Site icon Vistara News

Rama Mandir : ರಾಮನನ್ನು ಅಪಮಾನಿಸುವ ವಿಡಿಯೊ ಸ್ಟೇಟಸ್‌ ; ಮುಸ್ಲಿಂ ಯುವಕನ ಮೇಲೆ ಕೇಸ್‌

whatsapp Status muslim

ಹಾವೇರಿ: ರಾಮ ಜನ್ಮಭೂಮಿಯಲ್ಲಿ (Rama Janmabhumi) ಮಂದಿರ ನಿರ್ಮಾಣಗೊಂಡು (Rama Mandir) ಲೋಕಾರ್ಪಣೆಗೊಂಡ ಬೆನ್ನಿಗೇ ಹಲವಾರು ಮಂದಿ ರಾಮನನ್ನು ಅಪಮಾನಿಸುವ (Insulting Rama) ಹೇಳಿಕೆಗಳನ್ನು, ಫೋಟೊ, ವಿಡಿಯೊಗಳನ್ನು ಹರಿಬಿಡುವುದು ಜೋರಾಗಿದೆ. ಕೆಲವರು ಫೇಸ್‌ ಬುಕ್‌ನಲ್ಲಿ, ಇನ್ನು ಕೆಲವರು ವಾಟ್ಸ್‌ ಆಪ್‌ನಲ್ಲಿ ತಮ್ಮ ಕ್ಷುದ್ರ ಮನಸ್ಸಿನ ಭಾವನೆಗಳನ್ನು ಹರಡುತ್ತಿದ್ದಾರೆ. ಈ ನಡುವೆ ಹಾವೇರಿ ಜಿಲ್ಲೆಯ ಸವಣೂರಿನ ಯುವಕನೊಬ್ಬ ಶ್ರೀರಾಮನ ಕುರಿತು ಅವಹೇಳನ ಮಾಡುವ ವ್ಯಾಟ್ಸ್ ಆಪ್ ಸ್ಟೇಟಸ್ (Whats app status) ಹಾಕಿಕೊಂಡಿದ್ದಾನೆ.

ಹಾವೇರಿ ಜಿಲ್ಲೆಯ ಸವಣೂರು ತಾ‌ಲೂಕಿನ ತಗ್ಗಿಹಳ್ಳಿ ಗ್ರಾಮದ ಕಲಂದರ ಕಣವಿ ಎಂಬಾತನೇ ಈ ರೀತಿ ಸ್ಟೇಟಸ್‌ನಲ್ಲಿ ವಿಡಿಯೊ ಹಾಕಿಕೊಂಡು ಸವಾಲು ಎಸೆದವನು. ಆತನ ವಿರುದ್ಧ ಮಹೇಶ್ ಎಸ್ ಕೇಲೂರು ದೂರು ನೀಡಿದ್ದಾರೆ.

ವಿಡಿಯೊದಲ್ಲಿ ರಾಮನ ಮಂದಿರವನ್ನು ತೋರಿಸಲಾಗಿದೆ. ನೀವು ಇಷ್ಟು ದೊಡ್ಡ ಮಂದಿರ ಕಟ್ಟಿರಬಹುದು, ನಾವು ಅದಕ್ಕಿಂತಲೂ ದೊಡ್ಡದಾದ ಮಸೀದಿ ಕಟ್ಟುತ್ತೇವೆ. ಏಷ್ಯಾದಲ್ಲೇ ದೊಡ್ಡ ಮಸೀದಿ ನಿರ್ಮಾಣ ಮಾಡುತ್ತೇವೆ ಎಂದು ಆತ ಹೇಳಿದ್ದಾನೆ. ಪಾಕಿಸ್ತಾನದ ರಾಷ್ಟ್ರ ಧ್ವಜದ ಚಿತ್ರವಿಟ್ಟು, ಹಮ್ ಬಾಪ್ ಹೈ ತುಮಾರೆ ಎಂದು ಸ್ಟೇಟಸ್ ಇಟ್ಟುಕೊಂಡಿದ್ದಾನೆ ಈ ಯುವಕ.

ಆತ ವಕ್ಫ್‌ ಮಂಡಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಸೀದಿಯ ನೀಲನಕಾಶೆಯನ್ನು ಕೂಡಾ ಹಾಕಿದ್ದಾನೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಬರಿ ಮಸೀದಿ ಮತ್ತೆ ಎದ್ದುನಿಲ್ಲಲಿದೆ ಎಂದು ಎಫ್‌ ಬಿ ಪೋಸ್ಟ್‌!

ಕೊಪ್ಪಳ: ಒಂದು ದಿನ ಬಾಬರಿ ಮಸೀದಿ ಮತ್ತೆ (babri Masjid resurrection) ಎದ್ದು ನಿಲ್ಲಲಿದೆ ಎಂಬ ವಿವಾದಾತ್ಮಕ ಪೋಸ್ಟ್‌ (Controversial FB Post) ಹಾಕಿದ ಶಾರುಖ್‌ ಖಾನ್‌ ಎಂಬ ಯುವಕನ ವಿರುದ್ಧ ಕೊಪ್ಪಳ ನಗರ (Koppala News) ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೊಪ್ಪಳದ ಶ್ರೀಶೈಲ ನಗರದ ನಿವಾಸಿಯಾಗಿರುವ ಆಲಿಖಾನ್‌ ಯಲಬುರ್ಗಾ ಎಂಬವರ ಪುತ್ರನಾಗಿರುವ 25 ವರ್ಷದ ಶಾರುಖ್‌ ಕಾನ್‌ ವಿರುದ್ಧ ಸಂತೋಷ್‌ ಡಿ. ಹಳ್ಳೂರ್‌ ಅವರು ನೀಡಿದ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಪ್ಲಂಬಿಂಗ್‌ ಕೆಲಸ ಮಾಡುತ್ತಿರುವ ಶಾರುಖ್‌ ಖಾನ್‌ ತನ್ನ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಮತ್ತು ಸಮಾಜದ ಶಾಂತಿ ಕದಡುವ ರೀತಿಯ ಪೋಸ್ಟ್‌ ಹಾಕಿದ್ದಾನೆ ಎಂದು ಪೊಲೀಸರು ಎಫ್‌ ಐಆರ್‌ ದಾಖಲಿಸಿಕೊಂಡಿದ್ದಾರೆ.

ಶಾರುಖ್‌ ಖಾನ್‌ ಪೋಸ್ಟ್‌ನಲ್ಲಿ ಏನಿದೆ?

ಮಂದಿರ ಒಂದಲ್ಲ ನೂರು, ಸಾವಿರ ಕಟ್ಟಿಕೊಳ್ಳಲಿ. ನಮ್ಮ ವಿರೋಧವಿಲ್ಲ. ಆದರೆ, ಮಸೀದಿಯನ್ನು ಕೆಡವಿ ಅದರ ಮೇಲೆ ನಿರ್ಮಿಸುವ ಮಂದಿರಕ್ಕೆ ನಮ್ಮ ವಿರೋಧವಿದೆ. ಇನ್ಷಾ ಅಲ್ಲಾ.. ಒಂದು ದಿನ ಬಾಬರಿ ಮಸೀದಿ ಎದ್ದು ನಿಲ್ಲಲಿದೆ ಎಂದು ಈ ಶಾರುಖ್‌ ಖಾನ್‌ ಪೋಸ್ಟ್‌ ಮಾಡಿದ್ದಾನೆ. ಜನವರಿ 20ರಂದು ಫೇಸ್‌ಬುಕ್‌ ನಲ್ಲಿ ಪೋಸ್ಟ್‌. ಮಾಡಿರುವ ಈ ಹೇಳಿಕೆ ಸಾಮಾಜಿಕ ಶಾಂತಿಯನ್ನು ಕದಡಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊಪ್ಪಳದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Rama Mandir : ಆ ಜೋಡಿಯ ಮದುವೆಗೆ ರಾಮನೇ ಸಾಕ್ಷಿ, ಕೈಯಲ್ಲೇ ಎರಡು ಕಿ.ಮೀ. ನಡೆದ ಯುವಕ!

‌ ರಾಮಮಂದಿರ ಮೇಲೆ ಪಾಕ್‌ ಧ್ವಜ; ಫೋಟೊ ಹರಿಬಿಟ್ಟ ಯುವಕ ಅರೆಸ್ಟ್

ಗದಗ: ರಾಮಮಂದಿರದ (Ram Mandir) ಮೇಲೆ ಪಾಕಿಸ್ತಾನ ಧ್ವಜ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಟೊ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮುಸ್ಲಿಂ ಯುವಕನನ್ನು ಆಕ್ಷೇಪಾರ್ಹ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ತೌಜುದ್ದೀನ್ ದಫೇದಾರ್ ಬಂಧಿತ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಧರ್ಮದ‌ ಸಂಕೇತವಿರುವ ಧ್ವಜದ ಚಿತ್ರ ಹಾಕಿ ಬಾಬರಿ ಮಸೀದಿ ಎಂದು ಬರೆದು ಯುವಕ ಶೇರ್‌ ಮಾಡಿದ್ದ. ಹೀಗಾಗಿ ತಕ್ಷಣ ತೌಜುದ್ದೀನ್‌ನನ್ನು ಗಜೇಂದ್ರಗಡ ಪೊಲೀಸರು ಭಾನುವಾರ ರಾತ್ರಿ ವಶಕ್ಕೆ ಪಡೆದಿದ್ದರು. ಆದರೆ, ಇದೀಗ ಆತನನ್ನು ಬಂಧಿಸಲಾಗಿದ್ದು, ಆತನಿಗೆ ಯಾವುದಾದರೂ ಸಂಘಟನೆ ಜತೆ ಸಂಬಂಧವಿದೆಯೇ ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ಆರೋಪಿಯು ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ನೋಡಿದ್ದೆ ಹಾಗೂ ಆಕಸ್ಮಿಕವಾಗಿ ಅದನ್ನು ಹಂಚಿಕೊಂಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೋಮುಗಲಭೆ‌ ಸೃಷ್ಟಿಸಲು ಸಂಚು ಹೂಡಿದ ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಿಂದು ಸಂಘಟನೆಗಳು ಒತ್ತಾಯಿಸಿವೆ.

Exit mobile version