ಹಾವೇರಿ: ಆ ಬಾಕ್ಸ್ ತುಂಬ ಫೋನ್. ವಿವೋ , ರಿಯಲ್ ಮಿ, ಸಾಮಸಂಗ್, ಹೀಗೆ ಯಾವ ಬ್ರ್ಯಾಂಡ್ ಬೇಕಾದರೂ ಇದ್ದವು. ಹಾಗಂತ ಇದೇನು ಫೋನ್ ಮಾರಾಟ ಮಾಡುವವರ ಅಂಗಡಿಯಲ್ಲ. ಇವನ ಕಸುಬೇ ಫೋನ್ ಕದಿಯೋದು. ಇಷ್ಟೊಂದು ಫೋನ್‌ಗಳನ್ನು ನೋಡಿ ಪೊಲೀಸರೇ ಸುಸ್ತಾಗಿದ್ದಾರೆ. 28ನೇ ವಯಸ್ಸಿನಲ್ಲಿ 82 ಕದ್ದ ಫೋನ್‌ಗಳೊಂದಿಗೆ ಸಿಕ್ಕಿ ಬಿದ್ದವನ ಹೆಸರು ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದ ಆನಂದ ಈಶ್ವರ ದೊಡ್ಡಮನಿ.
28 ವರ್ಷದ ಈತನ ಕಸುಬೆ ಮೊಬೈಲ್ ಕಳ್ಳತನ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಜನನಿಬಿಡ ಸ್ಥಳಗಳಲ್ಲಿ, ಜಾತ್ರೆ, ಸಂತೆಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಈಶ್ವರ ದೊಡ್ಡಮನಿ. ಹಾವೇರಿ ಪೊಲೀಸರಿಗೆ ಈತನಿಂದ ಸಿಕ್ಕಿದ್ದು ಹತ್ತಲ್ಲ, ಇಪ್ಪತ್ತಲ್ಲ, ಬರೊಬ್ಬರಿ 82 ಫೋನ್.
ಇದನ್ನೂ ಓದಿ | ಹೋಟೆಲ್‌ನಲ್ಲಿ ಕಳ್ಳತನಕ್ಕೆ ಬಂದು ಚಿಕನ್ ಹುಡುಕಾಡಿದ, ಅದೂ ಸಿಗದೆ ವಾಪಸಾದ !
28 ವರ್ಷ ವಯಸ್ಸಿನಲ್ಲೆ 82 ಫೋನ್ ಕದ್ದ ಭೂಪನ ಬಳಿ ವಿವೋ , ರಿಯಲ್ ಮಿ, ಸಾಮಸಂಗ್ ಸೇರಿದಂತೆ ಹತ್ತಾರು ಕಂಪನಿಯ ಫೋನ್‌ಗಳಿದ್ದವು. ಇವೆಲ್ಲವುಗಳ ಬೆಲೆ ಸುಮಾರು ₹4.10 ಲಕ್ಷ. ಈತ ಕದ್ದ ಫೋನುಗಳನ್ನು ಸಾಗಿಸುತ್ತಿದ್ದಾನೆ ಎಂಭ ಖಚಿತ ದೂರಿನ ಮೇರೆಗೆ ಪೊಲೀಸರು ಈಶ್ವರನನ್ನು ಹಿಂಬಾಲಿಸಿದ್ದಾರೆ. ತಡಸ್ ಕಡೆಯಿಂದ ಹಾನಗಲ್ ಕಡೆಗೆ ಕದ್ದ ಮೊಬೈಲ್ ಇಟ್ಟುಕೊಂಡು ಈತ ಹೊರಟಿದ್ದ. ಕೆಎ27 ಇಎಂ 5033 ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನಲ್ಲಿ ಹೊರಟಿದ್ದವನನ್ನು ಬಂಕಾಪುರದ ಬಳಿ ಪೊಲೀಸರು ತಡೆದಿದ್ದಾರೆ.
ಆತನ ಬಳಿಯಿದ್ದ ರಟ್ಟಿನ ಬಾಕ್ಸ್ ತೆಗೆದು ನೋಡಿದಾಗ ಬರೊಬ್ಬರಿ 82 ಫೋನ್‌ಗಳು ಸಿಕ್ಕಿವೆ. ಹತ್ತಾರು ವರ್ಷಗಳಿಂದ ಮೊಬೈಲ್ ಕಳ್ಳತನ ಮಾಡೋದೆ ಇವರ ದಂದೆಯಾಗಿದೆ. ಹೀಗೆ ಕದ್ದ ಮೊಬೈಲ್‌ಗಳನ್ನು ವಾರದಲ್ಲಿ ಒಂದು ದಿನ ಹುಲಗಿನಕೊಪ್ಪ ಗ್ರಾಮದಲ್ಲಿ ಮಾರಾಟ ಮಾಡುತ್ತಿದ್ದ. ಈತನ ಜತೆಗೆ ದೊಡ್ಡ ಗ್ಯಾಂಗೇ ಇತ್ತು. ಈ ಜಾಲದ ಒಬ್ಬ ಕಳ್ಳ ಪೊಲೀಸರಿಗೆ ಈಗ ಸಿಕ್ಕಿದ್ದಾನೆ. ಉಳಿದವರನ್ನೂ ಹಿಡಿಯಲಾಗುತ್ತದೆ ಎಂದು ಹಾವೇರಿ ಎಸ್‌ಪಿ ಹನುಮಂತರಾಯ ತಿಳಿಸಿದ್ದಾರೆ.
ಇದನ್ನೂ ಓದಿ| ಕದ್ದ ಮೊಬೈಲ್ ಕೊಂಡೊಯ್ಯಲು ಕಾರನ್ನೇ ಕಳ್ಳತನ ಮಾಡಿದರು !