Site icon Vistara News

Student Death : ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಸೂಸೈಡ್‌; ಹೂತಿಟ್ಟ ಶವವನ್ನು ಹೊರತೆಗೆದ ಪೊಲೀಸರು!

Student death

ಹಾವೇರಿ: ಹತ್ತು ದಿನಗಳ ಹಿಂದೆ ಡೆತ್‌ನೋಟ್‌ (Death Note) ಬರೆದಿಟ್ಟು ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಳು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಘಟನೆ (Student Death) ನಡೆದಿದೆ. ಅರ್ಚನಾ ಗೌಡಣ್ಣನವರ (16) ಮೃತ ದುರ್ದೈವಿ.

9ನೇ ತರಗತಿಯಲ್ಲಿ ಓದುತ್ತಿದ್ದ ಅರ್ಚನಾ ಜೂನ್ 2ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಡೆತ್‌ನೋಟ್‌ನಲ್ಲಿ ಸಾವಿಗೆ ಕಾರಣವನ್ನು ಉಲ್ಲೇಖಿಸಿದ್ದಳು. ಹಿರೇಕೆರೂರು ತಾಲೂಕಿನ ದೂದಿಹಳ್ಳಿಯ ವಸತಿ ಶಾಲೆಯಲ್ಲಿ ಅರ್ಚನಾ ವಿದ್ಯಾಭ್ಯಾಸ ಮಾಡುತ್ತಿದ್ದಳು. ಓದಿನಲ್ಲಿ ಮುಂದಿದ್ದೇ ಈಕೆಗೆ ಕಂಟಕವಾಯಿತಾ ಎಂಬ ಅನುಮಾನ ಮೂಡುತ್ತಿದೆ.

ಇದನ್ನೂ ಓದಿ: Road Accident : ನಿದ್ರೆ ಮಂಪರಿನಲ್ಲಿ ಡಿವೈಡರ್‌ಗೆ ಗುದ್ದಿ ಪಲ್ಟಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌; ನಜ್ಜುಗುಜ್ಜಾದ ಚಾಲಕ ಸಾವು

ಹಿಂದಿ ಶಿಕ್ಷಕನ ಪತ್ನಿ ಕಾಟ!

ಮೊರಾರ್ಜಿ ವಸತಿ ಶಾಲಾ ಶಿಕ್ಷಕನೊರ್ವನ ಕುಟುಂಬದಿಂದ ಕಿರುಕುಳ ಆರೋಪ ಕೇಳಿ ಬಂದಿದೆ. ಮೊರಾರ್ಜಿ ಶಾಲೆಯ ಹಿಂದಿ ಶಿಕ್ಷಕನಾಗಿದ್ದ ಆರಿತವುಲ್ಲಾ ಮಗಳು ಝೋಯಾ ಹಾಗೂ‌ ಅರ್ಚನಾ ಇಬ್ಬರೂ ಕ್ಲಾಸ್‌ಮೇಟ್ಸ್ ಆಗಿದ್ದರು. ಓದಿನಲ್ಲಿ ಝೋಯಾಗಿಂತ ಅರ್ಚನಾ ಮುಂದಿದ್ದಳು. ಇದೇ ಕಾರಣದಿಂದ ಝೋಯಾ ತಾಯಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ನನ್ನ ಮಗಳಿಗಿಂತ ನೀನು ಯಾಕೆ ಓದಿನಲ್ಲಿ ಮುಂದೆ ಇದ್ದಿಯಾ ಎಂದು ಕಿರುಕುಳ ನೀಡುತ್ತಿದ್ದರಂತೆ. ಇದರ ಜತೆಗೆ ಅರ್ಚನಾ ವೈಯಕ್ತಿಕ ಕಾರಣಗಳನ್ನು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

ಸದ್ಯ ವಿದ್ಯಾರ್ಥಿನಿ ಸಾವಿನ ಬಗ್ಗೆ ಸಂಶಯ ಮೂಡಿದ್ದು, ನಿನ್ನೆ ಗುರುವಾರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಜತೆಗೆ ಹಿರೇಕೇರೂರು ತಾಲೂಕು ಆಲದಕಟ್ಟಿ ಗ್ರಾಮದಲ್ಲಿ ಹೂತಿಟ್ಟಿದ್ದ ವಿದ್ಯಾರ್ಥಿನಿ ಶವ ಹೊರ ತೆಗೆದಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯದೆ ಇರುವುದರಿಂದ ಹಾವೇರಿ ಉಪ ವಿಭಾಗಾಧಿಕಾರಿ ಚನ್ನಪ್ಪ ನೇತೃತ್ವದಲ್ಲಿ ವಿದ್ಯಾರ್ಥಿನಿ ಮೃತದೇಹ ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪ್ಲೊರೆನ್ಸಿಕ್ ತಜ್ಞರು ,ವಿದ್ಯಾರ್ಥಿನಿ ಸಂಬಂಧಿಕರು ಭಾಗಿಯಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version