ಹಾವೇರಿ/ಶಿವಮೊಗ್ಗ: ಕಳೆದ ಮಾರ್ಚ್ 15ರಂದು ಪ್ರೀತಿ ವಿಷ್ಯಕ್ಕೆ (Love Case) ಯುವತಿ ಕುಟುಂಬಸ್ಥರು, ಯುವಕನನ್ನು ಕೊಂದು ಭೀಕರವಾಗಿ (Murder case) ಸುಟ್ಟಾಕಿದ್ದರು. ಇದೀಗ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾಜ್೯ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಈ ಭೀಕರ ಕೃತ್ಯವು (Youth Burnt and Killed) ಶಿವಮೊಗ್ಗದ (Shivamogga News) ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ (Murder Case) ನಡೆದಿತ್ತು. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಆನಂತರ ಹಾವೇರಿಯ ಹಾನಗಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ಆರೋಪಿಗಳಾದ ಪ್ರವೀಣ, ಆದರ್ಶ, ರವಿಚಂದ್ರ, ಚಂದ್ರಶೇಖರ, ಶಶಿಕುಮಾರ್ ಹಾಗೂ ಗೌತಮ್, ನಾಗಪ್ಪ, ಪರಸಪ್ಪ ಎಂಬುವವರ 8 ಜನರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಯುವತಿಯ ಇಬ್ಬರು ಸಹೋದರರು, ಚಿಕ್ಕಪ್ಪ, ತಂದೆ ಹಾಗೂ ಕಾರ್ಮಿಕರ ವಿರುದ್ಧ ಚಾಜ್೯ಶೀಟ್ ಸಲ್ಲಿಸಲಾಗಿದೆ.
ಏನಿದು ಪ್ರಕರಣ?
ಕಳೆದ ಮಾರ್ಚ್ 15ರಂದು ಕಾರಿಗೆ ಬೆಂಕಿ ಹಚ್ಚಿ ಯುವಕನೊಬ್ಬನನ್ನು ಭೀಕರವಾಗಿ ಸುಟ್ಟು ಹಾಕಿದ (Youth Burnt and Killed) ಘಟನೆ ಶಿವಮೊಗ್ಗದ (Shivamogga News) ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ತೋಗರ್ಸಿ ಬಳಿ (Murder Case) ನಡೆದಿತ್ತು.
ಶಿವಮೊಗ್ಗದ ಗಾಡಿಕೊಪ್ಪದ ಮೈಸೂರು ಬೀದಿ ನಿವಾಸಿ ವೀರೇಶ್ (27) ಎಂಬಾತ ಬರ್ಬರವಾಗಿ ಕೊಲೆಯಾಗಿದ್ದ. ಮಿಸ್ಸಿಂಗ್ ಆಗಿದ್ದ ವೀರೇಶ್, ತೋಗರ್ಸಿ ಹೊರವಲಯದ ಸ್ಮಶಾನದ ಬಳಿ ಇನ್ನೋವಾ ಕಾರಿನ ಡಿಕ್ಕಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು. ತನಿಖೆಗಿಳಿದ ಪೊಲೀಸರಿಗೆ ಇದೊಂದು ಪ್ರೇಮ ಪ್ರಕರಣಕ್ಕೆ (Love case) ನಡೆದ ಕೊಲೆ ಎಂದು ತಿಳಿದು ಬಂದಿತ್ತು.
ಗಾಡಿಕೊಪ್ಪದ ನಿವಾಸಿ ವೀರೇಶ್, ಶಿಕಾರಿಪುರದ ಸಂಬಂಧಿ ಯುವತಿ ಅಂಕಿತಾಳನ್ನು ಪ್ರೀತಿಸುತ್ತಿದ್ದ. ಆದರೆ ವೀರೇಶ್ ಹಾಗೂ ಅಂಕಿತಾಳ ಮದುವೆಗೆ ಸಹೋದರ ಪ್ರವೀಣ್‌ಗೆ ಇಷ್ಟವಿರಲಿಲ್ಲ. ಹೀಗಾಗಿ ಆತನನ್ನು ಮುಗಿಸಿಬಿಡುವ ಪ್ಲ್ಯಾನ್ ಮಾಡಿಕೊಂಡಿದ್ದರು.
ಇದನ್ನೂ ಓದಿ: Road Accident: ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಸ್ಪಾಟ್ ಡೆತ್; ಕಿತ್ತು ಬಂತು ಸವಾರನ ಕಣ್ಣು ಗುಡ್ಡೆ
ಅದರಂತೆ ಮಾ.15ರ ಶುಕ್ರವಾರದಂದು ಗಾಡಿಕೊಪ್ಪದಲ್ಲಿರುವ ವೀರೇಶ್ ಮನೆಗೆ ಪ್ರವೀಣ್ ಬಂದಿದ್ದ. ನನ್ನ ತಂಗಿ ಅಂಕಿತಾಳನ್ನು ನಿನಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದು ನಾಟಕವಾಡಿದ್ದರು. ಆದರೆ ಆಕೆಯೊಟ್ಟಿಗೆ ಇದ್ದ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡು. ಅವಳಿನ್ನು ಕಾಲೇಜು ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಅವುಗಳನ್ನು ಹಾಕಿದರೆ ಕಾಲೇಜಿನಲ್ಲಿ ಆಕೆ ಮಾರ್ಯಾದೆ ಹೋಗುತ್ತದೆ ಎಂದಿದ್ದರು. ಮದುವೆ ಮಾಡಿಸುವ ಭರವಸೆ ಕೊಟ್ಟಿದ್ದರಿಂದ ವೀರೇಶ್ ಫೋಟೊ ಡಿಲೀಟ್ ಮಾಡಿದ್ದ .
ಇದಾನಂತರ ಆ ದಿನವೇ ತಡರಾತ್ರಿ ವೀರೇಶ್‌ಗೆ ಫೋನ್ ಮಾಡಿದ ಪ್ರವೀಣ್, ಅಂಕಿತ ಅಳುತ್ತಿದ್ದಾಳೆ, ಮನೆಗೆ ಬಾ ನಿನ್ನ ನೋಡಬೇಕು ಅಂತಿದ್ದಾಳೆ ಎಂದು ಕರೆಸಿಕೊಂಡಿದ್ದ. ಇವರ ಯಾವ ದುರುದ್ದೇಶವೂ ತಿಳಿಯದ ವೀರೇಶ್ ಆತುರದಲ್ಲಿ ತನ್ನ ಸ್ನೇಹಿತನ ಇನ್ನೋವಾ ಕಾರನ್ನು ತೆಗೆದುಕೊಂಡು ಬಂದಿದ್ದ. ಹೊರಡುವಾಗ ತನ್ನ ತಾಯಿಗೆ ಅಂಕಿತಾಳ ಮನೆಯಿಂದ ಫೋನ್ ಬಂದಿದೆ ಹೋಗಿ ಬರುವುದಾಗಿ ಹೇಳಿದ್ದ. ಆದರೆ ದಿನ ಕಳೆದರೂ ವಾಪಸ್ ಆಗಿರಲಿಲ್ಲ. ಹೀಗಾಗಿ ಗಾಬರಿಯಾಗಿ ಮರುದಿನ ವೀರೇಶ್ ತಾಯಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು.
ಆದರೆ, ಶನಿವಾರ ಬೆಳಗ್ಗೆ ವೀರೇಶ್ ಶವ ಕಾರಿನ ಡಿಕ್ಕಿಯೊಳಗೆ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ವೀರೇಶ್ ತಾಯಿ ಮಹಾದೇವಿ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರವೀಣ್ ಮನೆಯವರೇ ವೀರೇಶ್‌ನನ್ನು ಪುಸಲಾಯಿಸಿ ಕರೆಸಿಕೊಂಡು ಮನಬಂದಂತೆ ಥಳಿಸಿ, ನಂತರ ಡಿಕ್ಕಿಯೊಳಗೆ ಕೂಡಿಹಾಕಿ ಕಾರು ಸಮೇತ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ