Site icon Vistara News

Murder case : ಹಾವೇರಿಯಲ್ಲಿ ದೊಣ್ಣೆಯಿಂದ ಹೊಡೆದು ಪತ್ನಿಯನ್ನೇ ಕೊಂದ ವೃದ್ಧ; ಶಿವಮೊಗ್ಗದಲ್ಲಿ ತಂದೆಗೆ ಚಾಕು ಹಾಕಿದ ಮಗ

murder Case

ಹಾವೇರಿ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಈ ಮಾತಿಗೆ ತದ್ವಿರುದ್ಧ ಎಂಬಂತೆ ಸಣ್ಣದಾಗಿ ಶುರುವಾದ ಜಗಳವು ವಿಕೋಪಕ್ಕೆ ತಿರುಗಿದ್ದು, ವೃದ್ಧರೊಬ್ಬರು ತಮ್ಮ ಪತ್ನಿಯನ್ನು ದೊಣ್ಣೆಯಿಂದ ಹೊಡೆದು (Murder case) ಕೊಂದಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಿವಪುರದಲ್ಲಿ ಘಟನೆ ನಡೆದಿದೆ.

ಪತಿ-ಪತ್ನಿ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ನಾಗವ್ವ (58) ಪತಿಯಿಂದಲೇ ಕೊಲೆಯಾದವರು. ಶೇಖಪ್ಪ (60) ಪತ್ನಿಯನ್ನೇ ಕೊಂದ ಆರೋಪಿಯಾಗಿದ್ದಾರೆ. ಕಳೆದ ರಾತ್ರಿ ನಾಗವ್ವ ಹಾಗೂ ಶೇಖಪ್ಪ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಿಟ್ಟಿನಲ್ಲಿ ಶೇಖಪ್ಪ ಮನೆಯಲ್ಲಿದ್ದ ದೊಣ್ಣೆಯಿಂದ ನಾಗವ್ವಳ ತಲೆಗೆ ಹೊಡೆದಿದ್ದಾರೆ. ಒಂದೇ ಏಟಿಗೆ ಕುಸಿದು ಬಿದ್ದ ನಾಗವ್ವ ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹಾನಗಲ್ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಾನಗಲ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿ ಶೇಖಪ್ಪನನ್ನು ಪೊಲೀಸರು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Accident Case : ವೃದ್ಧೆಯರಿಬ್ಬರ ದುರಂತ ಅಂತ್ಯ; ಕೆಎಸ್‌ಆರ್‌ಟಿಸಿ ಬಸ್‌, ರೈಲು ಬಡಿದು ಸಾವು

ತಂದೆಯನ್ನೇ ಕೊಂದ ಅಪ್ರಾಪ್ತ ಮಗ

ಮಗನೊಬ್ಬ ತನ್ನ ತಂದೆಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಹೊಳೆಹೊನ್ನೂರಿನ ಅರಬಿಳಚಿ ಗ್ರಾಮದಲ್ಲಿ ನಡೆದಿದೆ. ಸುಕ್ ರಾಜ್(53) ಕೊಲೆಯಾದವರು.

ಸುಕ್‌ ರಾಜ್‌ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಸುಕ್‌ ರಾಜ್‌ ತಮ್ಮ ಪತ್ನಿ ಜತೆಗೆ ಜಗಳವಾಡಿದ್ದರು. ಜಗಳ ವಿಚಾರಕ್ಕೆ ಸಿಟ್ಟಾ ಮಗ ತಂದೆಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಗಾಂಜಾ ಸೇವಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version