ಹಾವೇರಿ: ಕರಾವಳಿ ಭಾಗದಲ್ಲಿ ಕೆಲ ಸಂಘಟನೆಗಳಿಂದ ತಾಲಿಬಾನ್ ಮಾದರಿ ಸಂಸ್ಕೃತಿ ಹೇರಿಕೆ ಆಗಿರುವ ವಿಚಾರದಲ್ಲಿ ಅವರೇನು ಹೇಳುತ್ತಾರೆ, ಇವರೇನು ಹೇಳುತ್ತಾರೆ ಎನ್ನುವುದು ಮುಖ್ಯವಲ್ಲ. ಸಂವಿಧಾನ ಬದ್ಧವಾಗಿ ರಾಜ್ಯದ ಹೈಕೋರ್ಟ್ ತಿಳಿಸಿರುವ ಸಮವಸ್ತ್ರ ಪಾಲಿಸಿ. ಅದನ್ನು ಪಾಲಿಸಬೇಕು ಅನ್ನೋದು ಸರ್ಕಾರದ ನಿಲುವಾಗಿದೆ. ಹೈಕೋರ್ಟ್ ತೀರ್ಪುನ್ನು ಮೀರಿ ಯಾರಾದರೂ ಮಾತನಾಡುತ್ತಾರೆ ಎಂದರೆ ಅವರಿಗೆ ಸಂವಿಧಾನದ ಮೇಲಿನ ಗೌರವ ಪ್ರಶ್ನಿಸುವ ಅನಿವಾರ್ಯತೆ ಇದೆ ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಹಿರೇಕೇರೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾತನಾಡಿದ್ದಾರೆ.
ಹೈಕೋರ್ಟ್ ಏನು ಹೇಳಿದರು ಅದಕ್ಕೆ ನಮ್ಮ ಬದ್ದತೆ ಇದೆ. ಯಾರಾದರೂ ಸಂಪ್ರದಾಯದ ಹೆಸರಿನಲ್ಲಿ ಅನ್ಯಾಯ ಮಾಡ್ತಾರೆ ಅಂದರೆ ಅದು ಅವರ ಸಂಸ್ಕೃತಿ ಬಿಂಬಿಸುತ್ತದೆ. ಸಂವಿಧಾನದ ಆಶಯದಂತೆ, ಕೋರ್ಟ್ ತೀರ್ಪಿನಂತೆ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಸರ್ಕಾರ ಆದೇಶ ಕೊಟ್ಟಿದೆ.
ಸರ್ಕಾರ ಕಠಿಣ ಕ್ರಮವನ್ನೇ ತೆಗೆದುಕೊಂಡಿದೆ. ಕೆಲವರು ಮತೀಯವಾದ ಇಟ್ಟುಕೊಂಡು ರಾಷ್ಟ್ರೀಯವಾದಕ್ಕೆ ಸವಾಲು ಹಾಕುವಂತ ವಿಚಾರ ತಾವೆಲ್ಲಾ ಕೇಳಿದ್ದೀದೀರಿ. ಇದನ್ನು ಸ್ಪಷ್ಟವಾಗಿ ನಿಯಂತ್ರಣಕ್ಕೆ ತರುತ್ತೇವೆ ಮತ್ತು ಯಾರೂ ಕೂಡಾ ಕಾನೂನಿಗಿಂತ ಮೇಲಲ್ಲ. ನಮ್ಮ ವ್ಯವಸ್ಥೆಗಳು, ಆಚರಣೆಗಳು, ಆಲೋಚನೆಗಳು, ನಂಬಿಕೆಗಳು ನಮ್ಮ ಚೌಕಟ್ಟಿನಲ್ಲಿ ಸಂಪ್ರದಾಯಿಕವಾಗಿ, ಖಾಸಗಿಯಾಗಿ ಮಾಡಿಕೊಳ್ಳೋಕೆ ಇದೆ. ಆದರೆ ಸರ್ಕಾರಿ ಶಾಲೆಯಲ್ಲಿ, ಯಾವುದೇ ಒಂದು ಶಾಲೆಯಲ್ಲಿ ಸಮವಸ್ತ್ರ ಇರಬೇಕು ಎಂಬ ಆದೇಶ ಉಲ್ಲಂಘನೆ ಮಾಡಬೇಕು ಎನ್ನೋದನ್ನು ನಾವು ಸಹಿಸಲ್ಲ. ಇದಕ್ಕೆ ಕಾನೂನಿಗೆ ಪೂಕರವಾದ ವಾತಾವರಣ ಮಾಡುತ್ತೇವೆ ಮತ್ತು ಕಾನೂನಿಗೆ ಸೆಡ್ಡು ಹೊಡೆಯುವವರನ್ನು ನಿಯಂತ್ರಣ ಮಾಡುವ ಅಧಿಕಾರ ಇದೆ, ಅದನ್ನೂ ಕೂಡ ನಾವು ಮಾಡಿದ್ದೇವೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲೀಗ 150+ ಜಪ: BJP, CONGRESS ನಡುವೆ JDS ನಡೆ ವಿಭಿನ್ನ