ್ಯಗ್ರಗೊಂಡು ಮೋದಿ ವಿರುದ್ಧ, ರಾಮನ ವಿರುದ್ಧ ಅವಹೇಳನಕಾರಿ (Insulting Rama) ಕಾಮೆಂಟ್‌ಗಳನ್ನು ಮೀಡಿಯಾಗಳಲ್ಲಿ ಹಾಕುತ್ತಿರುವುದು ಕಂಡುಬರುತ್ತಿದೆ. ಹೀಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ರಾಮ ಮಂದಿರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಯುವಕನೊಬ್ಬನ ಮೇಲೆ‌ ಪ್ರಕರಣ ದಾಖಲಾಗಿದೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಧಿಕ್ ದಾಲ್ ರೊಟ್ಟಿ (26) ಎಂಬ ಯುವಕ ಹೀಗೆ ಪೋಸ್ಟ್ ಮಾಡಿದ ಆರೋಪಿ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಈತ ಅವಹೇಳನಕಾರಿಯಾಗಿ ಮಾತನಾಡಿ, ಆಡಿಯೋ ಹರಿಬಿಟ್ಟಿದ್ದ. ಶ್ರೀರಾಮನ ಮಂದಿರದ ಭಾವಚಿತ್ರದ ಮೇಲೆ ʼಅಲ್ಲಾ ಹು ಅಕ್ಬರ್ʼ ಎಂಬ ಸ್ಟೇಟಸ್ ಹಾಕಿಕೊಂಡಿದ್ದ. ಈ ಬಗ್ಗೆ ಹಲಗೇರಿ ಠಾಣೆಯಲ್ಲಿ ಶಿವನಗೌಡ ಮುಲ್ಕಿಗೌಡರ ಎಂಬವರು ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸುವಂತೆ ಹಿಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ತಾ‌ಲೂಕಿನ ತಗ್ಗಿಹಳ್ಳಿ ಗ್ರಾಮದ ಕಲಂದರ ಕಣವಿ ಎಂಬಾತ ಶ್ರೀರಾಮನ ಕುರಿತು ಅವಹೇಳನ ಮಾಡುವ ವ್ಯಾಟ್ಸ್ ಆಪ್ ಸ್ಟೇಟಸ್ (Whats app status) ಹಾಕಿಕೊಂಡಿdfdu, ಆತನ ವಿರುದ್ಧವೂ ದೂರು ದಾಖಲಾಗಿದೆ. ಪಾಕಿಸ್ತಾನದ ರಾಷ್ಟ್ರ ಧ್ವಜದ ಚಿತ್ರವಿಟ್ಟು, ಹಮ್ ಬಾಪ್ ಹೈ ತುಮಾರೆ ಎಂದು ಈತ ಸ್ಟೇಟಸ್ ಇಟ್ಟುಕೊಂಡಿದ್ದ.

ಕೊಪ್ಪಳದಲ್ಲಿ ʼಒಂದು ದಿನ ಬಾಬರಿ ಮಸೀದಿ ಮತ್ತೆ ಎದ್ದು ನಿಲ್ಲಲಿದೆʼ ಎಂಬ ವಿವಾದಾತ್ಮಕ ಪೋಸ್ಟ್‌ ಹಾಕಿದ್ದ ಶಾರುಖ್‌ ಖಾನ್‌ ಎಂಬ ಯುವಕನ ವಿರುದ್ಧ ಕೊಪ್ಪಳ ನಗರ (Koppala News) ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಗದಗದಲ್ಲಿ ರಾಮಮಂದಿರದ (Ram Mandir) ಮೇಲೆ ಪಾಕಿಸ್ತಾನ ಧ್ವಜ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೊ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತೌಜುದ್ದೀನ್ ದಫೇದಾರ್ ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮದ‌ ಸಂಕೇತವಿರುವ ಧ್ವಜದ ಚಿತ್ರ ಹಾಕಿ ಬಾಬರಿ ಮಸೀದಿ ಎಂದು ಬರೆದು ಯುವಕ ಶೇರ್‌ ಮಾಡಿದ್ದ.

ಇದನ್ನೂ ಓದಿ: ‌Ram Mandir: ರಾಮಮಂದಿರ ಮೇಲೆ ಪಾಕ್‌ ಧ್ವಜ; ಫೋಟೊ ಹರಿಬಿಟ್ಟ ಯುವಕ ಅರೆಸ್ಟ್

Exit mobile version