ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೆಡೆ ಸಾಹಿತ್ಯ ಚಿಂತನ, ಮತ್ತೊಂದೆಡೆ ಪುಸ್ತಕ ಮಾರಾಟ ನಡೆಯುತ್ತಿದ್ದರೆ ಮಗದೊಂದೆಡೆ ಸೆಲ್ಫಿ ಕ್ರೇಜ್.
ಸಮ್ಮೇಲನಕ್ಕಾಗಮಿಸಿದ ಸಾರ್ವಜನಿಕರು, ಆವರಣದಲ್ಲಿರಿಸಿರುವ ರಂಗುರಂಗಿನ ಪ್ರತಿಮೆಗಳ ಬಳಿ ನಿಂತು ಫೋಟೊ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಅದರಲ್ಲಿ ಪುನೀತ್ ರಾಜಕುಮಾರ್ ಅವರದ್ದೇ ಎರಡು ಪ್ರತಿಮೆಗಳಿರುವುದು, ಪವರ್ ಸ್ಟಾರ್ ಕೊನೆಯುಸಿರೆಳೆದು ವರ್ಷ ಕಳೆದರೂ ಕ್ರೇಜ್ ಕಡಿಮೆ ಆಗಿಲ್ಲ ಎನ್ನುವುದನ್ನು ತೋರಿಸುತ್ತದೆ.