Site icon Vistara News

Road Accident : ಲಾರಿ ಧಾವಂತಕ್ಕೆ ಬೈಕ್‌ ಪುಡಿಪುಡಿ; ನಡುರಸ್ತೆಯಲ್ಲಿ ನರಳಾಡಿ ಪ್ರಾಣ ಬಿಟ್ಟ ಮೂವರು

Road accident Haveri

ಹಾವೇರಿ: ಹಾವೇರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಆಪಘಾತ (Road Accident) ಒಂದೇ ಕುಟುಂಬದ ಮೂವರನ್ನು ಬಲಿ (three of one family dead) ಪಡೆದುಕೊಂಡಿದೆ. ಪುನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Pune-Bangalore High Way) ಬರುವ ಹಾವೇರಿ ಜಿಲ್ಲೆಯ (Haveri News) ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರು ಬಳಿ ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ದುರಂತ ನಡೆದಿದೆ.

ಒಬ್ಬ ಪುರುಷ, ಒಬ್ಬ ಮಹಿಳೆ ಮತ್ತು ಒಂದು ಮಗು ಈ ಘಟನೆಯಲ್ಲಿ ಮೃತಪಟ್ಟಿದ್ದು, ಇನ್ನೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಇವರು ಒಂದೇ ಕುಟುಂಬದವರಾಗಿದ್ದು, ತಂದೆ-ತಾಯಿ ಮತ್ತು ಇಬ್ಬರು ಮಕ್ಕಳಿರಬೇಕು ಎಂದು ಪ್ರಾಥಮಿಕವಾಗಿ ನಂಬಲಾಗಿದೆ.

ಮೊಟೇಬೆನ್ನೂರು ಬಳಿ ಬೈಕ್‌ನಲ್ಲಿ ಇಬ್ಬರು ಮಕ್ಕಳು ಮತ್ತು ಇಬ್ಬರು ಹಿರಿಯರು ಸಾಗುತ್ತಿದ್ದಾಗ ಲಾರಿಯೊಂದು ಹಿಂಬದಿಯಿಂದ ಗುದ್ದಿದೆ. ಘಟನೆಯ ತೀವ್ರತೆ ಎಷ್ಟಿತ್ತೆಂದರೆ, ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಮೂವರು ನರಳಾಡಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಲಾರಿ ಗುದ್ದಿದ ರಭಸಕ್ಕೆ ಮೃತದೇಹಗಳು ಛಿದ್ರ ಛಿದ್ರವಾಗಿವೆ.

Road accident Haveri1

ಅವರ ದೇಹಗಳು ಎಷ್ಟರ ಮಟ್ಟಿಗೆ ಛಿದ್ರವಾಗಿವೆ ಎಂದರೆ ಅವುಗಳನ್ನು ಗುರುತು ಪತ್ತೆ ಹಚ್ಚುವುದಕ್ಕೇ ಹರಸಾಹಸ ಪಡಬೇಕಾಗಿದೆ. ಬೈಕ್‌ ಮತ್ತು ಲಾರಿಗಳೆರಡೂ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದವು.

ಅಪಘಾತದಿಂದ ಮೂವರು ಪ್ರಾಣ ಕಳೆದುಕೊಂಡಿದ್ದರಿಂದ ಭಯಗೊಂಡ ಲಾರಿ ಚಾಲಕ ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತರ ಗುರುತು ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ. ಬೈಕ್‌ನ ನಂಬರ್‌ ಆಧಾರದಲ್ಲಿ ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾರೆ.

ಈ ಬೈಕ್‌ ಮಹಮ್ಮದ್‌ ಆಸಿಫ್‌ ಮಲ್ಲಾಡ್‌ ಎಂಬವರಿಗೆ ಸೇರಿದ್ದು ಎಂಬ ಬಗ್ಗೆ ಆರ್‌ಸಿ ಬುಕ್‌ ದಾಖಲೆ ಹೇಳಿದೆ. ಇವರು ಹಾವೇರಿಯ ಸಿದ್ಧನೂರು ನಿವಾಸಿ. ಆದರೆ, ಅವರದೇ ಬೈಕ್‌ನಲ್ಲಿ ಬಂದಿದ್ದಾರಾ ಎನ್ನುವ ಬಗ್ಗೆ ಪರಿಶೀಲಿಸಬೇಕಾಗಿದೆ.

ಇದನ್ನೂ ಓದಿ : Murder Case : ಜಮೀನು ವಿವಾದ; ಹಾಸನದಲ್ಲಿ ತಮ್ಮನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಅಣ್ಣ

Road Accident : ಬೈಕ್‌ಗಳ ಮುಖಾಮುಖಿ ಡಿಕ್ಕಿ; ಮದುವೆಗೆ ತೆರಳಿದ್ದ ತಾಯಿ- ಮಗ ಮೃತ್ಯು

ಬಾಗಲಕೋಟೆ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿ ಮದುವೆಗೆ ತೆರಳಿದ್ದ ತಾಯಿ ಮತ್ತು ಮಗ ದಾರುಣವಾಗಿ ಮೃತಪಟ್ಟಿದ್ದಾರೆ (Mother and son dead). ಒಂದು ಮಗು ಸೇರಿ ಮೂವರಿಗೆ ಗಾಯಗಳಾಗಿವೆ. ಬಾಗಲಕೋಟೆ ಜಿಲ್ಲೆಯ (Bagalakote news) ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಹೊರವಲಯದಲ್ಲಿ ಈ ಅವಘಡ ಸಂಭವಿಸಿದೆ.

ಹನಮವ್ವ ಬಸಪ್ಪ ಕಠಾಣಿ (63), ಕೆಂಚಪ್ಪ ಬಸಪ್ಪ ಕಠಾಣಿ (32) ಮೃತ ತಾಯಿ ಮತ್ತು ಮಗ. ಹನಮವ್ವ ಮತ್ತು ಕೆಂಚಪ್ಪ ಅವರು ಮುಧೋಳದಿಂದ ಹಲಗಲಿ ಕಡೆ ಹೊರಟಿದ್ದರು. ಅವರು ಒಂದು ಮದುವೆ ಕಾರ್ಯಕ್ಕೆ ತೆರಳಿದ್ದರು. ಈ ನಡುವೆ, ಹಲಗಲಿಯಿಂದ ತೋಟಕ್ಕೆ ಮತ್ತೊಂದು ಬೈಕ್ ತೆರಳುತ್ತಿತ್ತು. ಈ ಎರಡೂ ಬೈಕ್‌ಗಳು (Bikes Rams each other) ಗ್ರಾಮದ ಹೊರವಲಯದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ.

ಘಟನೆಯಲ್ಲಿ ತಾಯಿ ಮತ್ತು ಮಗ ಮೃತಪಟ್ಟರೆ, ಮತ್ತೊಂದು ಬೈಕ್ ನಲ್ಲಿದ್ದ ಮಗು ಸೇರಿ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಧೋಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Exit mobile version