ಹಾವೇರಿ : ಈಡಿಗ, ಬಿಲ್ಲವ ಸಮುದಾಯಕ್ಕೆ ರಾಜ್ಯದಲ್ಲಿ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮಾಡುತ್ತಿದ್ದೇನೆ. ಬೇಡಿಕೆಗಳು ಈಡೇರದಿದ್ದರೆ ಉಪವಾಸ ಮಾಡುವುದಾಗಿ ಪ್ರಣವಾನಂದ ಸ್ವಾಮಿಜಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳು ಮಾಡುವ ಹೋರಾಟವನ್ನ ರಾಜ್ಯ ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಬೇರೆ ಸಮಾಜದ ಕುಲಕಸಬನ್ನ ಸರಕಾರ ನಿಲ್ಲಿಸಿಲ್ಲ. ಆದರೆ ನಮ್ಮ ಸಮಾಜವನ್ನು ಒಡೆದಾಳುವ ನೀತಿ ಮಾಡುತ್ತಿರುವುದು ಏಕೆ? ಸೇಂದಿ ತೆಗೆಯಲು ನಮ್ಮ ಸಮಾಜಕ್ಕೆ ಅವಕಾಶ ನೀಡಬೇಕು. ಬೇರೆ ಬೇರೆ ಸಮಾಜಕ್ಕೆ ನಿಗಮ ಕೊಟ್ಟಿದ್ದೀರಿ. ಆದರೆ ನಮ್ಮ ಸಮಾಜಕ್ಕೆ ಯಾವುದೆ ವ್ಯವಸ್ಥೆ ಮಾಡಲಿಲ್ಲ. ನಮ್ಮ ನಿಗಮಕ್ಕೆ ₹500 ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟರು.
ಇದನ್ನೂ ಓದಿ | ಕಾಳಿಸ್ವಾಮಿಗೆ ಮಸಿ ಬಳಿದ ಕನ್ನಡಪರ ಕಾರ್ಯಕರ್ತರು
ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ಇಬ್ಬರಿಂದ ಸಮಾಜಕ್ಕೆ ಅನುಕೂಲವಾಗಿಲ್ಲ ಎಂದು ಸ್ವಾಮೀಜಿ ವಾಗ್ದಾಳಿ ನಡೆಸಿದರು. ಈಡಿಗ, ಬಿಲ್ಲವ ಸಮುದಾಯದ ಏಳಿಗೆಗಾಗಿ ನಮ್ಮ ಬೇಡಿಕೆಗಳಿವೆ. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಗಳನ್ನು ಪೂರೈಸದೇ ಇದ್ದಲ್ಲಿ ಜೂನ್ 20ರಂದು ಕಲಬುರಗಿಯಲ್ಲಿ ಉಪವಾಸ ಮಾಡಿ, ಜೂನ್ 21 ಕಲ್ಯಾಣ ಕರ್ನಾಟಕ ಭಾಗದ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ |ನಾನು ಬದುಕಿದ್ದೇನೆ, ಬದುಕಿದ್ದೇನೆ, ಬದುಕಿದ್ದೇನೆ; ಕೈಲಾಸದಿಂದಲೇ ಘೋಷಿಸಿದ ನಿತ್ಯಾನಂದ ಸ್ವಾಮಿ ..!